ತೆಲುಗು ಚಿತ್ರರಂಗದ ಸ್ಟಾರ್ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಪೀಠಾಪುರಂ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಜನಸೇನಾ ಪಕ್ಷದ ಸಂಸ್ಥಾಪಕರೂ ಆಗಿರುವ ಪವನ್ ಕಲ್ಯಾಣ್ ಕಳೆದ ಕೆಲ ವರ್ಷದಿಂದಲೂ ಆಂಧ್ರದ ಆಡಳಿತ ಪಕ್ಷ ವೈಸಿಪಿ ವಿರುದ್ಧ ಹೋರಾಟ ನಡೆಸುತ್ತಿದ್ದು, ಪಕ್ಷವನ್ನು ಅಧಿಕಾರದಿಂದ ಇಳಿಸಲೇಬೇಕೆಂಬ ಹಠ ತೊಟ್ಟಿದ್ದಾರೆ.
ಅಂತೆಯೇ ಪವನ್ ಕಲ್ಯಾಣ್ ಪರವಾಗಿ ರಾಮ್ ಚರಣ್ ತೇಜ ಸೇರಿದಂತೆ ಇನ್ನೂ ಕೆಲವು ಸೆಲೆಬ್ರಿಟಿಗಳು ಪೀಠಾಪುರಂ ಗೆ ತೆರಳಿ ಪ್ರಚಾರ ಸಹ ಮಾಡಿದ್ದಾರೆ. ಆದರೆ ಮೆಗಾಸ್ಟಾರ್ ಕುಟುಂಬಕ್ಕೆ ಸೇರಿದ ಅಲ್ಲು ಅರ್ಜುನ್ ಮಾತ್ರ, ಪವನ್ ರ ಎದುರಾಳಿ ಪಕ್ಷವಾದ ವೈಸಿಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದರು. ಇದು ಮೆಗಾಸ್ಟಾರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ತಮ್ಮ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ಎದುರಾದ ಬೆನ್ನಲ್ಲೆ ಇದೀಗ ಅಲ್ಲು ಅರ್ಜುನ್ ಸ್ಪಷ್ಟನೆ ನೀಡಿದ್ದಾರೆ. ‘ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸಂಭಂಧಿಸಿದ ವ್ಯಕ್ತಿಯಲ್ಲ. ರಾಜಕೀಯ ಪಕ್ಷಗಳ ವಿಷಯದಲ್ಲಿ ನಾನು ತಟಸ್ಥ. ಚಿಕ್ಕಪ್ಪ ಪವನ್ ಕ್ಯಲ್ಯಾಣ್ ಪಕ್ಷವಾಗಲಿ, ಗೆಳೆಯ ಶಿಲ್ಪರವಿಚಂದ್ರನ್ ಆಗಲಿ ಹಾಗೂ ನನ್ನ ಮಾವ ಚಂದ್ರಶೇಖರ ರೆಡ್ಡಿಯವರೇ ಆಗಲಿ ಅವರ ಪಕ್ಷದೊಂದಿಗೆ ನನಗೆ ಸಂಬಂಧವಿಲ್ಲ. ಆದರೆ ನನ್ನ ಪ್ರೀತಿ ಪಾತ್ರರಿಗೆ ನಾನು ಬೆಂಬಲ ನೀಡುತ್ತೇನೆ. ಅವರು ಯಾವ ಪಕ್ಷ ಎಂಬುದು ನನಗೆ ಮುಖ್ಯವಾಗುವುದಿಲ್ಲ’ ಎಂದಿದ್ದಾರೆ.
ನನ್ಮ ಆತ್ಮೀಯ ಗೆಳೆಯ ಶಿಲ್ಪಾ ರವಿಗೆ ಬೆಂಬಲ ನೀಡುವುದಾಗಿ ಹೇಳಿದ್ದೆ. ಆದರೆ ಕಳೆದ ಬಾರಿ ಅದು ಸಾಧ್ಯವಾಗಿರಲಿಲ್ಲ ಹಾಗಾಗಿ ಕೊಟ್ಟ ಮಾತು ಉಳಿಸಿಕೊಳ್ಳಲು ಈ ಬಾರಿ ನಾಂದ್ಯಾಲ್ ಗೆ ಹೋಗಿದ್ದೆ’ ಎಂದಿದ್ದಾರೆ ಅಲ್ಲು ಅರ್ಜುನ್. ನಾಂದ್ಯಾಲ್ ಗೆ ಹೋಗಿದ್ದ ಅಲ್ಲು ಅರ್ಜುನ್, ಗೆಳೆಯನಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದರು. ಟ್ವಿಟ್ಟರ್ ನಲ್ಲಿಯೂ ಈ ಬಗ್ಗೆ ಪೊಸ್ಟ್ ಹಂಚಿಕೊಂಡಿದ್ದ ಅಲ್ಲು ಅರ್ಜುನ್, ಅಭೂತಪೂರ್ವ ಸ್ವಾಗತಕ್ಕೆ ನಾಂದ್ಯಾಲ್ ಕ್ಷೇತ್ರದ ಜನರಿಗೆ ಧನ್ಯವಾದ ತಿಳಿಸಿದ್ದರು.
ಅಲ್ಲದೆ ಪವನ್ ಕಲ್ಯಾಣ್ ಪರವಾಗಿ ನಾನು ಎಂದೆಂದೂ ಇರುತ್ತೇನೆ’ ಎಂದೂ ಸಹ ಅಲ್ಲು ಅರ್ಜುನ್ ಹೇಳಿದ್ದಾರೆ. ಅಂದಹಾಗೆ ಅಲ್ಲು ಅರ್ಜುನ್ ರ ಮಾವ ಚಂದ್ರಶೇಖರ ರೆಡ್ಡಿ ಕಾಂಗ್ರೆಸ್ ನ ಪ್ರಮುಖ ನಾಯಕರಲ್ಲೊಬ್ಬರು. ಇತ್ತೀಚೆಗಷ್ಟೆ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA