nammatumakuru

    Subscribe to Updates

    Get the latest creative news from FooBar about art, design and business.

    What's Hot

    ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್

    October 13, 2026

    ಅಕ್ಟೋಬರ್ 15ರಂದು ಸಚಿವ ಈಶ್ವರ್ ಖಂಡ್ರೆ ಅವರಿಗೆ ಮಾದಿಗ ಸಮಾಜದಿಂದ ಅಭಿನಂದನಾ ಸಮಾರಂಭ

    October 13, 2026

    ಸಂಪಾದಕೀಯ: ಇಪಿಎಫ್‌ ಒ ಸಮಯೋಚಿತ ಸುತ್ತೋಲೆ ಮತ್ತು ಉದ್ಯಮ ರಂಗದ ವಾಸ್ತವ

    October 13, 2026
    Facebook Twitter Instagram
    ಟ್ರೆಂಡಿಂಗ್
    • ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್
    • ಅಕ್ಟೋಬರ್ 15ರಂದು ಸಚಿವ ಈಶ್ವರ್ ಖಂಡ್ರೆ ಅವರಿಗೆ ಮಾದಿಗ ಸಮಾಜದಿಂದ ಅಭಿನಂದನಾ ಸಮಾರಂಭ
    • ಸಂಪಾದಕೀಯ: ಇಪಿಎಫ್‌ ಒ ಸಮಯೋಚಿತ ಸುತ್ತೋಲೆ ಮತ್ತು ಉದ್ಯಮ ರಂಗದ ವಾಸ್ತವ
    • ಹೆಚ್.ಐ.ವಿ ನಿಯಂತ್ರಣಕ್ಕೆ ಜನಜಾಗೃತಿ ಅತ್ಯಗತ್ಯ: ಜಿಲ್ಲಾಧಿಕಾರಿ ಸ್ನೇಹಲ್ ಆರ್.
    •  ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ?  ಹವಾಮಾನ ವರದಿ ಏನು ಹೇಳುತ್ತದೆ; ನಿಮ್ಮ ಜಿಲ್ಲೆಯಲ್ಲಿ ಮಳೆಯಾಗುತ್ತಾ?
    • iPhone ಹೆಸರಿನಲ್ಲಿರುವ ‘i’ ಅಂದ್ರೆ ಏನು ?ಸ್ಟೀವ್ ಜಾಬ್ಸ್ ನೀಡಿದ್ದ 5 ಅರ್ಥಗಳೇನು?
    • 2027ರಲ್ಲಿ 10 ಗ್ರಾಂ ಚಿನ್ನದ ಬೆಲೆ ₹3 ಲಕ್ಷ ಮುಟ್ಟುತ್ತಾ? ಬಾಬಾ ವಂಗಾ ಭವಿಷ್ಯವಾಣಿಯ ಅಸಲಿಯತ್ತೇನು?
    • PF ಹಣ ಇನ್ನೂ ಬಂದಿಲ್ಲವೇ? ವಿಳಂಬವಾದರೆ ಹೀಗೆ ಮಾಡಿ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹಾಡಹಗಲೇ ವೃದ್ಧ ದಂಪತಿಯನ್ನು ಯಾಮಾರಿಸಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳ
    ಕೊರಟಗೆರೆ May 19, 2022

    ಹಾಡಹಗಲೇ ವೃದ್ಧ ದಂಪತಿಯನ್ನು ಯಾಮಾರಿಸಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳ

    By adminMay 19, 2022No Comments2 Mins Read
    kotakare

    ಕೊರಟಗೆರೆ: ವಯೋವೃದ್ಧರಿಗೆ 10 ಸಾವಿರ ರೂಪಾಯಿಯ ಆಸೆ ತೋರಿಸಿ, ಸುಮಾರು 5 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಘಟನೆ ಕೊರಟಗೆರೆ ಪಟ್ಟಣದ ದೊಡ್ಡಪೇಟೆ ಬಡಾವಣೆಯಲ್ಲಿ ನಡೆದಿದ್ದು, ಇದೀಗ ಒಡವೆಗಳನ್ನು ಕಳೆದುಕೊಂಡ ವೃದ್ಧರು ಕಂಗಾಲಾಗಿದ್ದಾರೆ.

    ಕೊರಟಗೆರೆ ಪಟ್ಟಣದ ದೊಡ್ಡಪೇಟೆ ಬಡಾವಣೆಯ ಗಿರಿಜಮ್ಮ ರೇಣುಕಪ್ಪ ಎಂಬ ವೃದ್ಧ ದಂಪತಿಯ ಮನೆಗೆ ಬಂದ  ಅಪರಿಚಿತ ವ್ಯಕ್ತಿಯೊಬ್ಬ ಕಣ್ಣಿನ ಆಪರೇಶನ್ ಮಾಡಿಸಿದರೆ ಹತ್ತು ಸಾವಿರ ರೂಪಾಯಿ ಉಚಿತ ಹಣವನ್ನು ಕೊಡುತ್ತಾರೆ ಎಂದು ವೃದ್ಧರನ್ನು ನಂಬಿಸಿದ್ದಾನೆ. ಇವರ ಆಧಾರ್ ಕಾರ್ಡ್ ನಂಬರ್ ಪೆನ್ಷನ್ ಕ್ಲಿಪ್ ಪಡೆದುಕೊಂಡು ವೃದ್ಧರನ್ನು ನಂಬಿಸಿದ್ದಾನೆ.

    ಇದಾದ ಬಳಿಕ ಅಜ್ಜಿಯನ್ನು ತನ್ನ ಬೈಕ್ ನಲ್ಲಿ ಕೂರಿಸಿಕೊಂಡು  ಆಸ್ಪತ್ರೆಯ ಬಳಿಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ಆಪರೇಷನ್ ಮಾಡುವಾಗ ಒಡವೆಯನ್ನು ಯಾರಾದರೂ ಕೊಂಡುಹೋಗುತ್ತಾರೆ. ನನ್ನ ಬಳಿಯಲ್ಲಿ ಕೊಡಿ ನಾನು ನೋಡಿಕೊಳ್ಳುತ್ತೇನೆ ಎಂದು ಅಜ್ಜಿಯನ್ನು ನಂಬಿಸಿದ್ದಾನೆ. ಈತನ ಮಾತು ನಂಬಿ ಅಜ್ಜಿ ತಮ್ಮ 5 ಲಕ್ಷ ರೂಪಾಯಿ ಬೆಲೆ ಬಾಳುವ ಒಡವೆಯನ್ನು ಕಳ್ಳನ ಕೈಗೆ ನೀಡಿದ್ದಾರೆ. ಈ ವೇಳೆ, ನೀವು ಆಸ್ಪತ್ರೆಯ ಒಳಗೆ ಹೋಗಿ ಕಾಯ್ತಾ ಇರಿ, ನಾನು ಈಗ ಬರುತ್ತೇನೆ ಎಂದು ಅಜ್ಜಿಯನ್ನು ಆಸ್ಪತ್ರೆಯೊಳಗೆ ಕಳುಹಿಸಿ ಕಳ್ಳ ಪರಾರಿಯಾಗಿದ್ದಾನೆ. ಆತ ವಾಪಸ್ ಬಾರದೇ ಇದ್ದಾಗ ಮೋಸ ಹೋಗಿರುವುದು ಅರಿವಿಗೆ ಬಂದಿದೆ.

    ವಠಾರದ ಜನರ ಎದುರಲ್ಲೇ ಯುವಕ ಅಜ್ಜಿಯನ್ನು ಕರೆದುಕೊಂಡು ಹೋಗಿದ್ದಾನೆ. ದಂಪತಿಯ ದೂರದ ಸಂಬಂಧಿಕ ಎಂಬಂತೆ ವಠಾರದಲ್ಲಿ ಪೋಸು ನೀಡಿದ್ದ ಆರೋಪಿ ಸ್ಥಳೀಯರನ್ನೂ ನಂಬಿಸಿದ್ದ. ಹಾಡ ಹಗಲೇ ಇಂತಹದ್ದೊಂದು ಘಟನೆ ನಡೆದಿದ್ದು, ವೃದ್ಧರ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಆರೋಪಿಯು ಈ ಕೃತ್ಯ ನಡೆಸಿದ್ದಾನೆ. ಆರೋಪಿಯು ಈ ಕೃತ್ಯ ನಡೆಸುವುದಕ್ಕೆ ಸಾಕಷ್ಟು ಸಮಯಗಳಿಂದ ಹೊಂಚು ಹಾಕಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ  ಕೊರಟಗೆರೆ ಪೊಲೀಸ್ ಠಾಣೆಯ  ಅಧಿಕಾರಿಗಳು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ ಎನ್ನಲಾಗಿದೆ.

    ಇಂತಹ ಸುಳ್ಳು ನೆಪಗಳನ್ನು ಒಡ್ಡಿ ಅಪರಿಚಿತರು ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಅವರ ಬಗ್ಗೆ ಎಚ್ಚರವಿರಲಿ . ಹಾಡಹಗಲಲ್ಲೇ ಇಂಥ ಘಟನೆ ನಡೆದಿರುವುದು ಇದೇ ಮೊದಲೇನಲ್ಲ ಈ ಹಿಂದೆಯೂ ಅನೇಕ ಮನೆಗಳಲ್ಲಿ ಕಳ್ಳತನವಾಗಿದೆ. ಇಂತಹ ಕಳ್ಳರನ್ನು ಕೂಡಲೇ ಬಂಧಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಜನರು ಎಲ್ಲಿಯವರೆಗೂ  ಮೋಸಹೋಗುತ್ತಾರೊ ಅಲ್ಲಿವರಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ  ಇಂತಹ ಅಪರಿಚಿತರು ನೀಡುವ  ಹಣದ ಆಸೆಗೆ ಮರುಳಾಗಿ ನಿಮ್ಮಲ್ಲಿರುವ ಹಣ, ನೆಮ್ಮದಿಯನ್ನು ಕಳೆದುಕೊಳ್ಳಬೇಡಿ.  ಪೊಲೀಸರು ಅವರ ಕರ್ತವ್ಯ ಮಾಡುತ್ತಾರೆ. ಆದರೆ ಸಮಾಜ ಜಾಗೃತವಾಗಿದ್ದರೆ ಮಾತ್ರವೇ,  ಅಪರಾಧ ಪ್ರಕರಣಗಳು ನಡೆಯದಂತೆ ತಡೆಯಬಹುದಾಗಿದೆ.

    ಮೈಮೇಲೆ ಒಡವೆಗಳನ್ನು ಹಾಕಿಕೊಂಡು ಓಡಾಡುವ ವೇಳೆ ನಿಮ್ಮನ್ನು ಸಾಕಷ್ಟು ಸಂಖ್ಯೆಯ ಜನರು ಗಮನಿಸುತ್ತಿರುತ್ತಾರೆ. ಅದರಲ್ಲಿ ಕಳ್ಳರು ಕೂಡ ಇರಬಹುದು ಎನ್ನುವ ಪ್ರಜ್ಞೆ ಸದಾ ಇರಲಿ. ಕುಟುಂಬದ ಸಮಸ್ಯೆ ಗಳಿಗೆಂದು ಒಡವೆ ಮಾಡಿಸಿ ಇಂತಹ ಕಳ್ಳರಿಗೆ ಆಹಾರವಾಗದಿರಲಿ. ಸಾಧ್ಯವಾದರೆ ನಿಮ್ಮ ಒಡವೆ ಹಣವನ್ನು ಬ್ಯಾಂಕ್ ನಲ್ಲಿ ಭದ್ರವಾಗಿ ಇಡುವುದೇ ಉತ್ತಮ.  ಸದಾ ಜಾಗೃತವಾಗಿರಿ, ಎಚ್ಚರವಾಗಿರಿ.

    ವರದಿ:  ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ

    October 4, 2026

    ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ: ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಪಶುಪಾಲನಾ ಇಲಾಖೆಯಿಂದ ರೈತಸ್ನೇಹಿ ಹೆಜ್ಜೆ

    October 3, 2026

    ಗಾಂಧಿ ಜಯಂತಿ ಪ್ರಯುಕ್ತ ಶ್ರೀಕ್ಷೇತ್ರ ಸಿದ್ದರಬೆಟ್ಟದಲ್ಲಿ ಸ್ವಚ್ಛತಾ ಆಂದೋಲನ

    October 2, 2026

    Leave A Reply Cancel Reply

    Our Picks

    ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್

    October 13, 2026

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್

    October 13, 2026

    ದೆಹಲಿ:  ಅಧಿಕಾರ ಹಾಗೂ ಹುದ್ದೆಗಳ ಆಡಂಬರವನ್ನೇ ಮೈಮೇಲೆ ಹೊತ್ತು ತಿರುಗುವ ಇಂದಿನ ರಾಜಕಾರಣದ ನಡುವೆ, ಸರಳತೆ ಮತ್ತು ಕಾರ್ಯಕರ್ತರ ಮೇಲಿನ…

    ಅಕ್ಟೋಬರ್ 15ರಂದು ಸಚಿವ ಈಶ್ವರ್ ಖಂಡ್ರೆ ಅವರಿಗೆ ಮಾದಿಗ ಸಮಾಜದಿಂದ ಅಭಿನಂದನಾ ಸಮಾರಂಭ

    October 13, 2026

    ಸಂಪಾದಕೀಯ: ಇಪಿಎಫ್‌ ಒ ಸಮಯೋಚಿತ ಸುತ್ತೋಲೆ ಮತ್ತು ಉದ್ಯಮ ರಂಗದ ವಾಸ್ತವ

    October 13, 2026

    ಹೆಚ್.ಐ.ವಿ ನಿಯಂತ್ರಣಕ್ಕೆ ಜನಜಾಗೃತಿ ಅತ್ಯಗತ್ಯ: ಜಿಲ್ಲಾಧಿಕಾರಿ ಸ್ನೇಹಲ್ ಆರ್.

    October 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.