ಬೀದರ್ : ಮೇಲ್ಜಾತಿ ಬಾಲಕಿಯನ್ನು ಪ್ರೀತಿ ಮಾಡಿದ್ದಕ್ಕಾಗಿ ದಲಿತ ಯುವಕನಿಗೆ ಹಲ್ಲೆ ನಡೆಸಿದ ಪರಿಣಾಮ ಯುವಕ ಸಾವನಪ್ಪಿದ ಘಟನೆ ಔರಾದ್ ತಾಲ್ಲೂಕಿನ ಠಾಣಾ ಕುಶನೂರ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.ಭೇಡಕುಂದಾ ಗ್ರಾಮದ ನಿವಾಸಿ ಸುಮಿತ್ (19) ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ.
ರಕ್ಷಾಳ್ ಗ್ರಾಮದ ಬಾಲಕಿಯನ್ನು ಸುಮಿತ್ ಪ್ರೀತಿಸುತಿದ್ದ. “ರವಿವಾರದಂದು ನಮ್ಮ ಮನೆ ಕಡೆಗೆ ಬಾ” ಎಂದು ಸುಮಿತ್ ನನ್ನು ಹುಡುಗಿ ಕರೆದಿದ್ದಳು. ಹುಡುಗಿಯನ್ನು ಭೇಟಿ ಮಾಡಲು ಹೋದ ಸುಮಿತ್ ನನ್ನು ಹುಡುಗಿಯ ಅಪ್ಪ, ಅಣ್ಣ ಮತ್ತು ಸಂಬಂಧಿಕರು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದರು.
ಸುಮಿತ್ ಮನೆಯಿಂದ ಹೊರಗಡೆ ಹೋದ ನಂತರ ಬಾಲಕಿಯ ಅಣ್ಣ ಮತ್ತು ಆತನ ಗೆಳೆಯರು ಸೇರಿಕೊಂಡು ಮತ್ತೆ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಸುಮಿತ್ ನ ಮನೆಗೆ ಕರೆ ಮಾಡಿ ಆತನನ್ನು ಕರೆದೊಯ್ಯಲು ಹೇಳಿದ್ದಾರೆ ಎಂದು ಮೃತ ಯುವಕನ ಸಂಬಂಧಿಕರು ತಿಳಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx