ಗುಬ್ಬಿ:ಬಸವರಾಜು ಹೊರಟ್ಟಿಯವರು ಪ್ರಬುದ್ದ ರಾಜಕಾರಣಿ. ಬುದ್ದಿವಂತರು, ವಿಚಾರವಂತರು ಅವರ ತೀರ್ಮಾನ ಸರಿಯಾಗಿ ಇರುತ್ತದೆ ಜೆಡಿಎಸ್ ನಲ್ಲಿ ಇರುವವರಿಗೆ ಬೆಲೆ ಇಲ್ಲ ಎಂದು ಶಾಸಕ ಎಸ್ .ಆರ್. ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಜೋಗಿಹಳ್ಳಿ ,ಮಠ ಗ್ರಾಮದಲ್ಲಿ ಸುಮಾರು 60 ಲಕ್ಷ ವೆಚ್ಚದ ಸಿಸಿ ರಸ್ತೆಗೆ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು , ನಾನು ಕೂಡ ಜೆಡಿಎಸ್ ನಿಂದ ನಾಲ್ಕು ಬಾರಿ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಬಂದಿದ್ದಾನೆ. ನನ್ನನ್ನೇ ಮೂಲೆಗುಂಪು ಮಾಡಿದ್ದಾರೆ. ಇವತ್ತು ಜೆಡಿಎಸ್ ಪಕ್ಷದಲ್ಲಿ ಇದ್ರೂ ಕೂಡ ಆಟಕುಂಟು ಲೆಕ್ಕಕಿಲ್ಲ ಎಂಬ ಪರಿಸ್ಥಿತಿಯಲ್ಲಿ ನಾನು ಇದ್ದೇನೆ. ನಾನು ಜೆಡಿಎಸ್ ಪಕ್ಷದಲ್ಲಿ ಇದ್ದೇನೆ ಪಕ್ಷ ಬಿಟ್ಟಿಲ್ಲ ಆದರೆ ನನ್ನನ್ನು ಅವರೇ ದೂರ ಮಾಡಿಕೊಳುತ್ತಿದ್ದಾರೆ ಎಂದು ಅವರು ಅಸಮಾಧಾನ ತೋಡಿಕೊಂಡರು.
ಚುನಾವಣೆ ಪಕ್ಷದ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡುವುದಿಲ್ಲ. ಕಾರ್ಯಕರ್ತರನ್ನ ಕೇಳಿ ಹೇಳುತ್ತೇನೆ. ನನ್ನ ಕಾರ್ಯಕರ್ತರೇ ನನ್ನ ಬೆನ್ನೆಲುಬು. ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಂತಾಗಲೂ ನನ್ನ ಕಾರ್ಯಕರ್ತರನ್ನು ನಂಬಿದ್ದೇನೆ. ಅವರ ತಿರ್ಮಾನವೇ ನನ್ನ ತೀರ್ಮಾನ ಎಂದರು.
ಇದೇ ಸಂಧರ್ಭದಲ್ಲಿ ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿದ್ದಗಂಗಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜು , ವಿ ಎಸ್ ಎಸ್ ಎನ್ ಅಧ್ಯಕ್ಷ ದೇವರಾಜು , ಸದಸ್ಯರಾದ ಕೆ.ಟಿ.ರಾಜು, ಬಸವರಾಜು , ಮುಖಂಡರಾದ ಕುಂಟರಾಮನಹಳ್ಳಿ ಮಂಜಣ್ಣ, ನಟರಾಜು, ಕರಿಬಸವಣ್ಣ , ಸಿದ್ದರಾಮಣ್ಣ, ಸಣ್ಣರಂಗಯ್ಯ, ಲಿಂಗರಾಜು ,ಮೂರ್ತಣ್ಣ ,ಮಂಜುನಾಥ್ , ವಿಜಿಕುಮಾರ್ ಗುತ್ತಿಗೆದಾರ ಕೃಷ್ಣೇಗೌಡ, ಪಿಡಿಓ ರಾಜೇಂದ್ರಪ್ರಸಾದ್, ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy