ಸರಗೂರು: ಪಟ್ಟಣ ಪಂಚಾಯಿತಿ ನಾಲ್ಕನೇ ವಾರ್ಡ್ ನ ನೂತನ ಸದಸ್ಯರಾಗಿ ಚಂದ್ರಕಲಾ ರಾಜಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕಿನ ಪಟ್ಟಣದ ನಾಲ್ಕನೇ ವಾರ್ಡಿನ ಸದಸ್ಯ ಎಸ್.ಎಲ್.ರಾಜಣ್ಣರವರು ನಿಧನ ಹಿನ್ನೆಲೆಯಲ್ಲಿ ಸರ್ಕಾರ ಆದೇಶದ ಮೇರೆಗೆ ಮರುಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆ ಚುನಾವಣಾಧಿಕಾರಿ ಪುರುಷೋತ್ತಮ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಂದ್ರಕಲಾ ರಾಜಣ್ಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ನಂತರ ಮಾತನಾಡಿದ ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ನಾಗರಾಜು, ವಾರ್ಡ್ ನ ಸದಸ್ಯ ಎಸ್.ಎಲ್.ರಾಜಣ್ಣ ಅವರು ನಿಧನ ಹೊಂದಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸದಸ್ಯ ಸ್ಥಾನದ ಆಕಾಂಕ್ಷಿಯಾಗಿ ಚಂದ್ರಕಲಾ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದಾಗಿ ಸದಸ್ಯರಾಗಿ ಚಂದ್ರಕಲಾ ರಾಜಣ್ಣ ಆಯ್ಕೆಯಾಗಿದ್ದಾರೆ.
ಅದರಂತೆ ನಾಲ್ಕನೇ ವಾರ್ಡಿನ ಜನರಿಗೆ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಜನತೆ ಅಭಿವಂದನೆಗಳು ಸಲ್ಲಿಸಿದರು.
ಶಾಸಕರು ಅನೀಲ್ ಚಿಕ್ಕಮಾದುರವರು ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಸದಸ್ಯೆ ಚಂದ್ರಕಲಾ ರಾಜಣ್ಣ ಅವರಿಗೆ ವಾರ್ಡ್ ನ್ನು ಅಭಿವೃದ್ಧಿಗೊಳಿಸಲು ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ.ಪಂ. ಸದಸ್ಯರು ಶ್ರೀನಿವಾಸ, ಚೆಲುವ ಕೃಷ್ಣ, ಹೇಮಾವತಿ ರಮೇಶ್, ಟೌನ್ ಅಧ್ಯಕ್ಷ ನಾಗರಾಜು, ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರ್, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ, ಕಾಂಗ್ರೆಸ್ ಪಕ್ಷದ ಪ್ರದಾನ ಕಾರ್ಯದರ್ಶಿ ಚೆಲುವರಾಜು, ಮುಖಂಡರು ಬಿಲ್ಲಯ್ಯ , ಜವರಾಜಪ್ಪ,ಆಟೋ ರಮೇಶ್, ದೊಡ್ಡ ಬೈರ, ರಂಗಸ್ವಾಮಿ, ಚೆನ್ನಯ್ಯ, ಗೋಪಾಲಸ್ವಾಮಿ, ಸಿದ್ದರಾಜು, ರಾಜು, ಸಿದ್ದಪ್ಪ(ಸಣ್ಣ), ದಲಿತ ಸಮಾಜದ ಯಜಮಾನರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296