ಇತ್ತೀಚೆಗೆ ಮೊಬೈಲ್, ಇಂಟರ್ ನೆಟ್,ಸೋಶಿಯಲ್ ಮೀಡಿಯಾ, ರೀಲ್ಸ್ ಬಂದ ಮೇಲಂತು ಜನ ಫುಲ್ ಬ್ಯುಸಿಯಾಗಿದ್ದಾರೆ. ಒಂದು ವರ್ಗ ಇವುಗಳನ್ನು ನೋಡಿ ಮನರಂಜನೆ ತಕೊಂಡ್ರೆ , ಮತ್ತೊಂದು ವರ್ಗ ಮನರಂಜನೆ ಕೊಡುವಲ್ಲಿ ಬ್ಯುಸಿಯಾಗ್ಬಿಟ್ಟಿದೆ.
ದಿನ ಬೆಳಗಾದ್ರೆ ಸಾಕು. ವೈರಲ್ ನ್ಯೂಸ್ ಗಳದ್ದೇ ಹವಾ… ಭಿನ್ನ ಭಿನ್ನ ರೀತಿಯ ವೈರಲ್ ವಿಡಿಯೋಗಳು ನಿಮ್ಮನ್ನ ಸ್ವಾಗತ ಮಾಡುತ್ತವೆ. ಇದೀಗ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ. ಮಾತ್ರವಲ್ಲ ನೆಟ್ಟಿಗರಿಂದ ಬಾರಿ ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಅದೇನೆಂದರೆ ಮಹಿಳೆಯೊಬ್ಬಳು ಧರಿಸಿದ ಪಿಸ್ತಾ, ಬಾದಾಮ್, ಗೇರು ಬೀಜ, ಹೀಗೆ ಡ್ರೈ ಫ್ರೂಟ್ ಗಳನ್ನು ಬಳಸಿಕೊಂಡು ಮಾಡಲಾದ ಆಭರಣ.. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ತಾನು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದ್ರೆ ಚಿನ್ನವೇ ಬೇಕಾಗಿಲ್ಲ ಅನ್ನೋದಕ್ಕೆ ಇದೊಂದು ವಿಡಿಯೋನೇ ಸಾಕ್ಷಿ.. ಡ್ರೈ ಫ್ರೂಟ್ಸ್ ಗಳಿಂದಲೂ ಇಲ್ಲೊಬ್ಬರು ಮಹಿಳೆ ತನ್ನ ಸೀಮಂತ ಕಾರ್ಯಕ್ರಮಕ್ಕೆ ಚಿನ್ನದ ಆಭರಣಗಳನ್ನು ಬಳಸುವ ಬದಲು ಪಿಸ್ತಾ, ಬಾದಾಮ್, ಗೇರುಬೀಜಗಳಿಂದಲೇ ತಯಾರಿಸಲಾದ ಆಭರಣಗಳನ್ನು ಧರಿಸಿಕೊಂಡಿದ್ದಾರೆ.
ಡ್ರೈ ಫ್ರೂಟ್ ಬಳಸಿಕೊಂಡು ನೆಕ್ಲೇಸ್, ಕೈಗೆ ಬಳೆ, ಕಿವಿಗೆ ಜುಮ್ಕೆ, ಸೊಂಟ ಪಟ್ಟಿ, ಉಂಗುರ ಹೀಗೆ ಚಿನ್ನದ ಆಭರಣಗಳ ಬದಲಿಗೆ ಡ್ರೈ ಫ್ರೂಟ್ ಗಳನ್ನು ಬಳಸಿಕೊಂಡು ಆಭರಣ ತಯಾರಿಸಿ ಬಳಸಿಕೊಂಡಿದ್ದಾರೆ. ಈ ವಿಡಿಯೋ ಇನ್ಸ್ಟಾ ಗ್ರಾಮ್ ನಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ವೀಡಿಯೋಗೆ ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
