ವಿಜಯಪುರ: ನಗರದ ಹೊರವಲಯದಲ್ಲಿರುವ ಇಟ್ಟಿಗೆ ಭಟ್ಟಿಯ ಮಾಲೀಕರಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶೋಷಿತ ಸಮುದಾಯದ ಕೂಲಿ ಕಾರ್ಮಿಕರನ್ನು ಮಾಜಿ ಸಚಿವ, ಶೋಷಿತರ ಗಟ್ಟಿ ಧ್ವನಿ ಹೆಚ್.ಆಂಜನೇಯ ಅವರು ಇಂದು ಭೇಟಿಯಾಗಿ, ವೈಯಕ್ತಿಕ ಧನಸಹಾಯ ಮಾಡಿ, ಸಾಂತ್ವನ ಹೇಳಿದರು.
ಇತ್ತೀಚೆಗೆ ನಡೆದ ಈ ಅಮಾನವೀಯ ಘಟನೆಯ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಈ ಘಟನೆಯಿಂದ ಇಡೀ ಮನುಕುಲವೇ ಬೆಚ್ಚಿಬೀಳುವ ಜೊತೆಗೆ ಮಮ್ಮಲ ಮರುಗಿ ಹಲ್ಲೆ ನಡೆಸಿದವರ ಮೇಲೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಎಂಬ ಕಾರ್ಮಿಕರು ಹಬ್ಬಕ್ಕೆ ಊರಿಗೆ ಹೋದವರು ತಡವಾಗಿ ಬಂದರು ಎಂಬ ಕಾರಣಕ್ಕೆ ಇಟ್ಟಿಗೆ ಭಟ್ಟಿಯ ಮಾಲೀಕ ಮತ್ತು ಅವನ ಮಗ ಹಾಗೂ ಸಹಚರರು ಈ ಮೂವರು ಕೂಲಿಕಾರ್ಮಿಕರ ಪಾದ ಮತ್ತು ಕೈಗಳಿಗೆ ಪೈಪುಗಳಿಂದ ಮನಸೋ ಇಚ್ಛೆ ಥಳಿಸಿ, ಕಣ್ಣಿಗೆ ಖಾರದಪುಡಿ ಎರಚಿದ್ದರು.
ಮೂರು ದಿನಗಳಿಂದ ನಿರಂತರವಾಗಿ ಹಲ್ಲೆಗೊಳಗಾಗಿ ತೀವ್ರ ಅಸ್ವಸ್ಥರಾಗಿದ್ದ ಕೂಲಿ ಕಾರ್ಮಿಕರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡುತ್ತಿರುವ ಸುದ್ಧಿ ತಿಳಿದ ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರು ತಕ್ಷಣವೇ ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಮತ್ತು ಸಹಾಯ ವ್ಯವಸ್ಥೆ ಮಾಡಿ ಇಂದು ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಕಾರ್ಮಿಕರ ಆರೋಗ್ಯ ವಿಚಾರಿಸಿ, ವೈದ್ಯರಿಂದ ಮಾಹಿತಿ ಪಡೆದು, ವೈಯಕ್ತಿಕವಾಗಿ ಧನಸಹಾಯ ಮಾಡುವ ಜೊತೆಗೆ ಧೈರ್ಯವಾಗಿರುವಂತೆ ತಿಳಿಸಿದರು.
ಆಂಜನೇಯ ಅವರು ವಿಶೇಷವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಕರೆ ಮಾಡಿ ಸಂತ್ರಸ್ತರೊಂದಿಗೆ ನೇರವಾಗಿ ಮಾತನಾಡಿಸುವ ಮೂಲಕ ಈ ವಿಲಕ್ಷಣ ಮತ್ತು ಅನಾಗರಿಕ ಘಟನೆಯ ವಸ್ತು ಸ್ಥಿತಿಯನ್ನು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಟ್ಟು ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದರು.
BLDE ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ , ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಆಪ್ತ ಕಾರ್ಯದರ್ಶಿ — ಡಾ.ಮಹಾಂತೇಶ್ ಬಿರಾದಾರ್, ಕಾಂಗ್ರೆಸ್ ಮುಖಂಡರಾದ — ಅಬ್ದುಲ್ ಹಮೀದ್ ಮುಶರಫ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ — ಮಲ್ಲಿಕಾರ್ಜುನ ಲೋಣಿ, ಉಪಾಧ್ಯಕ್ಷರಾದ — ಗಂಗಾಧರ್ ಶಾಂಬನ್ನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ- – ಸುಭಾಶ ಕಾಲೇಬಾಗ್, ಕಾಂಗ್ರೆಸ್ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ — ರಮೇಶ್ ಗುಬ್ಬೇವಾಡ, ಡಿ.ಎಸ್.ಎಸ್. ಮುಖಂಡರಾದ — ಶಾಸ್ತ್ರಿ ಹೊಸಮನಿ, ಮಾದಿಗ ಸಮುದಾಯದ ಜಿಲ್ಲಾ ಮುಖಂಡರಾದ — ಪರಶುರಾಮ ರೊಣಿಹಾಳ, ಕೃಷ್ಣಾ ರತ್ನಾಕರ, ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಆದ ಸಾಯಿಕುಮಾರ್ ಬಿಸ್ನಾಳ, ಡಿ.ಎಸ್.ಎಸ್ ಜಿಲ್ಲಾ ಮುಖಂಡರಾದ ವೈ.ಸಿ.ಮಯೂರ, ಐಯಪ್ಪ ದೊಡಮನಿ ಮತ್ತು ಸ್ಥಳೀಯ ಡಿವೈಎಸ್ಪಿ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮುಖಂಡರು, ಸಾರ್ವಜನಿಕರು, ಅಭಿಮಾನಿಗಳು ಸೇರಿದಂತೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ದಲಿತ ಮುಖಂಡರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx