ನವದೆಹಲಿ: ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನಾನಿರತ ರೈತನ ಸಾವಿಗೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರ ವಿರುದ್ಧ “ಕೊಲೆ” ಪ್ರಕರಣ ದಾಖಲಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಗುರುವಾರ ಒತ್ತಾಯಿಸಿದೆ.
ಹರಿಯಾಣ ಪೊಲೀಸರು ಮತ್ತು ಪಂಜಾಬ್ ರೈತರ ನಡುವಿನ ಘರ್ಷಣೆಯಲ್ಲಿ ರೈತ ಸುಭಕರನ್ ಸಿಂಗ್(21) ಅವರು ಬುಧವಾರ ಸಾವನ್ನಪ್ಪಿದ್ದು, ದೆಹಲಿ ಚಲೋ ಮೆರವಣಿಗೆಯನ್ನು ಎರಡು ದಿನ ಸ್ಥಗಿತಗೊಳಿಸಲಾಗಿದೆ.
ಈಗ ರದ್ದಾದ ಕೃಷಿ ಕಾನೂನುಗಳ ವಿರುದ್ಧ 2020–21ರಲ್ಲಿ ನಡೆದ ಉಗ್ರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್ಕೆಎಂ, ಯುವ ರೈತನ ಸಾವಿಗೆ ಸಂತಾಪ ಸೂಚಿಸಲು ಶುಕ್ರವಾರ ‘ಕರಾಳ ದಿನ’ ಆಚರಿಸುವುದಾಗಿ ಘೋಷಿಸಿದೆ.