ಮಧುಗಿರಿ: ತಾಲೂಕಿನ ಮಾಡ್ಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಹೆಸರಾಂತ ಇಂಡಿಗೋ ಪೇಂಟ್ಸ್ ಲಿಮಿಟೆಡ್ ಹಾಗೂ ಸುರಭಿ ಪೇಂಟ್ಸ್ ಹಾರ್ಡ್ವೇರ್ಸ್ ನ ವತಿಯಿಂದ ಇಂಡಿಗೋ ಸೇವಾ ಉತ್ಸವ ಎಂಬ ಕಾರ್ಯಕ್ರಮದಡಿ ಸರ್ಕಾರಿ ಶಾಲೆಯ ಕೊಠಡಿಗಳಿಗೆ ಉಚಿತವಾಗಿ ಸುಮಾರು 30 ರಿಂದ 40 ಸಾವಿರದ ವೆಚ್ಚದಲ್ಲಿ ಉಚಿತವಾಗಿ ಪೇಂಟ್ಸ್ ನೀಡಿ ಶಾಲಾ ಕೊಠಡಿಗಳಿಗೆ ಕಲರ್ ಫುಲ್ ಪೇಂಟ್ಸ್ ಮಾಡಿಸಲಾಗಿದೆ.
ಶಾಲೆಯ ಮಕ್ಕಳಲ್ಲಿ ಉತ್ಸಾಹ ತುಂಬಲು ಕ್ರೀಡೆಗಳನ್ನು ಆಯೋಜಿಸಿ ಬಹುಮಾನವನ್ನು ಸಹ ವಿತರಿಸುವುದರ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು.
ಸರ್ಕಾರಿ ಶಾಲಾ ಕೊಠಡಿಗಳಿಗೆ ಪೇಂಟ್ಸ್ ಮಾಡಿಸುವ ಕಾರ್ಯಕ್ರಮಕ್ಕೆ ಸುರಭಿ ಪೇಂಟ್ಸ್ ಶಾಪ್ ಸತೀಶ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀರಂಗಪ್ಪ, ಅಲ್ಲಿನ ಮುಖ್ಯೋಪಾಧ್ಯಾಯಣಿ ರಾಧಾ ಸಹ ಶಿಕ್ಷಕಿ ಮಂಜುಳಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆ ಕಾರ್ಯಕ್ರಮವನ್ನು ಇಂಡಿಗೋ ಪೇಂಟ್ಸ್ ಲಿಮಿಟೆಡ್ ಬ್ರಾಂಚ್ ಮ್ಯಾನೇಜರ್ ಸಜ್ಜೀವ್ ಏನ್ ನಾಯರ ಹಾಗೂ ಚಿನಕವಜ್ರ ಕ್ಲಸ್ಟರ್ CRP ಶಿವಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಗಂಗಾಧರಯ್ಯ, ದೇವರಾಜ್, ಬಸವರಾಜು, ಶಾಲೆಯ ಮಕ್ಕಳು ಹಾಗೂ ಪೋಷಕರ ಶಾಲೆಗೆ ಪೇಂಟ್ಸ್ ಮಾಡಲು ಸಹಕರಿಸಿದ ಇಂಡಿಗೋ ಕಂಪನಿಯ ಅಶ್ವಥ್, ಸೈಯದ್, ಪೈಂಟರ್ ಗಳು ಊರಿನ ಗ್ರಾಮಸ್ಥರು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx