nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪ್ರಜ್ವಲ್ ರೇವಣ್ಣಗೆ ಜೈಲು ಶಿಫ್ಟ್‌; ಪರಪ್ಪನ ಅಗ್ರಹಾರದಿಂದ ಹಿಂಡಲಗಾಗೆ ಸ್ಥಳಾಂತರಕ್ಕೆ ಆದೇಶ! ಕಾರಣವೇನು?

    October 10, 2026

    ಮಹಾಲಯ ಅಮಾವಾಸ್ಯೆ: ಈ ತಪ್ಪುಗಳನ್ನು ಮಾಡಬೇಡಿ! ಪಿತೃಗಳಿಗೆ ತರ್ಪಣ ನೀಡುವಾಗ ಏನು ಪಾಲಿಸಬೇಕು?

    October 10, 2026

    ದೆವ್ವಗಳೇಕೆ ರಾತ್ರಿ ಹೊತ್ತಲ್ಲೇ ಕಾಣಿಸುತ್ತವೆ? ಬೆಚ್ಚಿಬೀಳಿಸುವ ಅಚ್ಚರಿಯ ಸಂಗತಿ ಇಲ್ಲಿದೆ ನೋಡಿ…

    October 10, 2026
    Facebook Twitter Instagram
    ಟ್ರೆಂಡಿಂಗ್
    • ಪ್ರಜ್ವಲ್ ರೇವಣ್ಣಗೆ ಜೈಲು ಶಿಫ್ಟ್‌; ಪರಪ್ಪನ ಅಗ್ರಹಾರದಿಂದ ಹಿಂಡಲಗಾಗೆ ಸ್ಥಳಾಂತರಕ್ಕೆ ಆದೇಶ! ಕಾರಣವೇನು?
    • ಮಹಾಲಯ ಅಮಾವಾಸ್ಯೆ: ಈ ತಪ್ಪುಗಳನ್ನು ಮಾಡಬೇಡಿ! ಪಿತೃಗಳಿಗೆ ತರ್ಪಣ ನೀಡುವಾಗ ಏನು ಪಾಲಿಸಬೇಕು?
    • ದೆವ್ವಗಳೇಕೆ ರಾತ್ರಿ ಹೊತ್ತಲ್ಲೇ ಕಾಣಿಸುತ್ತವೆ? ಬೆಚ್ಚಿಬೀಳಿಸುವ ಅಚ್ಚರಿಯ ಸಂಗತಿ ಇಲ್ಲಿದೆ ನೋಡಿ…
    • ಆಯುರ್ವೇದ, ಹೋಮಿಯೋಪತಿ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ: ಕೆಇಎ ಅಧಿಸೂಚನೆ
    • ‘ಕಲ್ಪತರು’ ಬ್ರ್ಯಾಂಡ್ ಮತ್ತು ಲೋಗೋ ಬಿಡುಗಡೆ: ತುಮಕೂರಿನ ಮಹಿಳೆಯರಿಂದ, ನಮ್ಮ ನಾಡು ನಮ್ಮ ಹೆಮ್ಮೆ
    • ದಸರಾ-2026ರ ಪಂಜಿನ ಕವಾಯತು ಕಾರ್ಯಕ್ರಮದ ಉಚಿತ ನೋಂದಣಿ ವೆಬ್‌ ಸೈಟ್‌ ಗೆ ಚಾಲನೆ
    • ಕೆಇಎ ಯುಜಿ ನೀಟ್ — 2026: ವೈದ್ಯಕೀಯ ಸೀಟುಗಳ ಆನ್‌ ಲೈನ್ ಸ್ಟ್ರೇ ವೇಕೆನ್ಸಿ ಸುತ್ತು ಪ್ರಕಟ; ಅಕ್ಟೋಬರ್ 13 ರಿಂದ ಹೊಸ ನೋಂದಣಿ ಆರಂಭ
    • ಮಧ್ಯರಾತ್ರಿ ನಾನಾ ಪಾಟೇಕರ್ ಅಂತ್ಯಸಂಸ್ಕಾರ; ತಡವಾಗಿದ್ದೇಕೆ? ಮಗ ಮಲ್ಹಾರ್ ನೀಡಿದ ಸ್ಪಷ್ಟನೆ ಇಲ್ಲಿದೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗ್ರಾಮೀಣ ವಿದ್ಯಾರ್ಥಿಗಳು ಸಂಶೋಧನೆ ಕೈಗೊಳ್ಳಲು ಕರೆ: ಪ್ರೊ.ಬಸವರಾಜ ಪದ್ಮಶಾಲಿ
    ತುಮಕೂರು March 28, 2025

    ಗ್ರಾಮೀಣ ವಿದ್ಯಾರ್ಥಿಗಳು ಸಂಶೋಧನೆ ಕೈಗೊಳ್ಳಲು ಕರೆ: ಪ್ರೊ.ಬಸವರಾಜ ಪದ್ಮಶಾಲಿ

    By adminMarch 28, 2025No Comments1 Min Read
    Spectroscopy

    ತುಮಕೂರು: ಪ್ರತಿನಿತ್ಯ ಮನುಷ್ಯರು ಬಳಸುವ ಎಲ್ಲಾ ಔಷಧಿಗಳಲ್ಲಿರುವ ರಾಸಾಯನಿಕಗಳನ್ನು ಆವಿಷ್ಕರಿಸುವಲ್ಲಿ ಹಾಗೂ ಅವುಗಳ ರಚನೆಯನ್ನು ಅಧ್ಯಯನ ಮಾಡುವಲ್ಲಿ ಸ್ಪೆಕ್ಟ್ರೋಸ್ಕೋಪಿ ಅತಿ ಅವಶ್ಯವಾದ ಪಾತ್ರವನ್ನು ವಹಿಸುತ್ತದೆ. ಅಂತಹ ಸ್ಪೆಕ್ಟ್ರೋಸ್ಕೋಪಿ ಕ್ಷೇತ್ರದ ಮೂಲತತ್ವಗಳು ಹಾಗೂ ನಿರಂತರವಾಗಿ ನಡೆಯುತ್ತಿರುವ ಆವಿಷ್ಕಾರಗಳ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ಅತ್ಯಗತ್ಯ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಬಸವರಾಜ ಪದ್ಮಶಾಲಿ ತಿಳಿಸಿದರು.

    ತುಮಕೂರು ವಿಶ್ವವಿದ್ಯಾನಿಲಯದ ಸಾವಯವ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಗುರುವಾರ ಆಯೋಜಿಸಿದ್ದ ‘ಸ್ಪೆಕ್ಟ್ರೋಸ್ಕೋಪಿ ಟೆಕ್ನಿಕ್ಸ್’ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

    ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ.ಮನೋಹರ್ ಶಿಂದೆ ಮಾತನಾಡಿ, ಸ್ಪೆಕ್ಟ್ರೋಸ್ಕೋಪಿ ವಿಷಯವು ರಾಸಾಯನಿಕ ತಜ್ಞರ ದೈನಂದಿನ ಜೀವನಾಡಿಯಾಗಿದ್ದು, ಮನುಷ್ಯರಿಗೆ ಸಹಕಾರಿಯಾಗಿರುವ ಹಲವಾರು ಕ್ಷೇತ್ರಗಳಲ್ಲಿ ತುಂಬ ಉಪಯುಕ್ತವಾಗಿದೆ ಎಂದು ಹೇಳಿದರು.

    ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ರವೀಂದ್ರ ಕಾಂಬ್ಳೆ ಮಾತನಾಡಿ ಸ್ಪೆಕ್ಟ್ರೋಸ್ಕೋಪಿಯು ರಸಾಯನಶಾಸ್ತ್ರದ ಆತ್ಮವಾಗಿದೆ. ಗ್ರಾಮೀಣ ಪ್ರದೇಶವನ್ನು ಬಿಟ್ಟು ಬರಲು ವಿದ್ಯಾರ್ಥಿಗಳು ಮನಸ್ಸು ಮಾಡುತ್ತಿಲ್ಲವಾದ್ದರಿಂದ ಇಂತಹ ವಿಷಯಗಳಲ್ಲಿ ಹೆಚ್ಚಿನ ಸಂಶೋಧನೆ ನಡೆಯುತ್ತಿಲ್ಲ. ವಿದ್ಯಾರ್ಥಿಗಳು ಅಂತಹ ಮನಸ್ಥಿತಿಯಿಂದ ಹೊರಬಂದು ಮುಕ್ತವಾದ ಪ್ರಪಂಚವನ್ನು ನೋಡಬೇಕಿದೆ. ಕೃತಕ ಬುದ್ಧಿಮತ್ತೆಯನ್ನು ರಸಾಯನಶಾಸ್ತ್ರ ವಿಷಯದಲ್ಲಿ ಪರಿಣಾಮಕಾರಿಯಾಗಿ ಬಳಸುವ ಅವಶ್ಯಕತೆ ಇದೆ ಎಂದರು.

    ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಶೇಟ್ ಪ್ರಕಾಶ್ ಎಂ. ಮಾತನಾಡಿ, ರಸಾಯನಶಾಸ್ತ್ರವು ಕಬ್ಬಿಣದ ಕಡಲೆಯಲ್ಲ. ಗಮನವಿಟ್ಟು ಅಧ್ಯಯನ ನಡೆಸಿದರೆ ಎಲ್ಲವೂ ಸುಲಭ. ಎಲ್ಲ ಕ್ಷೇತ್ರಗಳಿಗೂ ಈ ವಿಷಯ ಅನಿವಾರ್ಯವಾಗಿದೆ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ಇದರ ಕುರಿತದ ಪ್ರಶ್ನೆಗಳು ಇರುತ್ತವೆ. ತರಗತಿಗಳ ಜೊತೆಗೆ ಪ್ರಯೋಗಾಲಯಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

    ಸಾವಯವ ರಸಾಯನಶಾಸ್ತ್ರ ವಿಭಾಗದ ಸಂಯೋಜಕ ಡಾ.ಡಿ.ಸುರೇಶ್, ಪ್ರಾಧ್ಯಾಪಕ ಡಾ.ಎಸ್.ಶ್ರೀನಿವಾಸ, ಡಾ. ಅರುಣ್ ಕುಮಾರ್, ಡಾ. ನರೇಂದ್ರ ಮತ್ತಿತರರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

     

    admin
    • Website

    Related Posts

    ಮಹಾಲಯ ಅಮಾವಾಸ್ಯೆ: ಈ ತಪ್ಪುಗಳನ್ನು ಮಾಡಬೇಡಿ! ಪಿತೃಗಳಿಗೆ ತರ್ಪಣ ನೀಡುವಾಗ ಏನು ಪಾಲಿಸಬೇಕು?

    October 10, 2026

    ‘ಕಲ್ಪತರು’ ಬ್ರ್ಯಾಂಡ್ ಮತ್ತು ಲೋಗೋ ಬಿಡುಗಡೆ: ತುಮಕೂರಿನ ಮಹಿಳೆಯರಿಂದ, ನಮ್ಮ ನಾಡು ನಮ್ಮ ಹೆಮ್ಮೆ

    October 10, 2026

    ದಸರಾ-2026ರ ಪಂಜಿನ ಕವಾಯತು ಕಾರ್ಯಕ್ರಮದ ಉಚಿತ ನೋಂದಣಿ ವೆಬ್‌ ಸೈಟ್‌ ಗೆ ಚಾಲನೆ

    October 10, 2026

    Comments are closed.

    Our Picks

    ಮಧ್ಯರಾತ್ರಿ ನಾನಾ ಪಾಟೇಕರ್ ಅಂತ್ಯಸಂಸ್ಕಾರ; ತಡವಾಗಿದ್ದೇಕೆ? ಮಗ ಮಲ್ಹಾರ್ ನೀಡಿದ ಸ್ಪಷ್ಟನೆ ಇಲ್ಲಿದೆ

    October 10, 2026

    ನಾನಾ ಪಾಟೇಕರ್ ಆಸ್ತಿ–ಪಾಸ್ತಿ ಎಷ್ಟು ಗೊತ್ತಾ? ಅವರ ಕುಟುಂಬದ ಬಗ್ಗೆ ಇಲ್ಲಿದೆ ರಹಸ್ಯಕರ ಮಾಹಿತಿ!

    October 9, 2026

    ಹಿರಿಯ ನಟ ನಾನಾ ಪಾಟೇಕರ್ ನಿಧನ: ಪ್ರಧಾನಿ ಮೋದಿ, ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರಿಂದ ಸಂತಾಪ

    October 8, 2026

    50 ಪೈಸೆ ನಾಣ್ಯ ಇನ್ನೂ ಮಾನ್ಯವೇ? RBI ನಿಯಮ ತಿಳಿದರೆ ಅಚ್ಚರಿಯಾಗುತ್ತೆ!

    October 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಪ್ರಜ್ವಲ್ ರೇವಣ್ಣಗೆ ಜೈಲು ಶಿಫ್ಟ್‌; ಪರಪ್ಪನ ಅಗ್ರಹಾರದಿಂದ ಹಿಂಡಲಗಾಗೆ ಸ್ಥಳಾಂತರಕ್ಕೆ ಆದೇಶ! ಕಾರಣವೇನು?

    October 10, 2026

    ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ…

    ಮಹಾಲಯ ಅಮಾವಾಸ್ಯೆ: ಈ ತಪ್ಪುಗಳನ್ನು ಮಾಡಬೇಡಿ! ಪಿತೃಗಳಿಗೆ ತರ್ಪಣ ನೀಡುವಾಗ ಏನು ಪಾಲಿಸಬೇಕು?

    October 10, 2026

    ದೆವ್ವಗಳೇಕೆ ರಾತ್ರಿ ಹೊತ್ತಲ್ಲೇ ಕಾಣಿಸುತ್ತವೆ? ಬೆಚ್ಚಿಬೀಳಿಸುವ ಅಚ್ಚರಿಯ ಸಂಗತಿ ಇಲ್ಲಿದೆ ನೋಡಿ…

    October 10, 2026

    ಆಯುರ್ವೇದ, ಹೋಮಿಯೋಪತಿ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ: ಕೆಇಎ ಅಧಿಸೂಚನೆ

    October 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.