ಹೆಚ್.ಡಿ.ಕೋಟೆ: ತಾಲೂಕು ಪಡುಕೋಣೆ ಗ್ರಾಮ ಪಂಚಾಯತಿಯ ಕೇಂದ್ರ ಸ್ಥಾನದಲ್ಲಿ ಇಂದು ಡ್ರೀಮ್ ಇಂಡಿಯಾ ಟ್ರಸ್ಟ್ ಅನ್ನು ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ಮಾತಾನಾಡಿ, ಈ ಟ್ರಸ್ಟ್ ಹೆಸರಿನಲ್ಲಿಯೇ ಭವ್ಯಭಾರತದ ಕನಸಿದೆ, ಈ ಕನಸನ್ನು ನನಸು ಮಾಡಲಿಕ್ಕೆ ನಾವೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು, ಎಂತಹ ಸಂದರ್ಭದಲ್ಲೂ ಎದೆಗುಂದಬಾರದು ಬಡವರನ್ನ ಮತ್ತು ಶೋಷಿತ ಸಮುದಾಯಗಳನ್ನ ಜಾಗೃತಿಗೊಳಿಸುವಂತ ಅವರನ್ನ ಅಭಿವೃದ್ಧಿ ಪಡಿಸುವಂತ ಕೆಲಸ ಮಾಡಿ ಎಂದು ಸಲಹೆ ನೀಡಿದರು
ಮುಖ್ಯ ಅತಿಥಿಯಾಗಿ ಜೀವಿಕ ರಾಜ್ಯ ಸಂಘಟನಾ ಸಂಚಾಲಕ ಉಮೇಶ್ ಬಿ. ನೂರಲಕುಪ್ಪೆ ಮಾತಾನಾಡಿ, ಟ್ರಸ್ಟ್ ಗಳು ಹುಟ್ಟುತ್ತವೆ ಸಾಯುತ್ತವೆ ಆದರೆ ಜನಸಾಮಾನ್ಯರ ಪರವಾಗಿ ಸೇವೆ ಮಾಡಿದ ಸಂಘ ಸಂಸ್ಥೆಗಳು ಶಾಶ್ವತವಾಗಿ ಉಳಿಯುತ್ತವೆ, ನಮ್ಮಲ್ಲೆ ಕೆಲವು ವ್ಯಕ್ತಿಗಳು ಸೇರಿ ವ್ಯಾಟ್ಸ್ ಆಪ್ ಗ್ರೂಪ್ ಮಾಡಿಕೊಂಡು ಜನರಿಂದ ವಂತಿಕೆಯನ್ನ ಸಂಗ್ರಹಿಸಿ ಅದೇ ಹಣವನ್ನು ಜನರಿಗೆ ವಿನಿಯೋಗಿಸುವಂತಹ ಮಹತ್ತರವಾದ ಕೆಲಸ ಮಾಡುತ್ತಿವೆ ಇಂತಹ ಸಂಘ ಸಂಸ್ಥೆಗಳು ನಮಗೆ ಆದರ್ಶವಾಗಿವೆ, ಡ್ರೀಮ್ ಇಂಡಿಯಾ ಟ್ರಸ್ಟ್ ಕೂಡ ಪ್ರಾಮಾಣಿಕವಾಗಿ ಜನಸೇವೆ ಮಾಡಲಿ ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಟ್ರಸ್ಟ್ ನಿರ್ದೇಶಕ ಸಚ್ಚಿನ್ ಮಾತಾನಾಡಿ, ನಾವು ಪಟ್ಟಣದಿಂದ ದೂರ ಇರುವ ಮತ್ತು ಮೂಲಭೂತ ಸವಲತ್ತು ಗಳಿಂದ ವಂಚಿತವಾಗಿರುವ ಪಡುಕೋಟೆ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಈ ಭಾಗದ ವಿದ್ಯಾವಂತ ಯುವಕರು ಸೇರಿ ಟ್ರಸ್ಟ್ ಮಾಡಿಕೊಂಡು ಶಿಕ್ಷಣ, ಆರೋಗ್ಯ, ಕೃಷಿ, ನಿರುದ್ಯೋಗ ಮತ್ತು ಜಾಗೃತಿ ಕಾರ್ಯಕ್ರಮಗಳನ್ನ ಮಾಡುವ ಉದ್ದೇಶದಿಂದ ಪ್ರಾರಂಭಿಸಿದ್ದೇವೆ ಈ ಟ್ರಸ್ಟ್ ಗೆ ಸ್ಥಳೀಯರು, ಅಧಿಕಾರಿಗಳು ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯ ಎಂದರು.
ಟ್ರಸ್ಟ್ ಬೆಳವಣಿಗೆ ಕುರಿತು ಕುರುಬ ಸಂಘದ ಜಿಲ್ಲಾಧ್ಯಕ್ಷ ಕೋಟೆ ಶಿವಪ್ಪ, ತಾಲೋಕು ಪಂಚಾಯತಿ ಮಾಜಿ ಸದಸ್ಯ ಟಿ.ವೆಂಕಟೇಶ, ಸ್ವರ್ಣಭೂಮಿ ಫೌಂಡೇಶನ್ ಅಧ್ಯಕ್ಷ ಶಿವಕುಮಾರ್ ರವರು ಮಾತಾನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಜ್ ಮನ್ನೀಸಾ ವಹಿಸಿದ್ದರು. ವೇದಿಕೆಯಲ್ಲಿ ಪ್ರಶಾಂತ್ ಕುಮಾರ್, ಶ್ರೀಮತಿ ವಸಂತ, ಸಿಸ್ಟರ್ ಅಪೋಲಿಯನ್, ಟ್ರಸ್ಟ್ ಪದಾಧಿಕಾರಿಗಳಾದ ರವಿ, ಸಚಿನ್. ವಿ, ಪೀಟರ್, ಮತ್ತಿತರರು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4