ತುಮಕೂರು: ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 3 ವರ್ಷಗಳ ಅವಧಿಗೆ ಘನತ್ಯಾಜ್ಯ ನಿರ್ವಹಣೆ, ಸ್ವಚ್ಛ ಸರ್ವೇಕ್ಷಣೆ, ತ್ಯಾಜ್ಯ ನೀರು ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವಸಹಾಯ ಗುಂಪಿ(ಎಸ್ ಹೆಚ್ ಜಿ)ನ ಸದಸ್ಯರನ್ನು ನೇಮಕ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ನಿಗಧಿತ ಅರ್ಜಿ ನಮೂನೆ, ಆಯ್ಕೆ ಪ್ರಕ್ರಿಯೆ, ಸಲ್ಲಿಸಬೇಕಾದ ಅಗತ್ಯ ದಾಖಲೆ, ಷರತ್ತು ಮತ್ತು ನಿಯಮ, ವೇತನ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಯನ್ನು ಜಾಲತಾಣ http://tumakurucity.mrc.gov.in/en ನಿಂದ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸುವವರು ‘ನಲ್ಮ್–ಡೇ’ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರಬೇಕು. ಜಾಲತಾಣದಲ್ಲಿ ಲಭ್ಯವಿರುವ ನಿಗಧಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜೂನ್ 17ರೊಳಗಾಗಿ ಇ-ಮೇಲ್ ವಿಳಾಸ itstaff_ulb_tumkur@yahoo.com ಗೆ ಸಲ್ಲಿಸಬಹುದು.
ಆಸಕ್ತ ಎಸ್ ಹೆಚ್ ಜಿ ಸದಸ್ಯರು ಅರ್ಜಿಯೊಂದಿಗೆ ಗುರುತಿನ ಪುರಾವೆ, ವಿಳಾಸ ಪುರಾವೆ, ಅರ್ಹತಾ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುವ(ಎಂಪಾನೆಲ್) ದಾಖಲೆ, ಸ್ವ–ಸಹಾಯ ನೋಂದಣಿ ದಾಖಲೆ, ಶೈಕ್ಷಣಿಕ ಅರ್ಹತಾ ದಾಖಲೆ, NULM–DAY ಅವರಿಂದ ಪಡೆದ ಹಿಂಬರಹ ಪತ್ರ, ಮತ್ತಿತರ ದಾಖಲೆಗಳನ್ನು ಲಗತ್ತಿಸಬೇಕು. ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW