ತುಮಕೂರು: ಬೆವಿಕಂ ನಗರ ಉಪವಿಭಾಗ–1ರಲ್ಲಿ ಜನವರಿ 18ರಂದು ಮಧ್ಯಾಹ್ನ 3:30 ಗಂಟೆಗೆ ಗ್ರಾಹಕರ ಸಂವಾದ ಸಭೆ ಏರ್ಪಡಿಸಲಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜು ಹೆಚ್.ಪಿ. ತಿಳಿಸಿದ್ದಾರೆ.
ನಗರ ಉಪವಿಭಾಗ-1ರ ಉತ್ತರ/ಕೇಂದ್ರ/ಪಶ್ಚಿಮ ಶಾಖೆಗಳ ವ್ಯಾಪ್ತಿಯಲ್ಲಿ ಬರುವ ಅರಳೇಪೇಟೆ ಹಾಗೂ ಕೆ.ಆರ್.ಬಡಾವಣೆ, ಕುವೆಂಪು ನಗರ, ಆದರ್ಶನಗರ, ಹನುಮಂತಪುರ, ಕೋತಿತೋಪು, ಶಾರದಾದೇವಿ ನಗರ, ಸಿರಾಗೇಟ್, ಅರಕೆರೆ, ಊರುಕೆರೆ, ರಂಗಾಪುರ, ಯಲ್ಲಾಪುರ, ಅಣ್ಣೇನಹಳ್ಳಿ, ಅಂತರಸನಹಳ್ಳಿ, ಕುಪ್ಪೂರು, ದಿಬ್ಬೂರು, ಎಸ್.ಎನ್.ಪಾಳ್ಯ, ಪಿ.ಎಸ್.ಪಾಳ್ಯ, ಹೆಬ್ಬಾಕಾ, ಸಂತೇಪೇಟೆ, ಮಂಡಿಪೇಟೆ, ಗಾರ್ಡನ್ ರಸ್ತೆ, ಜೈಪುರ, ಪಿ.ಹೆಚ್.ಕಾಲೋನಿ ಹೆಚ್.ಟಿ. ಮತ್ತು ಎಲ್.ಟಿ. ಗ್ರಾಹಕರು ಸಭೆಗೆ ಹಾಜರಾಗಿ ಸೂಕ್ತ ಸಲಹೆ, ದೂರುಗಳಿದ್ದಲ್ಲಿ ಪರಿಹರಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx