ಬೆಂಗಳೂರು: ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಕೆಪಿಸಿಸಿಯಿಂದ ನೋಟೀಸ್ ನೀಡಿದಾಕ್ಷಣ ದೊಡ್ಡ ಅನಾಹುತವೇನೂ ಆಗುವುದಿಲ್ಲ, ಪಕ್ಷದ ಅಧ್ಯಕ್ಷರಿಗೆ ಸ್ಪಷ್ಟ ಉತ್ತರ ನೀಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ಹೇಳಿದ್ದನ್ನು ಬೇರೆ ರೀತಿ ಬಿಂಬಿಸಿ ಪಕ್ಷದ ಅಧ್ಯಕ್ಷರ ಮುಂದೆ ಪ್ರಶ್ನೆ ಕೇಳಲಾಗುತ್ತದೆ. ಅದಕ್ಕೆ ಅವರು ನಾಲ್ಕು ಮಾತನಾಡುತ್ತಾರೆ. ತಿರುಗಿ ಅದೇ ರೀತಿಯ ಪ್ರಶ್ನೆಗಳನ್ನು ನನ್ನ ಬಳಿ ಕೇಳಲಾಗುತ್ತದೆ. ಈ ರೀತಿ ಪರಸ್ಪರ ಚರ್ಚೆಗಳು ವೈಯಕ್ತಿಕವಾಗಿ ಹಾಗೂ ಪಕ್ಷಕ್ಕೆ ಹಾನಿಯಾಗುತ್ತದೆ ಎಂದರು.
ಏನು ಬಹಳ ದೊಡ್ಡ ನೋಟಿಸ್ ಕೊಟ್ಟರೆ, ಅದರಿಂದ ಅನಾಹುತವೇನೂ ಆಗುವುದಿಲ್ಲ, ನೋಟಿಸ್ ಕೊಡುವ ಅಧಿಕಾರ ಅವರಿಗಿದೆ, ನಾನು ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ, ನಾನು ಅರ್ಧಗಂಟೆ ಮಾಧ್ಯಮದವರ ಜೊತೆ ಮಾತನಾಡಿರುವ ವಿಡಿಯೋ ಸಾಕ್ಷ್ಯ ಕೂಡ ನನ್ನ ಬಳಿ ಇದೆ. ಅದನ್ನೇ ಆಧಾರವಾಗಿಟ್ಟುಕೊಂಡು ಉತ್ತರ ನೀಡುತ್ತೇನೆ ಎಂದರು.
ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೆಂದು ಹೇಳಿಯೇ ಇಲ್ಲ. ಮಾಧ್ಯಮದವರು ಪ್ರಶ್ನೆ ಕೇಳಿದಾಗ ಸಹಜವಾಗಿ ಮಾತನಾಡಿದ್ದೇನೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx