nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರು: ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ 55 ವರ್ಷದ ಮಹಿಳೆಯ ಭೀಕರ ಕೊಲೆ

    January 15, 2026

    ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಆತ್ಮಹತ್ಯೆ

    January 15, 2026

    ರಾಹುಲ್ ಗಾಂಧಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಡಿ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ

    January 15, 2026
    Facebook Twitter Instagram
    ಟ್ರೆಂಡಿಂಗ್
    • ಬೆಂಗಳೂರು: ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ 55 ವರ್ಷದ ಮಹಿಳೆಯ ಭೀಕರ ಕೊಲೆ
    • ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಆತ್ಮಹತ್ಯೆ
    • ರಾಹುಲ್ ಗಾಂಧಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಡಿ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ
    • ಕೂಲಿ ಚಿತ್ರದ ಬಳಿಕ ಅಲ್ಲು ಅರ್ಜುನ್‍ಗೆ ಚಿತ್ರ ಕೈಗೆತ್ತಿಕೊಂಡ ಲೋಕೇಶ್ ಕನಕರಾಜು
    • ಮಾದೇನಹಳ್ಳಿ: ಮುಖ್ಯ ಶಿಕ್ಷಕಿ ಗುಣಶೀಲರವರಿಗೆ ಬೀಳ್ಕೊಡುಗೆ: ಸುಮಾರು 14 ವರ್ಷಗಳಿಂದ ಸೇವೆ
    • ಐಎಎಸ್ / ಕೆಎಎಸ್ ಪರೀಕ್ಷೆಗೆ ತರಬೇತಿ:  ಹೆಸರು ನೋಂದಾಯಿಸುವುದು ಹೇಗೆ?
    • ತುಮಕೂರು:  ಜ.16ರಂದು ಮಿನಿ ಉದ್ಯೋಗ ಮೇಳ
    • ಜ.22–25: ಚಿಕ್ಕಗೊಳ್ಳ ದೇವಾಲಯ ಕಳಸ ಸ್ಥಾಪನೋತ್ಸವ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರಗೂರು: ವಿಜೃಂಭಣೆಯಿಂದ ನಡೆದ ಹನುಮ ಜಯಂತಿ
    ಜಿಲ್ಲಾ ಸುದ್ದಿ January 8, 2023

    ಸರಗೂರು: ವಿಜೃಂಭಣೆಯಿಂದ ನಡೆದ ಹನುಮ ಜಯಂತಿ

    By adminJanuary 8, 2023No Comments2 Mins Read
    hanuma jayanti

    ಸರಗೂರು: ಹಿಂದೂ ಸಂಘಟನೆಗಳ ಜಾಗೃತಿಗಾಗಿ ಪಟ್ಟಣದ ಶ್ರೀ ಹನುಮಜಯಂತಿ ಅಚರಣಾ ಸಮಿತಿ ಶನಿವಾರ ಆಯೋಜಿಸಿದ್ದ ಹನುಮ ಜಯಂತಿ ಉತ್ಸವದ ಶೋಭಯಾತ್ರೆ ಬಹಳ ವಿಜೃಂಭಣೆಯಿಂದ ಜರುಗಿತು. ದಾರಿಯುದ್ದಕ್ಕೂ ಭಗವಾನ್ ಹನುಮನ ಘೋಷಣೆ ಮೊಳಗಿದವು.

    ಶೋಭಾಯಾತ್ರೆ ಅಂಗವಾಗಿ ಪಲ್ಲಕ್ಕಿಯಲ್ಲಿ ಕೂರಿಸಿದ್ದ ಹನುಮಂತನ ಭಾವಚಿತ್ರಕ್ಕೆ ತಾಲೂಕಿನ ಹಂಚೀಪುರ ಮಠದ ಚನ್ನಬಸವ ಸ್ವಾಮೀಜಿ, ದಡದಹಳ್ಳಿ ಮಠದ ಷಡಕ್ಷರಿಸ್ವಾಮೀಜಿ, ಶಾಸಕ ಅನಿಲ್ ಚಿಕ್ಕಮಾದು, ಜೆಡಿಎಸ್ ಮುಖಂಡ ಜಯಪ್ರಕಾಶ್, ಬಿಜೆಪಿ ಮುಖಂಡರಾದ ಡಾ.ಎಚ್.ವಿ.ಕೃಷ್ಣಸ್ವಾಮಿ, ಎಂ.ಅಪ್ಪಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಹಂಚೀಪುರ ಗುರುಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಆಚರಣಾ ಸಮಿತಿ ಅಧ್ಯಕ್ಷ ಚನ್ನಪ್ಪ ಸೇರಿದಂತೆ ಮುಖಂಡರು ಹನುಮನ ಭಾವಚಿತ್ರವುಳ್ಳ ಶೋಭಯಾತ್ರೆಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.


    Provided by
    Provided by

    ಪಟ್ಟಣದ ಕೆಇಬಿ ಕಚೇರಿಯಿಂದ ಹೊರಟ ಶೋಭಾಯಾತ್ರೆ ಮೆರವಣಿಗೆಯು ಹುಣಸೂರು-ಎನ್.ಬೇಗೂರು ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣ, ಮಹಾವೀರ ವೃತ್ತ, ಚಿಕ್ಕದೇವಮ್ಮನ ವೃತ್ತ, ಮೂಲಕ 2ನೇ ಮುಖ್ಯ ರಸ್ತೆಯಲ್ಲಿ ಸಾಗಿ ಸಂತೆಮಾಳದ ಮಾಸ್ತಮ್ಮನ ದೇವಸ್ಥಾನದಲ್ಲಿ ಸಮಾವೇಶಗೊಂಡಿತು.

    ಪಟ್ಟಣದ ಪ್ರಮುಖ ಬೀದಿಗಳು ಕೆಸರಿಮಯವಾಗಿದ್ದು, ಹನುಮನ ಭಕ್ತರ ಕೈಯಲ್ಲಿ ಕೇಸರಿ ಬಾವುಟಗಳು ರಾರಾಜಿಸಿದವು. ಇದಲ್ಲದೆ ಭಕ್ತರು ಹನುಮನ ಧ್ಯಾನ, ಶ್ಲೋಕಗಳನ್ನು ಪಠಣ ಮಾಡಿ, ವಿವಿಧ ಘೋಷಣೆ ಕೂಗುತ್ತಾ ದಾರಿಯುದ್ದಕ್ಕೂ ಜೈಕಾರ ಹಾಕಿದರು. ವಾದ್ಯಗೋಷ್ಠಿಗಳು ಮೊಳಗಿದವು. ನೆಮ್ಮನಹಳ್ಳಿ ಮಹದೇವು ಮತ್ತು ತಂಡದಿಂದ ಆದಿವಾಸಿ ಜನಾಂಗದ ಕುಣಿತ ಮೆರವಣಿಗೆಗೆ ಮೆರಗು ತಂದಿತು. ನೀಲಕಂಠ ತಂಡದಿಂದ ವೀರಗಾಸೆ ನೃತ್ಯ ಪ್ರದರ್ಶನವಾಯಿತು. ಅಲ್ಲಲ್ಲಿ ಮಜ್ಜಿಗೆ, ಪಾನಕ ವಿತರಿಸಲಾಯಿತು. ಗಡಿಗೊಂಬೆ ಪ್ರದರ್ಶಿಸಲಾಯಿತು. ಇದರೊಂದಿಗೆ ಮುಸ್ಲಿಂ ಬಾಂಧವರೂ ಮಜ್ಜಿಗೆ ವಿತರಣೆ ಮಾಡಿದ್ದು, ವಿಶೇಷವಾಗಿತ್ತು.

    ಹಂಚೀಪುರ ಮಠದ ಚನ್ನಬಸವಸ್ವಾಮೀಜಿ ಮಾತನಾಡಿ, ಎಲ್ಲರೂ ಒಗ್ಗೂಡಿ ಹನುಮನ ಜಯಂತಿ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ. ಸದೃಢ, ಸಮಾನತೆ ಭಾರತವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಯುವಕರ ಮೇಲಿದೆ. ಹೀಗಾಗಿ ಎಲ್ಲರೂ ಶ್ರಮಿಸಬೇಕು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಎಚ್ಚರವಹಿಸಿದರೆ ಒಳಿತು ಎಂದು ತಿಳಿಸಿದರು.

    ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಹಂಚೀಪುರ ಗುರುಸ್ವಾಮಿ,  ವೀರಶೈವ ಲಿಂಗಾಯತ ಮಹಾಸಭಾದ ಸರಗೂರು ತಾಲೂಕು ಅಧ್ಯಕ್ಷ ಡಿ.ಜಿ.ಶಿವರಾಜು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಬಿಜೆಪಿ ಮುಖಂಡ ಡಾ.ಎಚ್.ವಿ.ಕೃಷ್ಣಸ್ವಾಮಿ, ಎಂ.ಅಪ್ಪಣ್ಣ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಚಿಕ್ಕವೀರನಾಯಕ,ಪಿ ರವಿ, ಭಾಗ್ಯಲಕ್ಷ್ಮಿ , ಶಂಕರೇಗೌಡ, ಜೆಡಿಎಸ್ ಮುಖಂಡ ಜಯಪ್ರಕಾಶ್, ಆಚರಣ ಸಮಿತಿ ಅಧ್ಯಕ್ಷ ಚೆನ್ನಪ್ಪ, ಮುಖಂಡರಾದ ಹಂಚೀಪುರ ಗಣಪತಿ, ಜೆಡಿಎಸ್ ಮುಖಂಡ ಪ್ರಕಾಶ್, ವಿನಯ್, ಭಜರಂಗಿ ರಾಮು, ಮಂಡ್ಯ ಮಂಜು, ಜಗದೀಶ್ ಮಾಗುಡಿಲು, ನಂಜಪ್ಪ ಹಂಚೀಪುರ, ವೇಣುಗೋಪಾಲ್, ಆನಂದ ಮೈಲಾರಿ, ಪೈಂಟ್ ನಾಗರಾಜು,ಮಂಜು, ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು, ಸಮಿತಿ ಸದಸ್ಯರು, ಮುಖಂಡರು ಹಾಜರಿದ್ದರು.

    ವರದಿ: ಚಂದ್ರ ಹಾದನೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

    admin
    • Website

    Related Posts

    ಸೋತರೂ, ಗೆದ್ದರೂ ಕ್ರೀಡಾಪಟುಗಳು ಒಂದೇ ಮನಸ್ಥಿತಿ ಹೊಂದಿರಬೇಕು: ಶಾಸಕ ಅನಿಲ್ ಚಿಕ್ಕಮಾದು

    January 12, 2026

    ಪಟ್ಟಣ ಪಂಚಾಯಿತಿ ಕಟ್ಟಡ ಕೆಡವಿ, ನೂತನವಾಗಿ ನಿರ್ಮಿಸಿ:  ಶಾಸಕ ಅನಿಲ್ ಚಿಕ್ಕಮಾದು ಸೂಚನೆ

    January 12, 2026

    ಅರಕಲಗೂಡು: ಕಾಂಗ್ರೆಸ್ ಮುಖಂಡ ಸಿ.ಡಿ.ದಿವಾಕರ್ ಗೌಡ ಅವರ ಹುಟ್ಟುಹಬ್ಬದ ಸಂಭ್ರಮ

    January 12, 2026

    Comments are closed.

    Our Picks

    ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ ದರ್ಶನ: ಅಯ್ಯಪ್ಪನ ಕಣ್ತುಂಬಿಕೊಳ್ಳಲು ಭಕ್ತರ ಸಾಗರ, ಕ್ಷಣಗಣನೆ ಆರಂಭ

    January 14, 2026

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಬೆಂಗಳೂರು: ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ 55 ವರ್ಷದ ಮಹಿಳೆಯ ಭೀಕರ ಕೊಲೆ

    January 15, 2026

    ಬೆಂಗಳೂರು: ಸಿಲಿಕಾನ್ ಸಿಟಿಯ ಜನನಿಬಿಡ ರಸ್ತೆಯೊಂದರಲ್ಲಿ ಭೀಕರ ಘಟನೆಯೊಂದು ಸಂಭವಿಸಿದ್ದು, 55 ವರ್ಷದ ಮಹಿಳೆಯನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಭೀಕರವಾಗಿ…

    ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಆತ್ಮಹತ್ಯೆ

    January 15, 2026

    ರಾಹುಲ್ ಗಾಂಧಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಡಿ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ

    January 15, 2026

    ಕೂಲಿ ಚಿತ್ರದ ಬಳಿಕ ಅಲ್ಲು ಅರ್ಜುನ್‍ಗೆ ಚಿತ್ರ ಕೈಗೆತ್ತಿಕೊಂಡ ಲೋಕೇಶ್ ಕನಕರಾಜು

    January 15, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.