ಚೆನ್ನೈ: ಕನ್ನಡ ತಮಿಳಿನಿಂದ ಹುಟ್ಟಿತು ಎನ್ನುವ ತಮಿಳಿನ ಮೆಗಾಸ್ಟಾರ್ ಕಮಲ್ ಹಾಸನ್ ಅವರ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ಹುಟ್ಟಿಕೊಂಡ ಬೆನ್ನಲ್ಲೇ ತಮ್ಮ ಹೇಳಿಕೆಗೆ ಕಮಲ್ ಹಾಸನ್ ವಿವರಣೆ ನೀಡಿದ್ದಾರೆ.
ಥಗ್ ಲೈಫ್ ನಟ– ಕಮ್ ರಾಜಕಾರಣಿ ಕಮಲ್ ಹಾಸನ್, “ನಾನು ಪ್ರೀತಿಯಿಂದ ಹೇಳಿದ್ದೇನೆ. ಬಹಳಷ್ಟು ಇತಿಹಾಸಕಾರರು ನನಗೆ ಭಾಷಾ ಇತಿಹಾಸವನ್ನು ಕಲಿಸಿದ್ದಾರೆ. ನಾನು ಬೇರೆನೂ ಹೇಳಿಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ತಮಿಳುನಾಡು ಎಲ್ಲರಿಗೂ ಆಶ್ರಯ ನೀಡುವ ಅಪರೂಪದ ರಾಜ್ಯವಾಗಿದೆ.‘ತಮಿಳುನಾಡಿನಲ್ಲಿ ಮೆನನ್ ಮುಖ್ಯಮಂತ್ರಿ ಆಗಿದ್ದರು. ರೆಡ್ಡಿ ಒಬ್ಬರು ಮುಖ್ಯಮಂತ್ರಿ ಆಗಿದ್ದಾರೆ. ತಮಿಳರೊಬ್ಬರು ಸಿಎಂ ಆಗಿದ್ದು, ಕನ್ನಡಿಗ ಅಯ್ಯಂಗಾರ್ ಒಬ್ಬರು ಮುಖ್ಯಮಂತ್ರಿಯಾಗಿದ್ದಾರೆ ಎಂದು ತಿಳಿಸಿದರು.
ಥಗ್ ಲೈಫ್ ಬ್ಯಾನ್ ಕುರಿತ ಕರೆಗೆ ಪ್ರತಿಕ್ರಿಯಿಸಿದ ಕಮಲ್ ಹಾಸನ್, ಕರ್ನಾಟಕದ ಜನರು ನನ್ನನ್ನು ಮತ್ತು ನನ್ನ ಸಿನಿಮಾ ನೋಡಿಕೊಳ್ಳುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.
ಕರ್ನಾಟಕದಿಂದ ಬಂದ ಮುಖ್ಯಮಂತ್ರಿಯೊಬ್ಬರಿಂದ (ಜಯಲಲಿತಾ) ಸಮಸ್ಯೆ ಎದುರಾದಾಗ ನನಗೆ ಬೆಂಬಲ ನೀಡಿದ್ದು ಕರ್ನಾಟಕ. ಇಲ್ಲಿಗೆ ಬಾ, ಮನೆ ಕೊಡುತ್ತೇವೆ, ಎಲ್ಲೂ ಹೋಗಬೇಡಿ ಎಂದು ಕನ್ನಡಿಗರು ಬೆಂಬಲಿಸಿದ್ದರು. ಹೀಗಾಗಿ ಥಗ್ ಲೈಫ್, ಕಮಲ್ ಹಾಸನ್ ಅವರನ್ನು ಜನರೇ ನೋಡಿಕೊಳ್ಳುತ್ತಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW