ತುಮಕೂರು: ಸಂವಿಧಾನಾತ್ಮಕ ಮೌಲ್ಯಗಳು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಬುಧವಾರ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ತುಮಕೂರುನಲ್ಲಿ ನಡೆಸಲಾಯಿತು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮಂಜುನಾಥ ಆರ್. ಮಾತನಾಡಿ, ಭಾರತದ ಸಂವಿಧಾನ ನಮ್ಮ ಜೀವ ಮತ್ತು ಜೀವನದ ವಿಧಾನಗಳ ರಕ್ಷಕವಾಗಿದೆ. ನಮ್ಮ ವ್ಯಕ್ತಿತ್ವದ ಘನತೆ ಮತ್ತು ಗೌರವಗಳ ಉನ್ನತಿಯ ಮಾರ್ಗದರ್ಶಕವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಂವಿಧಾನದ ಮೌಲ್ಯಗಳನ್ನು ಅನುಸರಿಸಬೇಕು. ಮತ್ತು ಕುಟುಂಬ, ಸಮಾಜ, ಸಂವಿಧಾನ, ದೇಶದ ಪ್ರಭಾವಿ ಪ್ರಜೆಯಾಗಿ ಹೊರಹೊಮ್ಮಲು ಇದು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ತುಮಕೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಸಯೀದ್ ಅಕ್ರಂ ಅಲಿ ಅವರು ಮಾತನಾಡಿ, ಪ್ರಸ್ತುತ ಜನಪ್ರತಿನಿಧಿಗಳು, ಸರ್ಕಾರಗಳು, ಮತ್ತು ನ್ಯಾಯಾಂಗಗಳ ವರ್ತನೆ ಸಂವಿಧಾನಾತ್ಮಕವಾಗಿರಬೇಕು. ದೇಶದ ಪ್ರಜೆಗಳು ಇಂದು ತಮ್ಮ ಜವಾಬ್ದಾರಿಗಳನ್ನು ಅರಿತು ನಡೆದುಕೊಳ್ಳುವ ಅನಿವಾರ್ಯತೆಗಳ ಅರಿವಿನ ಬಗ್ಗೆ ಮಾಹಿತಿ ತಿಳಿಸಿದರು.
ಪ್ರಾಂಶುಪಾಲರಾದ ಸಿ. ಸಿ.ಬಾರಕೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನದಲ್ಲಿ ನಮಗೆ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೀಡಲಾಗಿದೆ. ನಾವುಗಳು ಕೇವಲ ಹಕ್ಕುಗಳನ್ನು ಮಾತ್ರ ಕೇಳುತ್ತೇವೆ, ಆದರೆ ಕರ್ತವ್ಯಗಳನ್ನು ನಿರ್ವಹಿಸಲು ನಿರ್ಲಕ್ಷ್ಯವನ್ನು ತೋರುತ್ತೇವೆ ಇದರಿಂದ ಸಹಜವಾಗಿ ನಾವುಗಳು ತಪ್ಪಿಸ್ಥತರಾಗುತ್ತೇವೆ ಎಂಬ ಪರಿಜ್ಞಾನ ನಮಗೆ ಇರಬೇಕಾಗುತ್ತದೆ ಎಂದರು.
ವೈಷ್ಣವಿ ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮ ಸಂಯೋಜಕರಾದ ರಂಗಸ್ವಾಮಿ ಆರ್. ಸ್ವಾಗತಿಸಿದರು, ಕುಮಾರಿ ಹರಿಣಿ ಬಿ. ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW