ಸರ್ಕಾರಿ ಪ್ರೌಢಶಾಲೆ ಅರಸೀಕೆರೆಯಲ್ಲಿ ಚಾಲುಕ್ಯ ಫೌಂಡೇಶನ್, ದಾಸನಪುರ ಬೆಂಗಳೂರು, ಆರೋಗ್ಯ ಇಲಾಖೆ ಪಾವಗಡ ರವರ ಸಂಯುಕ್ತ ಆಶ್ರಯದಲ್ಲಿ ರಕ್ತದ ಗುಂಪು ಪತ್ತೆ ಪರೀಕ್ಷೆ ಮತ್ತು ಹದಿಹರೆಯದವರ ಆರೋಗ್ಯ ಮತ್ತು ಸ್ವಾಸ್ಥ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸುಮಾರು 120 ವಿದ್ಯಾರ್ಥಿಗಳಿಗೆ ರಕ್ತದ ಗುಂಪು ಪರೀಕ್ಷೆ ಮತ್ತು ಹದಿಹರೆಯದವರ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವನ್ನು ಹಿರಿಯ ಮತ್ತು ಕಿರಿಯ ಆಪ್ತ ಸಮಾಲೋಚಕರಿಂದ ಆಪ್ತ ಸಮಾಲೋಚನೆ ಮಾಡಿಸಲಾಯಿತು. ಕಾರ್ಯಕ್ರಮವನ್ನು ನಡೆಸಿಕೊಟ್ಟ ಚಾಲುಕ್ಯ ಫೌಂಡೇಶನ್ ರವರಿಗೆ ಧನ್ಯವಾದಗಳು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕರಾದ ರಾಮಚಂದ್ರಪ್ಪ ಕೆ., ಶಿಕ್ಷಕರಾದ ರೇಣುಕರಾಜ್ ಜಿ.ಹೆಚ್., ಹನುಮೇಶ್ ಎನ್., ಮೋಹನ್ ಕುಮಾರ್.ಜಿ.ಕೆ., ಅಭಿಷೇಕ್, ಶಿಕ್ಷಕಿಯರಾದ ವಿಮಲಾ ಆರ್., ರಶ್ಮಿ ಸಿ.ಎಸ್., ಮಾನಸ ಮತ್ತು ಶ್ರೀ ಲಕ್ಷ್ಮೀ , ಉಮಾಪತಿ, ಆರೋಗ್ಯ ಇಲಾಖೆಯ ಹನುಮಂತರಾಜು, ಇಂದಿರಾ ಮತ್ತಿತರರು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx