ತುಮಕೂರು: ಕುಣಿಗಲ್ ತಾಲ್ಲೂಕು ಕಗ್ಗೆರೆ ತೋಂಟದ ಶ್ರೀ ಸಿದ್ದಲಿಂಗೇಶ್ವರಸ್ವಾಮಿ ತಪೋಕ್ಷೇತ್ರದಲ್ಲಿ ನವೆಂಬರ್ 15ರಂದು ಸಂಜೆ 5:30 ಗಂಟೆಗೆ ಶ್ರೀ ತೋಂಟದ ಶ್ರೀ ಸಿದ್ದಲಿಂಗೇಶ್ವರಸ್ವಾಮಿಗೆ ಏಕಾದಶ ಸಹಸ್ರ ದೀಪೋತ್ಸವ ಸೇವೆ ಹಾಗೂ ರಾತ್ರಿ ಮುತ್ತಿನ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.
ಏಕಾದಶ ಸಹಸ್ರ ದೀಪೋತ್ಸವದ ಒಂದು ದೀಪಕ್ಕೆ 40 ರೂ.ಗಳನ್ನು ನಿಗದಿಪಡಿಸಲಾಗಿದೆ. ಭಕ್ತಾಧಿಗಳು ಪುದುವಟ್ ಸೇವಾ ಠೇವಣಿಯಲ್ಲಿ 500 ರೂ.ಗಳನ್ನು ತೊಡಗಿಸಿದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದ ಹುಣ್ಣಿಮೆ ದಿವಸ ಏಕಾದಶ ಸಹಸ್ರ ದೀಪೋತ್ಸವದಂದು ಒಂದು ದೀಪವನ್ನು ಹಚ್ಚಿಸುವ ಸೇವಾ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q