nammatumakuru

    Subscribe to Updates

    Get the latest creative news from FooBar about art, design and business.

    What's Hot

    ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ; ರಾಜ್‌ ಕುಮಾರ್ ಕುಟುಂಬದೊಂದಿಗೆ ಅವಿನಾಭಾವ ನಂಟು

    October 5, 2026

    ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ

    October 5, 2026

    AIಗೆ ಫೋಟೋ ಅಪ್‌ ಲೋಡ್ ಮಾಡುವ ಮುನ್ನ ಎಚ್ಚರ! ನಿಮ್ಮ ಚಿತ್ರಕ್ಕೆ ಏನಾಗಬಹುದು?

    October 5, 2026
    Facebook Twitter Instagram
    ಟ್ರೆಂಡಿಂಗ್
    • ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ; ರಾಜ್‌ ಕುಮಾರ್ ಕುಟುಂಬದೊಂದಿಗೆ ಅವಿನಾಭಾವ ನಂಟು
    • ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ
    • AIಗೆ ಫೋಟೋ ಅಪ್‌ ಲೋಡ್ ಮಾಡುವ ಮುನ್ನ ಎಚ್ಚರ! ನಿಮ್ಮ ಚಿತ್ರಕ್ಕೆ ಏನಾಗಬಹುದು?
    • ಜನಸಾಮಾನ್ಯರೇ ಗಮನಿಸಿ: ಅ.15ರಿಂದ UPIನಲ್ಲಿ ಹೊಸ ನಿಯಮ, ನಿಮ್ಮ ಹಣಕ್ಕೆ ಏನಾಗಲಿದೆ?
    • ಹಿಂದಿ ನಂತರ ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು? ಕನ್ನಡಕ್ಕೆ ಎಷ್ಟನೇ ಸ್ಥಾನ?
    • ತುಮಕೂರಿನ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಬೃಹತ್ ಉದ್ಯೋಗಾವಕಾಶ: ತಕ್ಷಣವೇ ನೇಮಕಾತಿ!
    • ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ
    • ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ನಂಟು ಆರೋಪ: ಬೀದರ್ ಜಿಲ್ಲೆಯ ಭಾಲ್ಕಿ ಮೂಲದ ಯುವಕನ ಬಂಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » “ಕಾರ್ಖಾನೆಗಳ ಮಸೂದೆ ( ಕರ್ನಾಟಕ ತಿದ್ದುಪಡಿ ) 2023 ” ಸರ್ಕಾರದಿಂದ ಅಂಗೀಕಾರ | ಎಚ್ಚರಗೊಳ್ಳಿ ಇಲ್ಲವೇ ಅನುಭವಿಸಿ
    ಲೇಖನ February 25, 2023

    “ಕಾರ್ಖಾನೆಗಳ ಮಸೂದೆ ( ಕರ್ನಾಟಕ ತಿದ್ದುಪಡಿ ) 2023 ” ಸರ್ಕಾರದಿಂದ ಅಂಗೀಕಾರ | ಎಚ್ಚರಗೊಳ್ಳಿ ಇಲ್ಲವೇ ಅನುಭವಿಸಿ

    By adminFebruary 25, 2023No Comments3 Mins Read
    vivekananda hk
    • ವಿವೇಕಾನಂದ ಎಚ್.ಕೆ.

    ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಕಾರ್ಖಾನೆಗಳ ಮಸೂದೆ ( ಕರ್ನಾಟಕ ತಿದ್ದುಪಡಿ ) 2023  ಇದೊಂದು ಅತ್ಯಂತ ಅಪಾಯಕಾರಿ ತಿದ್ದುಪಡಿ. ಈಗಾಗಲೇ ಬಸವಳಿದಿರುವ ಉದ್ಯೋಗಿಗಳು ಮತ್ತು ಅವರ ಬದುಕು ಮತ್ತಷ್ಟು ಅಧೋಗತಿಗೆ ಇಳೆಯಳಿದೆ. ಜೀವನ ಮತ್ತೂ ಯಾಂತ್ರೀಕೃತವಾಗಲಿದೆ.

    ” ದಿನದ ಕೆಲಸದ ಅವಧಿ 9 ರಿಂದ 12 ಗಂಟೆಗೆ ವಿಸ್ತರಣೆ ” ( ಷರತ್ತುಗಳು ಅನ್ವಯ ಎಂಬ ಕಣ್ಣೊರೆಸುವ ತಂತ್ರ……….

    ಇಡೀ ವಿಶ್ವದ ಮನುಷ್ಯನ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಗಮನಿಸಿ ಆತನ ದುಡಿಯುವ ಅವಧಿಯನ್ನು ವೈಜ್ಞಾನಿಕವಾಗಿ 8 ಗಂಟೆ ಎಂದು ನಿರ್ಧರಿಸಲಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಇದೇ ನಿಯಮವಿದೆ.

    ದಿನದ 24 ಗಂಟೆಗಳಲ್ಲಿ 8 ಗಂಟೆ ಉದ್ಯೋಗ, 8 ಗಂಟೆ ನಿದ್ರೆ, 8 ಗಂಟೆ ಇತರ ಚಟುವಟಿಕೆಗಳು. ಇದು ಸಾಮಾನ್ಯವಾಗಿ ಆರೋಗ್ಯವಂತ ಮನುಷ್ಯನ ದಿನಚರಿ ಇರಬೇಕು.

    ಸೂಕ್ಷ್ಮವಾಗಿ ಗಮನಿಸಿದರೆ 8 ಗಂಟೆಗಳ ಕೆಲಸದ ಅವಧಿಯ ಜೊತೆ ಅಲ್ಲಿಗೆ ಹೋಗಿ ಬರಲು  ಇತ್ತೀಚಿನ ವರ್ಷಗಳಲ್ಲಿ ಸುಮಾರು ಎರಡು ಗಂಟೆಯಷ್ಟು ಸಮಯ ತೆಗೆದುಕೊಳ್ಳುತ್ತದೆ. ನಗರಗಳಲ್ಲಿ ಇನ್ನೂ ಹೆಚ್ಚು. ಈಗಿನ‌ ನಿಯಮದಡಿ 12+2 = 14 ಗಂಟೆ ಎಂದಾದರೆ ನಿದ್ರೆ ಮತ್ತು ಇತರ ಕೆಲಸಗಳಿಗೆ ಉಳಿಯುವುದು ‌10 ಗಂಟೆಗಳು ಮಾತ್ರ. ಅದರಲ್ಲಿಯೇ ಸಂಸಾರ ಮನೆ ಮಕ್ಕಳು ಮನರಂಜನೆ ಕ್ರೀಡೆ ವಿಶ್ರಾಂತಿ ಓದು ಎಲ್ಲವೂ ನಡೆಯಬೇಕು.

    ಇದಕ್ಕಾಗಿ ಹೆಚ್ಚಿನ ಸಂಬಳ ದೊರೆಯುತ್ತದೆ ನಿಜ. ಈಗಾಗಲೇ ಹಣ ಕೇಂದ್ರಿತ ಸಮಾಜ ನೆಮ್ಮದಿಯನ್ನು ಕಳೆದುಕೊಂಡು ಸಂಬಂಧಗಳನ್ನು ಕಳೆದುಕೊಂಡು ಅಸಹನೆ – ‌ಅತೃಪ್ತಿಯಿಂದ ಬಳಲುತ್ತಿದೆ. ಬಿಪಿ ಶುಗರ್ ಥೈರಾಯ್ಡ್ ಗ್ಯಾಸ್ಟ್ರಿಕ್‌ ನಿದ್ರಾಹೀನತೆ ಮೊದಲಾದ ಖಾಯಿಲೆಗಳು ಪ್ರತಿ ಮನೆಯ ಅತಿಥಿಗಳಾಗಿವೆ.

    ಗಂಡ ಹೆಂಡತಿ ಇಬ್ಬರೂ ದುಡಿದರು ಬದುಕಿಗೆ ಹಣ ಸಾಕಾಗುತ್ತಿಲ್ಲ. ಸಂಬಳ ಜಾಸ್ತಿ ಮಾಡಿದರೂ ಪರೋಕ್ಷವಾಗಿ ಶಿಕ್ಷಣ ಆರೋಗ್ಯ ವಿದ್ಯುತ್ ನೀರು ಗ್ಯಾಸ್ ಸಾರಿಗೆ ಮೊಬೈಲ್ ಇಂಟರ್ನೆಟ್ ಆಹಾರ ಪದಾರ್ಥಗಳು ಮುಂತಾದ ಎಲ್ಲಾ ವಸ್ತುಗಳ ಬೆಲೆ ಏರಿಸಿ ಪರೋಕ್ಷವಾಗಿ ನಮ್ಮ ಹಣವನ್ನು ಹಗಲು ದರೋಡೆ ಮಾಡಲಾಗುತ್ತಿದೆ. ಈ ಕಡೆ ಕೊಟ್ಟು ಆ ಕಡೆ ಕಿತ್ತುಕೊಳ್ಳುವ ವ್ಯವಸ್ಥೆಯಲ್ಲಿ ಯಾರಿಗಾಗಿ ನಮ್ಮ ಅಪೂರ್ವ ಬದುಕನ್ನು ಕಳೆದುಕೊಳ್ಳಬೇಕು.

    ಇದು ಮೇಲ್ನೋಟದ ಸಮಸ್ಯೆ. ಆಂತರಿಕವಾಗಿ ದಿನದಲ್ಲಿ ಇಷ್ಟು ದೀರ್ಘಕಾಲ ಕೆಲಸ ಮಾಡಿದರೆ ಕೆಲಸದ ಗುಣಮಟ್ಟ ಕುಸಿಯುತ್ತದೆ. ಆರೋಗ್ಯ ಹಾಳಾಗುತ್ತದೆ. ಉತ್ಪಾದನೆ ಕಡಿಮೆಯಾಗುತ್ತದೆ. ಕೌಟುಂಬಿಕ ವ್ಯವಸ್ಥೆಗೆ ತೊಂದರೆಯಾಗುತ್ತದೆ. ಮಕ್ಕಳ ಪಾಲನೆ ಪೋಷಣೆ ಹಿರಿಯರ ಬಗೆಗಿನ ಕಾಳಜಿ ಕಡಿಮೆಯಾಗುತ್ತದೆ.

    ಪುರುಷರಂತೆ ಮಹಿಳೆಯರಿಗು ದಿನದ 24 ಗಂಟೆ ದುಡಿಯಲು ಅನುಮತಿಯನ್ನು ನೀಡಲಾಗಿದೆ. ರಾಜ್ಯದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿ ಆರ್ಥಿಕ ಅಭಿವೃದ್ಧಿ ಸಾಧಿಸುವ ಯೋಚನೆ ಮತ್ತು ಯೋಜನೆ ಇದರ ಹಿಂದಿದೆ. ಆದರೆ ಸಾಮಾಜಿಕ ಮತ್ತು ವೈಯಕ್ತಿಕ ಹಿತಾಸಕ್ತಿಗಳನ್ನು ಕಡೆಗಣಿಸಲಾಗಿದೆ. ಬಹುಶಃ ಇದನ್ನೇ ಅತಿಯಾಸೆ ಅಥವಾ ದುರಾಸೆ ಎನ್ನುವುದು.

    ಇದಕ್ಕೆಲ್ಲ ಕೆಲಸಗಾರರ ಲಿಖಿತ ಒಪ್ಪಿಗೆ ಅವಶ್ಯಕ ಎಂಬ ಷರತ್ತು ವಿಧಿಸಲಾಗಿದೆ. ಇದು ಕೇವಲ ಒಂದು ತಂತ್ರ ಮಾತ್ರ. ಏಕೆಂದರೆ ಇದಕ್ಕೆಲ್ಲ ಒಪ್ಪಿದರೆ ಮಾತ್ರವೇ ಕೆಲಸ ಕೊಡುತ್ತಾರೆ. ಇಲ್ಲದಿದ್ದರೆ ಇಲ್ಲ. ಒಪ್ಪದಿದ್ದರೆ ಬೇರೆ ಕಾರಣ ನೀಡಿ ಕೆಲಸದಿಂದ ತೆಗೆಯುತ್ತಾರೆ. ಇದು ಬಹಿರಂಗ ಸತ್ಯ. ಉದ್ಯೋಗದ ಅನಿವಾರ್ಯತೆ ಸೃಷ್ಟಿಸಿರುವಾಗ ಕೆಲಸಗಾರನೊಬ್ಬ ತನಗೆ ಅನುಕೂಲಕರ ನಿಯಮ ರೂಪಿಸಲು ‌ಸಾಧ್ಯವೇ…

    ದಿನಕ್ಕೆ8 ಗಂಟೆಗಳ ಕೆಲಸವೇ ಅತ್ಯುತ್ತಮ. ಆ ಕೆಲಸದ ಸಮಯದಲ್ಲಿಯೇ ಅತ್ಯಂತ ಪ್ರಾಮಾಣಿಕವಾಗಿ, ದಕ್ಷವಾಗಿ, ಆತ್ಮಸಾಕ್ಷಿಯಾಗಿ ಕೆಲಸ ಮಾಡಲು ಬೇಕಾದ ವಾತಾವರಣ ಮತ್ತು ಮನಸ್ಥಿತಿ ಕಲ್ಪಿಸುವ ನಿಟ್ಟಿನಲ್ಲಿ ಮತ್ತಷ್ಟು ಸುಧಾರಣೆಯ ಕ್ರಮಗಳು ಸ್ವಾಗತಾರ್ಹ. ಶಿಕ್ಷಣ ಆರೋಗ್ಯ ಮತ್ತು ಮಾರುಕಟ್ಟೆಯ ಬೆಲೆಗಳ ಮೇಲೆ ನಿಯಂತ್ರಣ ಸಾಧಿಸುವುದು ಅಷ್ಟೇ ಮುಖ್ಯ. ಅಪಘಾತ, ಅಪರಾಧ, ಅನಾರೋಗ್ಯ, ಆತ್ಮಹತ್ಯೆ ಇವುಗಳ ನಿಯಂತ್ರಣ ಸಹ ಬಹುಮುಖ್ಯ. ಗಾಳಿ ನೀರು ಆಹಾರ ಪರಿಸರದ ಶುದ್ದತೆಗೂ ಪ್ರಾಮುಖ್ಯತೆ ನೀಡಬೇಕು. ಆಗ ಕೆಲಸದ ಅವಧಿಯ ಹೆಚ್ಚಳದ ಅವಶ್ಯಕತೆಯೇ ಇರುವುದಿಲ್ಲ.

    ಇಲ್ಲದಿದ್ದರೆ ದಿನದ 24 ಗಂಟೆ ದುಡಿದರು, ಲಕ್ಷ ಲಕ್ಷ ಸಂಬಳ ಪಡೆದರು ಪ್ರಯೋಜನವಿಲ್ಲ. ಬದುಕು ಅತೃಪ್ತ‌ ಆತ್ಮವಾಗಿಯೇ ಉಳಿಯುತ್ತದೆ. ಯೋಚಿಸಿ ಮತ್ತು ಸರ್ಕಾರದ ಕ್ರಮವನ್ನು ಪ್ರಶ್ನಿಸಿ. ಪಕ್ಷ ಯಾವುದಾದರೂ ಇರಲಿ ಸಮಾಜ – ಬದುಕು ಜನಸಾಮಾನ್ಯರಾದ ನಮ್ಮದು. ಕೆಲಸ ಮಾಡುವವರು ನಾವು ಮತ್ತು ನಮ್ಮ ಹೆಂಡತಿ ಮಕ್ಕಳು…

    ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

    ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

    ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,

    ಮನಸ್ಸುಗಳ ಅಂತರಂಗದ ಚಳವಳಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಹಿಂದಿ ನಂತರ ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು? ಕನ್ನಡಕ್ಕೆ ಎಷ್ಟನೇ ಸ್ಥಾನ?

    October 5, 2026

    ಶಿವನ ಕೊರಳಿನಿಂದ ಬುದ್ಧನ ಧ್ಯಾನದವರೆಗೆ ನಾಗರಹಾವಿನ ನಂಟೇಕೆ? ಹಿಂದೂ, ಬೌದ್ಧ, ಜೈನ ಧರ್ಮಗಳಲ್ಲಿರುವ ನಿಗೂಢ ನಂಬಿಕೆಯ ಕಥೆ ಇಲ್ಲಿದೆ!

    October 4, 2026

    ‘ಕಸ’ವೇ ಇಲ್ಲಿ ಹರಕೆ! ಹಳೆಯ ವಸ್ತುಗಳನ್ನು ದೇವಿಗೆ ಅರ್ಪಿಸುವ ಅಪರೂಪದ ಆಚರಣೆ ಎಲ್ಲಿದೆ ಗೊತ್ತಾ?

    October 2, 2026

    Comments are closed.

    Our Picks

    ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ

    October 5, 2026

    ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್‌ ಗೆ ಬಿಗ್ ಶಾಕ್: ಟೆಸ್ಟ್ ಕನಸು ಅಪೂರ್ಣ!

    October 3, 2026

    ಫ್ಲೈದುಬೈ ವಿಮಾನ ದಾಳಿ: ಪ್ರಧಾನಿ ಮೋದಿಯೊಂದಿಗೆ ಮಾತನಾಡಿದ ಗಾಯಗೊಂಡ ಪೈಲಟ್ ಸ್ಮಿತ್ ಮಚ್ಚಾರ್ ಹೇಳಿದ್ದೇನು ?

    October 2, 2026

    ಇಂದಿನಿಂದ ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್, ವಿಮಾನ ಇಂಧನ (ATF) ದರ ಏರಿಕೆ

    October 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ; ರಾಜ್‌ ಕುಮಾರ್ ಕುಟುಂಬದೊಂದಿಗೆ ಅವಿನಾಭಾವ ನಂಟು

    October 5, 2026

    ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ, ಚಿತ್ರಕಥೆಗಾರ ಸಿಂಗೀತಂ ಶ್ರೀನಿವಾಸ ರಾವ್ (94) ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಆರೋಗ್ಯ…

    ನೀಲಿ ಶಿವಲಿಂಗದ ಹಿಂದಿದೆ ಅಚ್ಚರಿಯ ಕಥೆ; ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುತ್ತಿದೆ ಅಪರೂಪದ ಶಿಲೆ

    October 5, 2026

    AIಗೆ ಫೋಟೋ ಅಪ್‌ ಲೋಡ್ ಮಾಡುವ ಮುನ್ನ ಎಚ್ಚರ! ನಿಮ್ಮ ಚಿತ್ರಕ್ಕೆ ಏನಾಗಬಹುದು?

    October 5, 2026

    ಜನಸಾಮಾನ್ಯರೇ ಗಮನಿಸಿ: ಅ.15ರಿಂದ UPIನಲ್ಲಿ ಹೊಸ ನಿಯಮ, ನಿಮ್ಮ ಹಣಕ್ಕೆ ಏನಾಗಲಿದೆ?

    October 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.