ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಎಚ್ ಡಿಎಫ್ ಸಿ ಲಕ್ಷದ್ವೀಪದ ಕವರಟ್ಟಿಯಲ್ಲಿ ಬುಧವಾರ(ಎ.10) ತನ್ನ ಮೊದಲ ಶಾಖೆ ತೆರೆದಿದೆ. ಈ ಮೂಲಕ ಲಕ್ಷದ್ವೀಪದಲ್ಲಿ ಶಾಖೆ ತೆರೆದ ಮೊದಲ ಖಾಸಗಿ ಬ್ಯಾಂಕ್ ಎನಿಸಿಕೊಂಡಿದೆ.‘ಜನರು ಎಲ್ಲಿರುತ್ತಾರೋ ಅಲ್ಲಿಯೇ ಸೇವೆಯನ್ನು ಒದಗಿಸಬೇಕು ಎನ್ನುವುದು ನಮ್ಮ ಬ್ಯಾಂಕ್ ನ ಉದ್ದೇಶ’ ಎಂದಿದ್ದಾರೆ.
ಲಕ್ಷದ್ವೀಪದಲ್ಲಿರುವ ವ್ಯಕ್ತಿಗಳಿಗೆ, ಕುಟುಂಬಗಳಿಗೆ ಹಾಗೂ ಉದ್ಯಮದಾರರಿಗೆ ಸೇವೆಯನ್ನು ನೀಡಲು ಉತ್ಸುಕರಾಗಿದ್ದೇವೆ’ ಎಂದು ಬ್ಯಾಂಕ್ ನ ಮುಖ್ಯಸ್ಥ ಎಸ್. ಸಂಪತ್ ಕುಮಾರ್ ತಿಳಿಸಿದ್ದಾರೆ. ಭಾರತೀಯ ನೌಕಾಪಡೆಯ ಕಮಾಂಡಿಂಗ್ ಅಧಿಕಾರಿ ಕ್ಯಾಪ್ಟನ್ ಲವಕೇಶ್ ಅವರು ಲಕ್ಷ್ಯದ್ವೀಪದಲ್ಲಿ ಕಾರ್ಯಾರಂಭ ಮಾಡಿದ ಎಚ್ ಡಿಎಫ್ ಸಿಯ ಮೊದಲ ಶಾಖೆಗೆ ಚಾಲನೆ ನೀಡಿದರು. ಈ ವೇಳೆ ಬ್ಯಾಂಕ್ ನ ಇತರ ಅಧಿಕಾರಿಗಳು ಹಾಜರಿದ್ದರು ಎಂದು ವರದಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296