ಬೆಳ್ತಂಗಡಿ: ಸಾಹಿತ್ಯ ಹಾಗೂ ಸಂಗೀತಗಳು ಒಂದು ಮರದ ಎರಡು ಕೊಂಬೆಗಳು ಇದ್ದಂತೆ ಇವುಗಳ ಬೆಳವಣಿಗೆಗೆ, ಜಿನಭಜನೆ ಅತಿ ಅಗತ್ಯವಾಗಿದೆ, ಭಾಷಾ ಸಂಗೀತಕ್ಕೆ ಮೂಲ ಬೇರಾಗಿರುವ ಜಿನಭಜನೆಗೆ ಪ್ರೋತ್ಸಾಹ ಅಗತ್ಯ ಎಂದು ರಾಜ್ಯಸಭಾ ಸದಸ್ಯರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ, ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.
ಅವರಿಂದು ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ನಡೆದ ಭಾರತೀಯ ಜೈನ್ ಮಿಲನ್ ವಲಯ– 8 ಮಂಗಳೂರು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆ– 20 24 ಉದ್ಘಾಟಿಸಿ ಮಾತನಾಡಿದರು.
ಇಂದು ಸಾಹಿತ್ಯದ ಬೆಳವಣಿಗೆಗೆ ಜಿನ ಭಜನೆ ಅಗತ್ಯವಾಗಿದೆ, ಅಂತರಾತ್ಮದ ಕೂಗಿನ ಜೊತೆಯಲ್ಲಿ ಭಜನೆ ಸ್ಮರಿಸುವುದು ಅಗತ್ಯ ಇದರಿಂದ ತೀರ್ಥಂಕರ ಸ್ಮರಣೆ ಅವರ ತತ್ವಗಳು ಆದರ್ಶಗಳ ಆಚರಣೆ ಸಾಧ್ಯವಾಗಲಿದೆ ಎಂದರು.
ಜನಿವಾರ ಒಂದು ಮೂಗುದಾರ ವಿದ್ದಂತೆ, ಇದರಿಂದ ತಪ್ಪನ್ನು ತಿದ್ದಲು ಸಾಧ್ಯವಾಗಲಿದೆ, ಸಾಹಿತ್ಯದ ಮೂಲಕ ಸಂಗೀತ ಪ್ರವೇಶ ಸಾಧ್ಯವಾಗಲಿದ್ದು , ಸಂಗೀತ ಎಲ್ಲವನ್ನು ವಿವರಿಸಿದೆ ಎಂದರು .
ಈ ಹಿಂದೆ ಸಿನಿಮಾ ಹಾಡಿಗೆ ಜನರು ಸಂಗೀತವನ್ನು ಸೇರಿಸಿಕೊಂಡು ಹಾಡುತ್ತಿದ್ದರು, ಭಜನೆ ಅಂತರಾತ್ಮ ವನ್ನು ಶುದ್ಧಿಗೊಳಿಸಲಿದೆ ಎಂದ ಅವರು, ಮಕ್ಕಳನ್ನು ಪ್ರೋತ್ಸಾಹಿಸಿ ಧರ್ಮದ ಜಾರಿಯಲ್ಲಿ ನಡೆಯಲು ಇಂತಹ ಕಾರ್ಯಕ್ರಮಗಳು ಅಗತ್ಯ. ಆಚರಣೆಯಿಂದ ಯಾವುದೂ ಕಷ್ಟವಲ್ಲ ಕೇಶಲೋಚನೆ ಕಷ್ಟವಾದರೂ ಅದರ ಆಚರಣೆಯಿಂದ ಸಹಜವಾಗಿ ಅನುಭವಿಸುವಂತಹಾಗುತ್ತದೆ ,ಎಲ್ಲವನ್ನು ಸಹಜವಾಗಿಸಿಕೊಳ್ಳಬೇಕು ಧರ್ಮದ ಆಚರಣೆಗಳನ್ನು ಸಹಜವಾಗಿಸಿಕೊಂಡು ಮುನ್ನಡೆಯುವಂತೆ ಕರೆ ನೀಡಿದರು.
ಜಿನ ಭಜನೆಯಿಂದ ಜನ ತಿದ್ದಿ ನಡೆಯಬೇಕು ,ಇದರಿಂದ ಭಗವಂತನ ಸ್ಮರಣೆ ಸಾಧ್ಯ , ಸೋಲು ಸಹಜ , ಆದರೆ ಸ್ಪರ್ಧೆ ಅಗತ್ಯ ಸೋಲಿನಿಂದ ನಿರಾಶರಾಗದೆ ಮರು ಪ್ರಯತ್ನ ಅಗತ್ಯ, ಭಗವಂತನ ಆದರ್ಶಗಳನ್ನು ಮನಸ್ಸಿನಲ್ಲಿ ತುಂಬಿಸಿಕೊಳ್ಳಬೇಕು ಇದು ಜಿನ ಭಜನ ಸಿದ್ಧಾಂತವು ಆಗಿದೆ ಎಂದರು.
ಮಾನವನಿಗೆ ಬಹುಮಾನ ಮುಖ್ಯವಲ್ಲ, ಸ್ಪರ್ಧೆ ಮುಖ್ಯ , ಸ್ಪರ್ಧೆಯಲ್ಲಿ ಭಾಗವಹಿಸಲು ಮನೆಯಲ್ಲೇ ಅಭ್ಯಾಸ ಸ್ಪರ್ಧೆ ಮಾಡಿ, ತಾವೇ ಸಾಹಿತ್ಯ -ಸಂಗೀತ ರಚಿಸಿಕೊಂಡು ಸ್ಪರ್ಧಿಸಿ ಎಂದರು.
ಭಾರತೀಯ ಜೈನ್ ಮಹಿಳಾ ಮಿಲನ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಜಿನ ಭಜನಾ ಕಾರ್ಯಕ್ರಮದ ರೂವಾರಿ ಅನಿತಾ ಸುರೇಂದ್ರ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಸನ್ನ ಕುಮಾರ್, ಸುದರ್ಶನ್, ಜೀವನದರ್ ಕುಮಾರ್, ಪ್ರವೀಣ್ ಕುಮಾರ್ ಇಂದ್ರ, ಸೋನಿಯೋ ಯಶೋವರ್ಮ, ಸತೀಶ್ ಚಂದ್ರ ಜೈನ್, ತೀರ್ಥ ಕುಮಾರ್ ಜೈನ್, ತ್ರಿಶಾಲ ಉದಯ್ ಕುಮಾರ್, ಚಂದ್ರಹಾಸ, ಮಂಗಳೂರು ವಿಭಾಗ ಮಟ್ಟದ ಅಧ್ಯಕ್ಷ ಸೋಮಶೇಖರ್ ಶೆಟ್ಟಿ, ಸೇರಿದಂತೆ ಮಂಗಳೂರು ವಿಭಾಗದ ಜೈನ್ ಮಿಲನ್ ತಂಡಗಳು ಶ್ರಾವಕ ಶ್ರಾವಕಿಯರು ವಿವಿಧ ಜೈನ ಸಂಘಟನೆಗಳು ಭಾಗವಹಿಸಿದ್ದವು.
ವರದಿ: ಜೆ.ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q