ಉದ್ಯಮಿಯೋರ್ವರಿಗೆ ಟಿಕೆಟ್ ನೀಡುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಈ ಪ್ರಕರಣದ ಪ್ರಮುಖ ಆರೋಪಿಯಾದ ಧನರಾಜ್ ಎಂಬಾತ ಬೇಲ್ ಮೇಲಿಂದ ಜೈಲಿನಿಂದ ಹೊರಬಂದಿದ್ದು, ಸಾಕ್ಷಿ ಹೇಳಿದರೆ ಕೊಲೆ ಮಾಡುವುದಾಗಿ ಸಲೂನ್ ಮಾಲೀಕ ರಾಮು ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿರುವ ಕುರಿತು ವರದಿಯಾಗಿದೆ.
ಜೈಲಿನಿಂದ ಹೊರ ಬಂದಿರುವ ಧನರಾಜ್ ಗೆ ನ್ಯಾಯಾಲಯವು ಕಳೆದ ತಿಂಗಳು ಷರತ್ತುಬದ್ಧ ಜಾಮೀನನ್ನು ನೀಡಿತ್ತು. ಮಾ.25ರಂದು ಕಡೂರಿನ ಹೋಟೆಲ್ ನಲ್ಲಿ ಹಲ್ಲೆ ಆಗಿರುವ ಕುರಿತು ರಾಮು ಅವರು ಬೀರೂರು ಪೊಲೀಸರಿಗೆ ದೂರನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ ಬೀರೂರು ಪೊಲೀಸರು ಮಾತ್ರ ಪ್ರಕರಣ ದಾಖಲು ಮಾಡಿಲ್ಲ ಎಂದು ವರದಿಯಾಗಿದೆ. ಹಾಗಾಗಿ ನ್ಯಾಯಕ್ಕಾಗಿ ರಾಮು ಕುಟುಂಬ ಎಸ್ಪಿ ಕಚೇರಿಯ ಬಾಗಿಲು ತಟ್ಟಿದ್ದಾರೆ ಎನ್ನಲಾಗಿದೆ.
ಚೈತ್ರಾ ವಂಚನೆ ಪ್ರಕರಣದಲ್ಲಿ ಕಡೂರಿನ ರಾಮು ಸಲೂನ್ ನಲ್ಲಿ ಚೆನ್ನಾ ನಾಯ್ಕಗೆ ಗೋಪಾಲ್ ಜೀ ಪಾತ್ರ ಸೃಷ್ಟಿಸಿ ಧನರಾಜ್ ಮೇಕಪ್ ಮಾಡಿಸಿದ್ದ. ಈ ಕಾರಣದಿಂದ ಈ ವಂಚನೆ ಪ್ರಕರಣದ ಪ್ರಮುಖ ಸಾಕ್ಷಿಯಾದ ರಾಮುವಿಗೆ ಸಾಕ್ಷಿ ನುಡಿಯದಂತೆ ಬೆದರಿ ಒಡ್ಡಲಾಗಿದೆ ಎಂದು ಚಿಕ್ಕಮಗಳೂರು ನಗರದ ಎಸ್ಪಿ ಕಚೇರಿಯಲ್ಲಿ ರಾಮು ಕುಟುಂಬದವರು ದೂರು ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296