ತುಮಕೂರು: ದಲಿತ ಬಾಲಕನಿಂದ ಮಲ ಸ್ವಚ್ಚಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ವಿವಿ ವಾವಾ ಅವರನ್ನು ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ನೇತೃತ್ವದ ತಂಡ ಭೇಟಿಯಾಗಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಲಾಯಿತು.
ತುಮಕೂರಿನ ಖಾಸಗಿ ಹೋಟೆಲ್ ಗೆ ಆಗಮಿಸಿದ ವಿವಿ ವಾವಾ ಅವರಿಗೆ ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ನೇತೃತ್ವದ ತಂಡ ಭೇಟಿಯಾಗಿ ದಲಿತ ಬಾಲಕನಿಂದ ಮಲ ಸ್ವಚ್ಚಗೊಳಿಸಿದ ಪ್ರಕರಣ ಕುರಿತಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದರು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಓಬಳೇಶ್ ಘಟನೆಯನ್ನ ವಾವಾ ಅವರಿಗೆ ಸವಿಸ್ತಾರವಾಗಿ ವಿವರಿಸಿ ಎಫ್ ಐ ಆರ್ ನಲ್ಲಿನ ಲೋಪದೋಷಗಳನ್ನ ವಿವರಿಸಿದರು.
ಜೆಟ್ಟಿ ಅಗ್ರಹಾರ ನಾಗರಾಜು ಮಾತನಾಡಿ, ಪ್ರಕರಣವನ್ನ ಮುಚ್ಚಿಹಾಕುವ ಯತ್ನ ನಡೆದಿದೆ, ಎಫ್ ಐ ಆರ್ ನಲ್ಲಿ ಬಾಲಕಾರ್ಮಿಕ ಆಕ್ಟ್, ಹಾಗೂ ಅಟ್ರಾಸಿಟಿ ಆಕ್ಟ್ ಗಳನ್ನ ಉಲ್ಲೆಖಿಸಿಲ್ಲ, ಸರ್ಕಾರ ಈ ಪ್ರಕಣವನ್ನ ಗಂಭೀರವಾಗಿ ಪರಿಗಣಿಸುತ್ತಿಲ್ಲ ಹಾಗಾಗಿ ದಯವಿಟ್ಟು ತಾವು ಕೊರಟಗೆರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ದಲಿತ ಸಮುದಾಯಕ್ಕೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.
ಇದೆ ಸಂದರ್ಭದಲ್ಲಿ ಮುಖಂಡರಾದ ದಾಡಿ ವೆಂಕಟೇಶ್ ಮೂರ್ತಿ, ಜಟ್ಟಿ ಅಗ್ರಹಾರ ನಾಗರಾಜು, ಅರುಣ್ ಕೃಷ್ಣಯ್ಯ ಕರ್ನಾಟಕ ಕಾಡುಗೊಲ್ಲರ ಪರಿಷತ್ ರಾಜ್ಯ ಅದ್ಯಕ್ಷ, ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಸೊರೆಕುಂಟೆ ಯೋಗಿಶ್ , ರಘು ದಾಸಲಕುಂಟೆ ಮತ್ತಿತ್ತರು ಉಪಸ್ಥಿತರಿದ್ದರು.
ಗೌರವಾನ್ವಿತ ರಾಜ್ಯದ ಎಲ್ಲಾ ಪ್ರಗತಿಪರ, ದಲಿತಪರ, ಮಹಿಳಾಪರ, ಅಹಿಂದಪರ, ಕನ್ನಡಪರ, ಸಾಮಾಜಿಕ ಹಾಗೂ ಸಂಘಟನೆಗಳ ನನ್ನೆಲ್ಲಾ ಮುಖಂಡರುಗಳೇ, ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕೆಎಸ್ ಆರ್ಟಿಸಿ ಬಸ್ ನಿಲ್ದಾಣದಲ್ಲಿ ದಲಿತ ಸಮುದಾಯದ ಅಪ್ರಾಪ್ತ ಯುವಕನನ್ನು ಬಳಸಿಕೊಂಡು ಬರಿಗೈ ಬರಿಗಾಲಿನಲ್ಲಿ ಮಲ ಸ್ವಚ್ಛಗೊಳಿಸಿದ ಘಟನೆ ಇದೇ ತಿಂಗಳು 6 ನೇ ತಾರೀಕಿನಂದು ನಡೆದಿದೆ, ಈ ಪ್ರಕರಣವನ್ನು ವರದಿ ಮಾಡಿದ ಪತ್ರಕರ್ತನಿಗೆ ವರದಿ ಮಾಡದಂತೆ ಅಧಿಕಾರಿಗಳಿಂದ ಬೆದರಿಕೆ ಬಂದಿತ್ತು. ಆದರೂ ಒಂದಷ್ಟು ಜನಪರ ಕಾಳಜಿ ಇರುವ ಪತ್ರಕರ್ತರು ಸುದ್ದಿ ಮಾಡಿದ್ದರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ನಿರಂತರ ಹೋರಾಟ ನಡೆಸುತ್ತಾನೆ ಬಂದಿದ್ದ ಕಾರಣ ಈಗ ನೆಪ ಮಾತ್ರಕ್ಕೆ ಇದೇ ತಿಂಗಳು 9 ನೇ ತಾರೀಖು ಎಫ್ ಐಆರ್ ದಾಖಲಾಗಿದೆ, ಎಫ್ ಐ ಆರ್ ನಲ್ಲಿ ನೈಜ್ಯ ಅಂಶ ಮರೆಮಾಚಿದೆ ಎಂದು ಅವರು ತಿಳಿಸಿದರು.
ಕೈ ಬಿಟ್ಟಿರುವ ಅಂಶಗಳು:
1) ದಲಿತ ಅಪ್ರಾಪ್ತ ಹುಡುಗ ಎಸ್ ಸಿ ಎಂದು ತಿಳಿದಿದ್ದರು ಅಟ್ರಾಸಿಟಿ ದಾಖಲು ಮಾಡಿಕೊಳ್ಳದೆ ಇರುವುದು,
2) ಎಸಿ ತಹಶೀಲ್ದಾರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೆಎಸ್ ಆರ್ಟಿಸಿ ಆರೋಗ್ಯ ಇಲಾಖೆ ಸೇರಿದಂತೆ ತಂಡ ರಚಿಸಿ ನೀಡಿದ ವರದಿಯಂತೆ ಪ್ರಕರಣ ದಾಖಲಾಗದೆ ಇರುವುದು.
3) ಸ್ಪಷ್ಟವಾಗಿ ಮಲ ಸ್ವಚ್ಛಗೊಳಿಸುತ್ತಿರುವ ವಿಡಿಯೋ ಸಾಕ್ಷಿ ಇದ್ದರೂ ಮಲ ಎಂಬ ಪದವನ್ನೇ ಬಿಟ್ಟು ಪ್ರಕರಣ ದಾಖಲಿಸಿರುವುದು,
4) ಇದೇ ಪ್ರಕರಣದಲ್ಲಿ ಮತ್ತೊಬ್ಬ ದಲಿತ ವ್ಯಕ್ತಿಯನ್ನು ಬಳಸಿಕೊಂಡಿದ್ದು ಆ ವ್ಯಕ್ತಿಯ ಹೆಸರನ್ನೇ ಎಲ್ಲೂ ಉಲ್ಲೇಖ ಮಾಡದೆ ಪ್ರಕರಣದಲ್ಲಿ ಕೈ ಬಿಟ್ಟಿರುವುದು.
5) ಚೈಲ್ಡ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳದೆ ಇರುವುದು.
6) ತುಮಕೂರು ಕೆಎಸ್ ಆರ್ಟಿಸಿ ಡಿಸಿ ಸರ್ಟಿಫಿಕೇಟ್ ಅಥವಾ ಪೂರ್ಣಪ್ರಮಾಣದ ಮಾಹಿತಿ ಇಲ್ಲದೆ ಪ್ರಕರಣಕ್ಕೆ ಬಳಸಿಕೊಂಡಿದ್ದ ಅಪ್ರಾಪ್ತ ದಲಿತ ಹುಡುಗನನ್ನ ಮಾನಸಿಕ ಅಸ್ವಸ್ಥ ಎಂದು ಅಧಿಕೃತ ಘೋಷಣೆ ಮಾಡಿದ್ದರು ಆತನ ಮೇಲೆ ಪ್ರಕರಣ ದಾಖಲಿಸದೆ ಕೈ ಬಿಟ್ಟಿರುವುದು.
7) ಪ್ರಕರಣದ ಸ್ಥಳ ಮಾಜರು ಸಮಯದಲ್ಲೇ ಜೆಸಿಪಿ ಯಂತ್ರವನ್ನು ಬಳಸಿ ಸಾಕ್ಷಿ ನಾಶಪಡಿಸಿದ್ದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸದೆ ಇರುವುದು
8) ದೇಶವೇ ತಲೆತಗ್ಗಿಸುವಂತಹ ಹೀನಾಕೃತಿಯ ನಡೆದರು ಯಾವುದೇ ಆರೋಪಿಯನ್ನ ಬಂಧಿಸದೆ ಇರುವುದು.
ಇಷ್ಟು ಅಂಶಗಳನ್ನ ಚಾರ್ಜ್ ಶೀಟ್ ನಲ್ಲಿ ದಾಖಲಾಗಬೇಕು, ಜಿಲ್ಲೆಯ ಅಧಿಕಾರಿಗಳು ಪ್ರತಿಷ್ಠಿತಗಾಗಿ ಒತ್ತಡಕ್ಕೆ ಮಣಿದು ಇಂಥ ಘೋರ ಕೃತ್ಯವನ್ನ ನೆಪ ಮಾತ್ರಕ್ಕೆ ಪ್ರಕರಣ ದಾಖಲು ಮಾಡಿದ್ದಾರೆ ಲೋಪವೇಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ಈ ಪ್ರಕರಣದ ವಿಷಯವಾಗಿ ಇಂಥ ಘಟನೆಗಳು ಮತ್ತೆ ನಡೆಯದಂತೆ ರಾಜ್ಯ ಮಟ್ಟದಲ್ಲಿ ಸಂವಿಧಾನ ಬದ್ಧ ಹೋರಾಟ ರೂಪಿಸುವುದು ಧ್ವನಿಯೆತ್ತುವುದು ಅನಿವಾರ್ಯವಾಗಿದೆ ಎಂದು ಜೆಟ್ಟಿ ಅಗ್ರಹಾರ ನಾಗರಾಜು ಎಚ್ಚರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q