ತಿಪಟೂರು: ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಬೆಂಕಿಗೆ ಆಹುತಿಗೊಂಡ ರಾಧಾಮಣಿ ಮನೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ. 25 ಸಾವಿರ, ಸಹಾಯಧನದ ಪತ್ರ ವಿತರಣೆ ಮಾಡಲಾಯಿತು.
ತಿಪಟೂರು ತಾಲ್ಲೂಕಿನ ರಂಗಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕಲ್ಲಯ್ಯನ ಪಾಳ್ಯ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ರಾಧಾಮಣಿಗಂಗಾದರಯ್ಯ ಎಂಬುವವರ ಮನೆ ಬೆಂಕಿಗಾಹುತಿಯಾಗಿ ಸರಿಸುಮಾರು 20 ಲಕ್ಷ ಮೊತ್ತದಷ್ಟು ನಷ್ಟ ಅನುಭವಿಸಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೊಂದ ಕುಟುಂಬಕ್ಕೆ 25 ಸಾವಿರ ಮೊತ್ತದ ಸಹಾಯ ಧನವನ್ನು ಮಂಜೂರುಗೊಳಿಸಿದ ಡಿಡಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಿಪಟೂರು ತಾಲ್ಲೂಕಿನ ಯೋಜನಾಧಿಕಾರಿಗಳಾದ ಉದಯ್ ಕೆ. ರವರು ರಾಧಾಮಣಿಯ ಕುಟುಂಬದವರಿಗೆ ವಿತರಿಸಿದರು.
ಈ ಸಂದರ್ಭ ರಂಗಾಪುರ ವಲಯ ಮೇಲ್ವಿಚಾರಕ ದಿನೇಶ್ ಕೆ., ಸೇವಾಪ್ರತಿನಿಧಿ ರೂಪ ಹಾಗೂ ಧರ್ಮಸ್ಥಳ ಸ್ವಸಹಾಯ ಸಂಘದ ಪಾಲುದಾರು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW