ತಿಪಟೂರು: ನಗರದ ದೊಡ್ಡಯ್ಯನಪಾಳ್ಯದ ಶ್ರೀ ಚೌಡೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ (ಶ್ರೀ ಚೌಡೇಶ್ವರಿ ಭವನ) ಕಚೇರಿಗೆ ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಭೇಟಿ ನೀಡಿ, ಕಟ್ಟಡ ಮತ್ತು ಆಡಳಿತ ಕಚೇರಿಯನ್ನು ವೀಕ್ಷಿಸಿ, ಪ್ರಶಂಸೆ ವ್ಯಕ್ತಪಡಿಸಿದರು.
ಶ್ರೀ ಚೌಡೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಎಸ್.ಸೋಮಶೇಖರ್ ಮಾತನಾಡಿ, ವಿ ಸೋಮಣ್ಣನವರು ಲೋಕಸಭಾ ಕ್ಷೇತ್ರ, ತಾಲೂಕು ಸೇರಿದಂತೆ ಇಡೀ ದೇಶದಲ್ಲಿ ರೈಲ್ವೆ ಇಲಾಖೆಯಲ್ಲಿ ಸಂಚಾರ ನಡೆಸಿ, ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿ, ರೈಲ್ವೆ ನಿಲ್ದಾಣ ಮತ್ತು ನಿಲುಗಡೆಗೆ ಶ್ರಮಪಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದಲ್ಲಿ ಚುರುಕಾಗಿ ಕಾರ್ಯನಿರ್ವಹಿಸುತ್ತಿರುವ ಸಚಿವರಲ್ಲಿ ಇವರೂ ಒಬ್ಬರಾಗಿದ್ದಾರೆ. ಇವರ ಕಾರ್ಯದಕ್ಷತೆ ಜನಸಾಮಾನ್ಯರಿಗೆ ಹತ್ತಿರವಾಗಿದೆ ಎಂದು ತಿಳಿಸಿದರು.
ಸಹಕಾರಿಯ ಉಪಾಧ್ಯಕ್ಷ ಮಂಜುನಾಥ್, ಸಿಇಒ ಮೃತ್ಯುಂಜಯ, ಶ್ರೀ ಚಾಮುಂಡೇಶ್ವರಿ ಸೌಹಾರ್ದ ನಿಯಮಿತದ ಅಧ್ಯಕ್ಷೆ ವಿಶಾಲ ಸೋಮಶೇಖರ್, ನಿವೃತ್ತ ಶಿಕ್ಷಕ ಸೋಮಶೇಖರ್, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶಶಿಕಿರಣ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ರಾಜಣ್ಣ, ವಿ.ಎಚ್.ಪಿ ಜಿಲ್ಲಾಧ್ಯಕ್ಷ ಬಾಳೇಕಾಯಿ ನಟರಾಜು, ಮುಖಂಡರಾದ ದಕ್ಷಿಣ ಮೂರ್ತಿ, ಎ.ಟಿ.ಪ್ರಸಾದ್, ಪ್ರಸನ್ನ ಕುಮಾರ್, ರಾಮಿ, ದಿಲೀಪ್, ಶಂಕರಮೂರ್ತಿ, ಮಹಮ್ಮದ್ ದಸ್ತಗೀರ್, ಸೈಫುಲ್ಲಾ, ಶಿವಮೂರ್ತಿ, ಸುರೇಶ್ ಹಾಗೂ ಕಲ್ಲೇಶ್ ಸೇರಿದಂತೆ ನಿಯಮಿತದ ನಿರ್ದೇಶಕರು, ಸಿಬ್ಬಂದಿ, ಮುಖಂಡರು ಹಾಗೂ ನೂರಾರು ಸಂಖ್ಯೆ ಸದಸ್ಯರು ಹಾಜರಿದ್ದರು.
ಶ್ರೀ ಚೌಡೇಶ್ವರಿ ಆಡಳಿತ ಕಚೇರಿಯ ಭವನವು ಮತ್ತು ಸಹಕಾರಿ ಸಂಸ್ಥೆಯಲ್ಲಿ ಮಾಡಿರುವ ಗಣನೀಯ ಸೇವೆ ರಾಷ್ಟ್ರೀಕೃತ ಬ್ಯಾಂಕಿಗೆ ಸಮನಾಗಿದೆ. ಕಟ್ಟಡವನ್ನು ಬೃಹತ್ ಮಟ್ಟದಲ್ಲಿ ನಿರ್ಮಿಸಲಾಗಿದೆ. ಲಾಕರ್ ಸೌಲಭ್ಯವು ಸಹ ಕಲ್ಪತರು ನಾಡಿನ ಜನಕ್ಕೆ ಅನುಕೂಲವಾಗುತ್ತದೆ. ಸಹಕಾರಿ ಕ್ಷೇತ್ರದಲ್ಲಿ ಸಂಸ್ಥಾಪಕ ಅಧ್ಯಕ್ಷ ಸೋಮಣ್ಣನವರ ಸೇವೆ ದೂರ ದೃಷ್ಟಿಯುಳ್ಳದ್ದಾಗಿದೆ. ಅಶಕ್ತರಿಗೆ ಈ ಸಹಕಾರಿಯಿಂದ ಹೆಚ್ಚಿನ ಸೌಲಭ್ಯಗಳು ದೊರೆಯಲಿ.
— ವಿ. ಸೋಮಣ್ಣ, ಸಚಿವರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
