ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್ ಹೆಚ್ಚಳವಾಗುತ್ತಿದ್ದು, ನಮ್ಮಲ್ಲೂ 60 ರಿಂದ 80 ಪ್ರಕರಣಗಳು ದಾಖಲಾಗುತ್ತಿವೆ.
ಕೊರೊನಾ ನಿಯಂತ್ರಣಕ್ಕಾಗಿ ಬೂಸ್ಟರ್ ಡೋಸ್ ಅತ್ಯಗತ್ಯವಾಗಿದ್ದು, ಜನರು ಅದನ್ನು ಕಡ್ಡಾಯವಾಗಿ ಪಡೆಯಲೇಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಗೌರವ್ ಗುಪ್ತ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಆವರು, ಜನ ಬೂಸ್ಟರ್ ಡೋಸ್ ಅಗತ್ಯವಿಲ್ಲ ಎಂದುಕೊಂಡಿದ್ದಾರೆ. ವ್ಯಾಕ್ಸಿನೇಷನ್‍ನಿಂದಾಗಿ ಮೂರನೆ ಅಲೆ ಪರಿಣಾಮ ಬೀರಿಲ್ಲ. ಹೀಗಾಗಿ ಈಗಲೂ ಬೂಸ್ಟರ್ ಡೋಸ್ ಅಗತ್ಯವಾಗಿ ಪಡೆಯಬೇಕು. ಸ್ವಪ್ರೇರಣೆಯಿಂದ ಎಲ್ಲರೂ ಡೋಸ್ ಪಡೆಯಬೇಕು ಎಂದು ಹೇಳಿದರು.
ಜಿನೋವಿಕ್ ಸೀಕ್ವೆನ್ಸಿಂಗ್ ನಿರಂತರವಾಗಿ ನಡೆಯುತ್ತಿದೆ. ಟಾಸ್ಕ್‍ಫೆÇೀರ್ಸ್ ಅಡ್ವೈಸರಿ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಕೊರೊನಾ ನಿಯಂತ್ರಣ ಮಾರ್ಗಸೂಚಿ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳೊಂದಿಗೆ ನಾಳೆ ಚರ್ಚೆ ನಡೆಸಲಿದ್ದಾರೆ. ಕೊರೊನಾ ಪ್ರಕರಣಗಳು ಎಲ್ಲಿ ಪತ್ತೆಯಾಗುತ್ತಿವೆ, ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿರುವ ಬಗ್ಗೆ, ಸೋಂಕಿತರ ಲಕ್ಷಣಗಳ ಬಗ್ಗೆ ನಾವು ಮಾನಿಟರ್ ಮಾಡುತ್ತೇವೆ. ಸದ್ಯ ಈವರೆಗೆ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಗಂಭೀರ ಲಕ್ಷಣಗಳು ಕಂಡುಬಂದಿಲ್ಲ. ಪರಿಸ್ಥಿತಿ ಸುಧಾರಣೆಯಲ್ಲಿದೆ.ಹೊರದೇಶದಿಂದ ಬರುವವರು ಲಕ್ಷಣ ಕಂಡುಬಂದರೆ ತಪಾಸಣೆ ಮಾಡಿಸಿಕೊಂಡು ಐಸೊಲೇಟ್ ಆಗಬೇಕು ಎಂದರು.
ಪ್ರತಿಯೊಂದು ಅಲೆಯೂ ಒಂದೊಂದು ರೂಪದಲ್ಲಿರುತ್ತದೆ. ಮಾಸ್ಕ್ಅನ್ನು ಹಿಂದಿನ ಅಲೆಯ ಸಂದರ್ಭದಲ್ಲಿ ಕಡ್ಡಾಯ ಮಾಡಿದ ರೀತಿ ಸರ್ಕಾರ ಕಡ್ಡಾಯ ಮಾಡಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳಿದರು.
ಮಾರ್ಷಲ್ ಗಳ ನೇಮಕದ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ದಂಡದ ವಿಚಾರವಾಗಿ ಸರ್ಕಾರದ ಆದೇಶದ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5