nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪ್ರತಿ ಗ್ರಾಮ ಪಂಚಾಯತಿಗೊಂದು ಆಟದ ಮೈದಾನ ಅವಶ್ಯ: ಕೊರಟಗೆರೆಯಲ್ಲಿ ಎಂ.ಎನ್.ಜೆ. ಮಂಜುನಾಥ್ ಆಗ್ರಹ

    October 17, 2026

    ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್‌ ನಲ್ಲೇ ಕೆಲವೇ ನಿಮಿಷಗಳಲ್ಲಿ ಹೀಗೆ ಪರಿಶೀಲಿಸಿ!

    October 17, 2026

    50 ಸಾವಿರ ಲಂಚ ಸ್ವೀಕಾರ: ಎಫ್‌ ಡಿಎ ಸಹಾಯಕ ಲೋಕಾ ಬಲೆಗೆ

    October 17, 2026
    Facebook Twitter Instagram
    ಟ್ರೆಂಡಿಂಗ್
    • ಪ್ರತಿ ಗ್ರಾಮ ಪಂಚಾಯತಿಗೊಂದು ಆಟದ ಮೈದಾನ ಅವಶ್ಯ: ಕೊರಟಗೆರೆಯಲ್ಲಿ ಎಂ.ಎನ್.ಜೆ. ಮಂಜುನಾಥ್ ಆಗ್ರಹ
    • ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್‌ ನಲ್ಲೇ ಕೆಲವೇ ನಿಮಿಷಗಳಲ್ಲಿ ಹೀಗೆ ಪರಿಶೀಲಿಸಿ!
    • 50 ಸಾವಿರ ಲಂಚ ಸ್ವೀಕಾರ: ಎಫ್‌ ಡಿಎ ಸಹಾಯಕ ಲೋಕಾ ಬಲೆಗೆ
    • ಎಸ್ ಐಆರ್ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಆರೋಪ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ
    • ತುಮಕೂರು ಸ್ಕ್ವೇರ್ ಹೆಸರಿಗೆ ಭಕ್ತರು, ಶ್ರೀಗಳ ವಿರೋಧ: ಡಾ.ಶ್ರೀ ಶಿವಕುಮಾರಸ್ವಾಮೀಜಿ ಸ್ಕ್ವೇರ್’ ಎಂದೇ ಹೆಸರಿಸಲು ಆಗ್ರಹ
    • ಕುಣಿಗಲ್‌ ಉತ್ಸವಕ್ಕೆ ಸರ್ಕಾರದ ಹಣ ಬಳಸಿಲ್ಲ: ಜೆಡಿಎಸ್‌ ಅಧ್ಯಕ್ಷ ಬಿ.ಎನ್‌. ಜಗದೀಶ್‌ ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು
    • ಎಲ್ ನಿನೋ ಭೀತಿ: 10 ತಿಂಗಳು ನೀರಿನ ಬಿಕ್ಕಟ್ಟು? ರೈತರಿಗೆ ಇಲ್ಲಿದೆ ಮುಖ್ಯ ಸೂಚನೆ
    • ಕಿಡ್ನಿ ಸ್ಟೋನ್ಸ್ ತಡೆಯಲು ಎಷ್ಟು ನೀರು ಕುಡಿಯಬೇಕು? ಯಾವ ಆಹಾರಗಳನ್ನು ಸೇವಿಸಬೇಕು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವೃಕ್ಷ ಮಾತೆ ತುಳಸಿಗೌಡ ನಿಧನಕ್ಕೆ ಪರಿಷತನಲ್ಲಿ ಸಂತಾಪ
    ರಾಜ್ಯ ಸುದ್ದಿ December 17, 2024

    ವೃಕ್ಷ ಮಾತೆ ತುಳಸಿಗೌಡ ನಿಧನಕ್ಕೆ ಪರಿಷತನಲ್ಲಿ ಸಂತಾಪ

    By adminDecember 17, 2024No Comments2 Mins Read
    tulsi gowda

    ಬೆಳಗಾವಿ: ಪದ್ಮಶ್ರೀ ಪುರಸ್ಕೃತ ವೃಕ್ಷ ಮಾತೆ ತುಳಸಿಗೌಡ ಅವರ ನಿಧನಕ್ಕೆ ವಿಧಾನ ಪರಿಷತ್ತನಲ್ಲಿ ಡಿ.17 ರಂದು ಸಂತಾಪ ಸೂಚಿಸಲಾಯಿತು.

    ಸಭಾಪತಿ ಬಸವರಾಜ ಹೊರಟ್ಟಿ ಅವರು, ತುಳಸಿಗೌಡ ಅವರ ನಿಧನರಾದ ವಿಷಯವನ್ನು ಸದನಕ್ಕೆ ತಿಳಿಸಲು ವಿಷಾಧಿಸುತ್ತೇನೆ ಎಂದು ಹೇಳಿ ಸಂತಾಪ ಸೂಚನೆಯ ನಿರ್ಣಯವನ್ನು ಮಂಡಿಸಿದರು.

    ತುಳಸಿ ಗೌಡ ಅವರು 1944ರ ಡಿಸೆಂಬರ್.16 ರಂದು ಅಂಕೋಲ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ಹಾಲಕ್ಕಿ ಬುಡಕಟ್ಟು ಕುಟುಂಬದಲ್ಲಿ ಜನಿಸಿದ್ದ ಶ್ರೀಯುತರು ‘ಪರಿಸರವೇ ನನ್ನ ಉಸಿರು’ ಎಂದು ತಮ್ಮ ಜೀವನದುದ್ದಕ್ಕೂ ಲಕ್ಷಾಂತರ ಮರಗಳನ್ನು ಬೆಳೆಸಿ ಪಾಲನೆ ಪೋಷಣೆ ಮಾಡುವ ಮೂಲಕ ‘ವೃಕ್ಷ ಮಾತೆ’ ಎಂದು ಕರೆಯಲ್ಪಡುತ್ತಿದ್ದರು. ಯಾವುದೇ ಔಪಚಾರಿಕ ಶಿಕ್ಷಣವಿಲ್ಲದಿದ್ದರೂ ಶಾಲಾ ಮಕ್ಕಳಿಗೆ ಗಿಡಗಳನ್ನು ಬೆಳೆಸುವ ತರಬೇತಿ ನೀಡುತ್ತಿದ್ದರು. ಪ್ರತಿ ವರ್ಷ 30 ಸಾವಿರ ಸಸಿಗಳನ್ನು ಪೋಷಿಸಿದ ಕೀರ್ತಿಗೆ ಭಾಜನರಾಗಿದ್ದರು.

    ಶ್ರೀಯುತರಿಗೆ ಅರಣ್ಯ ತಿಳುವಳಿಕೆ ಅಪಾರವಾಗಿತ್ತು. ಸಾಗವಾನಿಯನ್ನೇ ಹೆಚ್ಚಾಗಿ ಬೆಳೆಸುತ್ತಿದ್ದ ಇವರು ಇದರ ಹೊರತಾಗಿ ಎಳ್ಳು, ನಂದಿ, ಪೀಫುಲ್, ಫಿಕಸ್, ಬಿದಿರು, ರಾಟನ್, ಜಮುನ್, ಗೋಡಂಬಿ, ಮತ್ತಿ ಮುಂತಾದ ಮರಗಳ ಎಲ್ಲಾ ಮಾಹಿತಿಗಳ ಅರಿವನ್ನು ಹೊಂದಿದ್ದರು. ಪರಿಸರದ ಮೇಲಿನ ಈಕೆಯ ಪ್ರೀತಿಯನ್ನು ಕಂಡು ಅಂದಿನ ಅರಣ್ಯಾಧಿಕಾರಿಯವರು ಅರಣ್ಯದಲ್ಲಿ ಬೀಜಗಳನ್ನು ಶೇಖರಣೆ ಮಾಡಿ ಸಸಿಗಳನ್ನಾಗಿ ಮಾಡಿಕೊಡುವ ಹಾಗೂ ಪೋಷಿಸುವ ದಿನಗೂಲಿ ನೌಕರಿಯನ್ನು ನೀಡಿದ್ದರು.

    ಕಾಡಿನಿಂದ ಅಪರೂಪದ ಬೀಜ ಸಂಗ್ರಹಿಸಿ, ಸಸಿಗಳನ್ನು ಬೆಳಸಿ ಅದೇ ಸಸಿಗಳನ್ನು ಅರಣ್ಯದಲ್ಲಿ, ಸರ್ಕಾರಿ ಕಛೇರಿ, ಶಾಲಾ ಆವರಣ, ರಸ್ತೆಯ ಪಕ್ಕದಲ್ಲಿ ಬೆಳೆಸಿದ ಕೀರ್ತಿ ಇವರದ್ದಾಗಿದೆ. ಯಾವ ಯಾವ ಮರದಿಂದ ಏನೇನು ಪ್ರಯೋಜನ, ಯಾವ ಜಾತಿಯ ಸಸಿಗಳಿಗೆ ಎಷ್ಟು ನೀರಿನ ಅವಶ್ಯಕತೆ ಇದೆ ಮುಂತಾದ ಹಲವಾರು ಮಾಹಿತಿಗಳ ಕಣಜವಾಗಿದ್ದ ಶ್ರೀಯುತರು ‘ಅರಣ್ಯದ ವಿಶ್ವಕೋಶ’ ಎಂದೇ ಜನಜನಿತರಾಗಿದ್ದರು.

    ಶ್ರೀಯುತರ ಪರಿಸರ ಕಾಯಕಕ್ಕೆ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ, ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿಗಳಲ್ಲದೆ ರಾಜ್ಯೋತ್ಸವ ಪ್ರಶಸ್ತಿಗೂ ಸಹ ಭಾಜನರಾಗಿದ್ದರು.

    ಶ್ರೀಯುತರ ನಿಧನದಿಂದಾಗಿ ರಾಜ್ಯ ಹಾಗೂ ರಾಷ್ಟ್ರವು ಒಬ್ಬ ಶ್ರೇಷ್ಠ ಪರಿಸರ ‘ವೃಕ್ಷ ಮಾತೆ’ಯೊಬ್ಬರನ್ನು ಕಳೆದುಕೊಂಡAತಾಗಿದೆ ಎಂದು ಸಭಾಪತಿ ಅವರು ಸಂತಾಪ ಸೂಚನೆಯ ನಿರ್ಣಯವನ್ನು ಸದನಕ್ಕೆ ತಿಳಿಸಿದರು.

    ಸಭಾ ನಾಯಕರು ಮತ್ತು ಸಚಿವರಾದ ಎನ್ ಎಸ್ ಬೋಸರಾಜು ಹಾಗೂ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿ, ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಪರಮಾತ್ಮನು ಕರುಣಿಸಲೆಂದು ಪ್ರಾರ್ಥಿಸುವೆ ಎಂದು ತಿಳಿಸಿದರು.

    ಮೃತರ ಗೌರವಾರ್ಥ ಮಾನ್ಯ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿ ಸಂತಾಪ ಸಲ್ಲಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್‌ ನಲ್ಲೇ ಕೆಲವೇ ನಿಮಿಷಗಳಲ್ಲಿ ಹೀಗೆ ಪರಿಶೀಲಿಸಿ!

    October 17, 2026

    ರಾಜ್ಯಪಾಲರಿಗೆ ತಿಂಗಳಿಗೆ ಎಷ್ಟು ಸಂಬಳ; ರಾಜಭವನ ಸೇರಿ ಸಿಗುವ ಸೌಲಭ್ಯಗಳೇನು?

    October 16, 2026

    ರೈತರ ಬೇಡಿಕೆ ಈಡೇರುವವರೆಗೆ ಸಕ್ಕರೆ ಮುಟ್ಟಲ್ಲ! ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರತಿಜ್ಞೆ

    October 14, 2026

    Comments are closed.

    Our Picks

    ಎಲ್ ನಿನೋ ಭೀತಿ: 10 ತಿಂಗಳು ನೀರಿನ ಬಿಕ್ಕಟ್ಟು? ರೈತರಿಗೆ ಇಲ್ಲಿದೆ ಮುಖ್ಯ ಸೂಚನೆ

    October 17, 2026

    ಜಗನ್ನಾಥನ ರಥದ ಚಕ್ರ ಮನೆಗೆ ತರಬೇಕಾ? ಖರೀದಿಸಲು ಎಷ್ಟು ಹಣ ಕೊಡಬೇಕು?

    October 14, 2026

    ನಿಮ್ಮ ಮೊಬೈಲ್ ರೀಚಾರ್ಜ್‌ನಿಂದ ಟೆಲಿಕಾಂ ಕಂಪನಿಗಳಿಗೆ ಎಷ್ಟು ಲಾಭ?

    October 14, 2026

    ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್

    October 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Uncategorized

    ಪ್ರತಿ ಗ್ರಾಮ ಪಂಚಾಯತಿಗೊಂದು ಆಟದ ಮೈದಾನ ಅವಶ್ಯ: ಕೊರಟಗೆರೆಯಲ್ಲಿ ಎಂ.ಎನ್.ಜೆ. ಮಂಜುನಾಥ್ ಆಗ್ರಹ

    October 17, 2026

    ಕೊರಟಗೆರೆ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸುವುದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ವಿನ ಕ್ರೀಡಾಪಟುಗಳು ರೂಪುಗೊಳ್ಳಲು ಸಾಧ್ಯ. ಗ್ರಾಮೀಣ ಕ್ರೀಡೆಗಳು ಜೀವಂತವಾಗಿದ್ದಾಗ…

    ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್‌ ನಲ್ಲೇ ಕೆಲವೇ ನಿಮಿಷಗಳಲ್ಲಿ ಹೀಗೆ ಪರಿಶೀಲಿಸಿ!

    October 17, 2026

    50 ಸಾವಿರ ಲಂಚ ಸ್ವೀಕಾರ: ಎಫ್‌ ಡಿಎ ಸಹಾಯಕ ಲೋಕಾ ಬಲೆಗೆ

    October 17, 2026

    ಎಸ್ ಐಆರ್ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಆರೋಪ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ

    October 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.