ಅಯೋಧ್ಯೆ: ರಾಮಮಂದಿರದ ಪುರೋಹಿತರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಸ್ತ್ರ ಸಂಹಿತೆ ಜಾರಿ ಮಾಡಿದೆ ಮಾಡಿದ್ದು, ಅರ್ಚಕರಿಗೆ ವಿಶಿಷ್ಟ ಗುರುತು ನೀಡಲು ವಿಶಿಷ್ಟ ಬಟ್ಟೆಗಳನ್ನು ಧರಿಸುವ ನಿಯಮ ಜಾರಿಯಾಗಿದೆ.
ಎಲ್ಲ ಪುರೋಹಿತರಿಗೆ ಎರಡು ಸೆಟ್ ಹಳದಿ ನಿಲುವಂಗಿ, ಬಿಳಿ ಧೋತಿಗಳನ್ನು ನೀಡಲಾಗಿದೆ. ಇನ್ಮುಂದೆ ದೇವಾಲಯದಲ್ಲಿ ಇದೇ ಬಟ್ಟೆಗಳನ್ನು ಧರಿಸಲಿದ್ದಾರೆ.
ಪುರೋಹಿತರು, ಬಾಲರಾಮನ ಪೂಜೆ ಮಾಡಬೇಕು. ಇದರ ಜೊತೆಗೆ ಗರ್ಭಗುಡಿಯೊಳಗೆ ಫೋನ್ ಗಳ ಬಳಕೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.
ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಸೇರಿದಂತೆ ಒಟ್ಟು 14 ಅರ್ಚಕರು ರಾಮಮಂದಿರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ ಅರ್ಚಕರಿಗೆ ಡ್ರೆಸ್ ಕೋಡ್ ಎನ್ನುವುದು ಇರಲಿಲ್ಲ. ಈಗ ಎಲ್ಲ ಅರ್ಚಕರಿಗೂ ವಸ್ತ್ರ ಸಂಹಿತೆ ಜಾರಿ ಮಾಡಿ ಬಟ್ಟೆಗಳನ್ನು ನೀಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx