nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪ.ಜಾತಿ, ಪಂಗಡ ಅಧಿಕಾರಿಗಳು ಮತ್ತು ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ

    July 19, 2025

    ತಾ.ಪಂ., ಜಿ.ಪಂ. ಚುನಾವಣೆ ನಡೆಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸರಗೂರು ಕೃಷ್ಣ ಆರೋಪ

    July 19, 2025

    ಶಾಸಕ ಪ್ರಭು ಚವ್ಹಾಣ್ ಪುತ್ರನ ವಿರುದ್ಧ ಮಹಿಳಾ ಆಯೋಗಕ್ಕೆ ಯುವತಿ ದೂರು ಸಲ್ಲಿಕೆ

    July 19, 2025
    Facebook Twitter Instagram
    ಟ್ರೆಂಡಿಂಗ್
    • ಪ.ಜಾತಿ, ಪಂಗಡ ಅಧಿಕಾರಿಗಳು ಮತ್ತು ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ
    • ತಾ.ಪಂ., ಜಿ.ಪಂ. ಚುನಾವಣೆ ನಡೆಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸರಗೂರು ಕೃಷ್ಣ ಆರೋಪ
    • ಶಾಸಕ ಪ್ರಭು ಚವ್ಹಾಣ್ ಪುತ್ರನ ವಿರುದ್ಧ ಮಹಿಳಾ ಆಯೋಗಕ್ಕೆ ಯುವತಿ ದೂರು ಸಲ್ಲಿಕೆ
    • ಖಾಸಗಿ ಬಸ್ ಪಲ್ಟಿ: 25ಕ್ಕೂ ಅಧಿಕ ಜನರಿಗೆ ಗಾಯ
    • ಸಾಲ ಮರುಪಾವತಿ ಮಾಡದ ವ್ಯಕ್ತಿಯನ್ನು ಸರಪಳಿಯಲ್ಲಿ ಕಟ್ಟಿಹಾಕಿ ಟಾರ್ಚರ್!
    • ಕುಟುಂಬ ಗಲಾಟೆ ನಿಲ್ಲಿಸಲು ಬಂದ ಪೇದೆಯಿಂದ ಮಹಿಳೆ ಮೇಲೆ ಅತ್ಯಾಚಾರ!
    • ಗಾಂಜಾ ಬೆರೆಸಿ ಚಾಕೊಲೇಟ್ ಮಾರಾಟ: ಆರೋಪಿಯ ಬಂಧನ
    • ಜುಲೈ 30ಕ್ಕೆ ಪ್ರಜ್ವಲ್ ರೇವಣ್ಣ ಭವಿಷ್ಯ ನಿರ್ಧಾರ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಡಾ.ಅಂಬೇಡ್ಕರ್ ಭಾರತದ ಸಾಂಸ್ಕೃತಿಕ ನಾಯಕ: ಓಬವ್ವ ಜಯಂತಿಯಲ್ಲಿ ಸೋಸಲೆ ಅಭಿಪ್ರಾಯ
    ತುಮಕೂರು November 12, 2024

    ಡಾ.ಅಂಬೇಡ್ಕರ್ ಭಾರತದ ಸಾಂಸ್ಕೃತಿಕ ನಾಯಕ: ಓಬವ್ವ ಜಯಂತಿಯಲ್ಲಿ ಸೋಸಲೆ ಅಭಿಪ್ರಾಯ

    By adminNovember 12, 2024No Comments3 Mins Read
    onake obavva

    ತುಮಕೂರು: ದೇಶದುದ್ದಕ್ಕೂ ಎಲ್ಲಾ ಜನ ಸಮುದಾಯದಲ್ಲಿ ಸ್ವಾಭಿಮಾನದ ಕಿಚ್ಚು ಹತ್ತಿಸಿ ಸಮ ಸಮಾಜದ ನಿರ್ಮಾಣಕ್ಕೆ ಸಮತೆಯನ್ನು ಬೋಧಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕು ಎಂದು ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಎಸ್.ಚಿನ್ನಸ್ವಾಮಿ ಸೋಸಲೆ ಅಭಿಪ್ರಾಯಪಟ್ಟಿದ್ದಾರೆ.

    ನಗರದ ಡಾ.ಗುಬ್ಬಿವೀರಣ್ಣ ಕಲಾ ಕ್ಷೇತ್ರದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
    ಕರ್ನಾಟಕ ಜನಸಂಸ್ಕೃತಿಯಲ್ಲಿ ಸಮಾನ ಭಾವ ಮೂಡಿಸಿ ವಾಸ್ತವತೆಯನ್ನು ಸಾರಿದ ಶರಣ ಸಾಹಿತ್ಯದ ರೂವಾರಿ ಬಸವಣ್ಣನವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಅಂತೆಯೇ ದೇಶದಾದ್ಯಂತ ತಳಸಮುದಾಯಗಳನ್ನು ಸಮತೆಯೆಡೆಗೆ ಸಾಗಲು ಬೆಳಕು ತೋರಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಅವಶ್ಯಕತೆಯಿದೆ ಎಂದರು.


    Provided by
    Provided by

    ಇತಿಹಾಸದಲ್ಲಿ ತಳ ಸಮುದಾಯದ ಓಬವ್ವ ಒಬ್ಬ ಕಾವಲುಗಾರನ ಪತ್ನಿಯಾಗಿ ಸ್ವಾಮಿನಿಷ್ಠೆಗಾಗಿ ಹಾಗೂ ತಮ್ಮ ರಾಜ್ಯದ ಉಳಿವಿಗಾಗಿ ಒನಕೆಯಿಂದ ಶತ್ರುಗಳನ್ನು ಸದೆ ಬಡಿದು ವೀರವನಿತೆಯಾದಳು. ಈ ಮೂಲಕ ಛಲವಾದಿ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಛಲವಾದಿ ಎಂಬ ಪದಕ್ಕೆ ಅರ್ಥ ತುಂಬಿ ನಿರೂಪಿಸಿದರು. ಅಂತೆಯೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಯಾವುದೇ ಫಲಾಪೇಕ್ಷೆಯಿಲ್ಲದೆ ಸಂವಿಧಾನ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿ ತಳ ಸಮುದಾಯದಲ್ಲಿ ಧೈರ್ಯ ತುಂಬಿದ್ದಾರೆ ಎಂದರು.

    ಸ್ವಾತಂತ್ರ್ಯ ಭಾರತದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರು ತಳ ಸಮುದಾಯಗಳನ್ನು ಹರಿ ಜನರೆಂದು ಕರೆದರೂ ಅಂಬೇಡ್ಕರ್ ಅವರು ತಮ್ಮ ಸಮುದಾಯದವರನ್ನು ನಿಮ್ಮ ಜನ ಎಂದು ಹೇಳುವ ಮೂಲಕ ಶೋಷಣೆಯ ನಿಜವಾದ ಅನುಭವವನ್ನು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶೋಷಿತ ಸಮುದಾಯಗಳಾದ ಕೆಳ ಜಾತಿಯ ಜನರು ಸಂವಿಧಾನದ ಆಶಯಗಳೊಂದಿಗೆ ತಮ್ಮ ಕೀಳರಿಮೆಯನ್ನು ಬಿಟ್ಟು ಶಿಕ್ಷಣದ ಮೂಲಕ ಪ್ರಜ್ಞಾವಂತರಾಗಿ ಮುಂಚೂಣಿಗೆ ಬರಬೇಕಿದೆ ಎಂದು ಕರೆ ನೀಡಿದರು.

    ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಅವರು, ಶತ್ರುಗಳ ವಿರುದ್ಧ ಏಕಾಂಗಿಯಾಗಿ ಹೋರಾಡಿ ಸಾಹಸ ಮೆರೆದ ವೀರ ಮಹಿಳೆ ಓಬವ್ವ ಶೌರ್ಯ, ಸ್ವಾಮಿನಿಷ್ಠೆ, ದೇಶಭಕ್ತಿಯ ಪ್ರತೀಕ ಎಂದರು.

    ನಾಡಿನ ವೀರವನಿತೆಯರಾದ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕನ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಧೀರ ಮಹಿಳೆಯೇ ಒನಕೆ ಓಬವ್ವ. ಯುದ್ದ ತಂತ್ರ ಅರಿಯದ ಒನಕೆ ಓಬವ್ವ ಕತ್ತಿ ಹಿಡಿಯದೇ ಕೈಗೆ ಸಿಕ್ಕಿದ ಒನಕೆಯಿಂದಲೇ ಶತ್ರುಗಳನ್ನು ಮಣಿಸುವ ಮೂಲಕ ತನ್ನ ನಾಡನ್ನು ರಕ್ಷಿಸಿದ ದೇಶಕ್ಕೆ ಆದರ್ಶ ಪ್ರಾಯರಾಗಿದ್ದಾರೆ ಎಂದು ಹೇಳಿದರು.

    ವೇದಿಕೆಯಲ್ಲಿ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ರಾಜೇಶ್ವರಿ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಟಿ. ಲಕ್ಷ್ಮೀನರಸಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎಂ. ಚಂದ್ರಶೇಖರ್, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಪ್ಪೇಸ್ವಾಮಿ ಎಂ.ಎನ್., ತುಮಕೂರು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣದಾಸ್, ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಸಿ. ಭಾನುಪ್ರಕಾಶ್, ದಲಿತ ಛಲವಾದಿ ಮಹಾಸಭಾ ಅಧ್ಯಕ್ಷ ಡಾ.ಪಿ.ಚಂದ್ರಪ್ಪ, ತುಮಕೂರು ಹಾಲು ಒಕ್ಕೂಟ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಜಿ. ಶ್ರೀನಿವಾಸನ್, ವೀರವನಿತೆ ಒನಕೆ ಓಬವ್ವ ಮಹಿಳಾ ಬಳಗ ಅಧ್ಯಕ್ಷ ಎಂ.ಆರ್. ವಿಜಯಲಕ್ಷ್ಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

    ಇದಕ್ಕೂ ಮುನ್ನ ಒನಕೆ ಓಬವ್ವನವರ ಭಾವಚಿತ್ರವನ್ನು ಬಿ.ಜಿ.ಎಸ್. ವೃತ್ತದಿಂದ ಡಾ.ಗುಬ್ಬಿವೀರಣ್ಣ ಕಲಾಕ್ಷೇತ್ರದವರೆಗೆ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ತರಲಾಯಿತು. ಈ ಮೆರವಣಿಗೆಯಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು.

    ಛಲವಾದಿ ಸಮುದಾಯದಲ್ಲಿ ವಿಶೇಷ ಸಾಧನೆಗೈದ 10 ಮಂದಿಗೆ ಗೌರವ:

    ಶಿಕ್ಷಣ ಕ್ಷೇತ್ರದಲ್ಲಿ ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮುಖ್ಯಸ್ಥೆ ಪ್ರೊ. ಎನ್. ಲಕ್ಷ್ಮೀ; ಸಂಗೀತ ಕ್ಷೇತ್ರದಲ್ಲಿ ಮಧುಗಿರಿ ವಿನಾಯಕ ನಗರದ ಎಲ್. ಲಲಿತಾಂಬ, ತುಮಕೂರು ತಾಲೂಕಿನ ಹಬ್ಬತ್ತನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ರತ್ನಮ್ಮ ಹೆಚ್.ಟಿ.; ಸಮಾಜಸೇವೆ ಕ್ಷೇತ್ರದಲ್ಲಿ ವೀರವನಿತೆ ಒನಕೆ ಓಬವ್ವ ಮಹಿಳಾ ಬಳಗ ಅಧ್ಯಕ್ಷೆ ವಿಜಯಲಕ್ಷ್ಮೀ ಎಂ.ಆರ್., ಮಹಾನಗರ ಪಾಲಿಕೆ ಪೌರಕಾರ್ಮಿಕರ ಲಲಿತಮ್ಮ, ತಿಪಟೂರು ತಾಲೂಕಿನ ಅಪ್ಪಾಜಯ್ಯ ಎನ್. ಹಾಗೂ ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿಯ ಗೌಡಗೆರೆ ವರದರಾಜು; ಜನಪದ ಕ್ಷೇತ್ರದಲ್ಲಿ ಪಾವಗಡ ತಾಲೂಕಿನ ನಿಡಗಲ್ ಹೋಬಳಿ ಶೈಲಾಪುರದ ಕಹಳೆ ತಿಮ್ಮಣ್ಣ, ಶಿರಾ ತಾಲೂಕಿನ ಬೇವಿನಹಳ್ಳಿ ಬಿ.ಕೆ. ನರಸಿಂಹರಾಜು; ಪತ್ರಿಕೋದ್ಯಮ ಕ್ಷೇತ್ರದಲ್ಲಿ ತುಮಕೂರು ತಾಲೂಕಿನ ಹೆಬ್ಬೂರು ಗಾಂಧಿನಗರದ ಹೆಚ್.ಎಸ್. ಪರಮೇಶ್ ಅವರಿಗೆ ಗಣ್ಯರಿಂದ ಸನ್ಮಾನಿಸಲಾಯಿತು.

    ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಹೆಚ್.ಎಂ. ಸೋನಾ, ನಂದನ್ ಕುಮಾರ್, ಎಲ್. ಚಿನ್ನಸ್ವಾಮಿ, ಕೆ.ಆರ್. ರಶ್ಮಿ, ಪುಷ್ಪಾಂಜಲಿ, ಎಂ. ಲಲಿತಾ, ಎಸ್.ಆರ್. ಯಶಸ್ ಹಾಗೂ ಆರ್. ನಂದನ್ ಕುಮಾರ್ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ಜಿ. ಸುಜಯ್, ಸಿ.ಬಿ. ಶ್ರೀರಕ್ಷಾ, ಧನುಶ್ರೀ, ಬಿ.ಎನ್. ಮೇಘನ, ವಿ.ಎಸ್. ನವ್ಯಶ್ರೀ, ಲಿಖಿತಾ ಅವರನ್ನು ಪುರಸ್ಕರಿಸಲಾಯಿತು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

    admin
    • Website

    Related Posts

    ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ ‘ಜಸ್ಟಿಸ್ ಫಾರ್ ಸೌಮ್ಯ’ ಚಿತ್ರ

    July 17, 2025

    ತುಮಕೂರಿಗೆ ಹೆಮ್ಮೆ: ಗೊಲನ ಎಂಟರ್‌ ಪ್ರೈಸಸ್‌ ಗೆ ಕೇಂದ್ರ ಸರ್ಕಾರದ ಮಾನ್ಯತೆ

    July 12, 2025

    ಅಕ್ರಮ ಭೂಕಬಳಿಕೆ ಆರೋಪ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಗೆ ಸನ್ಮಾನಿಸಲು ಯತ್ನಿಸಿದ KRS ಪಕ್ಷದ ಕಾರ್ಯಕರ್ತರು ಪೊಲೀಸ್ ವಶಕ್ಕೆ

    July 11, 2025
    Our Picks

    ವೇಶ್ಯಾವಾಟಿಕೆ ಮಾಡಲು ಒಪ್ಪದ ಸಂಗಾತಿಯ ಬರ್ಬರ ಹತ್ಯೆ!

    July 17, 2025

    ಯೆಮೆನ್ ನಲ್ಲಿ ನರ್ಸ್ ನಿಮಿಷಾ ಪ್ರಿಯಾ ಮರಣ ದಂಡನೆ ಮುಂದೂಡಿಕೆ

    July 16, 2025

    ಕರ್ನಾಟಕದ ಬೆಳವಣಿಗೆಗೆ ಹೊಸ ರಸ್ತೆಗಳ ಅಭಿವೃದ್ಧಿ: ನಿತಿನ್ ಗಡ್ಕರಿ

    July 15, 2025

    ಅಪಘಾತದಲ್ಲಿ ಪತ್ನಿ ಮಗ ಸಾವಿನ ಖಿನ್ನತೆಯಲ್ಲಿರುವಾಗಲೇ  ಹಿರಿಯ ಮ್ಯಾರಥಾನ್‌ ಓಟಗಾರ ಅಪಘಾತಕ್ಕೆ ಬಲಿ

    July 15, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಪ.ಜಾತಿ, ಪಂಗಡ ಅಧಿಕಾರಿಗಳು ಮತ್ತು ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ

    July 19, 2025

    ಸರಗೂರು:  ತಾಲ್ಲೂಕಿನ ಪ. ಜಾತಿ ಮತ್ತು ಪ. ಪಂಗಡ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷರಾಗಿ ಕ್ಲಾರ್ಕ್ ಕಂ ಡಿಇಒರಾದ…

    ತಾ.ಪಂ., ಜಿ.ಪಂ. ಚುನಾವಣೆ ನಡೆಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸರಗೂರು ಕೃಷ್ಣ ಆರೋಪ

    July 19, 2025

    ಶಾಸಕ ಪ್ರಭು ಚವ್ಹಾಣ್ ಪುತ್ರನ ವಿರುದ್ಧ ಮಹಿಳಾ ಆಯೋಗಕ್ಕೆ ಯುವತಿ ದೂರು ಸಲ್ಲಿಕೆ

    July 19, 2025

    ಖಾಸಗಿ ಬಸ್ ಪಲ್ಟಿ: 25ಕ್ಕೂ ಅಧಿಕ ಜನರಿಗೆ ಗಾಯ

    July 19, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.