nammatumakuru

    Subscribe to Updates

    Get the latest creative news from FooBar about art, design and business.

    What's Hot

    ಒಂದೇ ದೃಶ್ಯಕ್ಕೆ ಇಷ್ಟೊಂದು ಖರ್ಚಾ? ‘ರಾಮಾಯಣ’ ಚಿತ್ರದ ರಥದ ಬೆಲೆ ಕೇಳಿದರೆ ಅಚ್ಚರಿಯಾಗುತ್ತೆ!

    November 7, 2026

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026

    ಸಾವಿನ ಬಳಿಕ 13 ದಿನ ಆತ್ಮ ಮನೆಯಲ್ಲೇ ಇರುತ್ತದೆಯೇ? 

    November 7, 2026
    Facebook Twitter Instagram
    ಟ್ರೆಂಡಿಂಗ್
    • ಒಂದೇ ದೃಶ್ಯಕ್ಕೆ ಇಷ್ಟೊಂದು ಖರ್ಚಾ? ‘ರಾಮಾಯಣ’ ಚಿತ್ರದ ರಥದ ಬೆಲೆ ಕೇಳಿದರೆ ಅಚ್ಚರಿಯಾಗುತ್ತೆ!
    • ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?
    • ಸಾವಿನ ಬಳಿಕ 13 ದಿನ ಆತ್ಮ ಮನೆಯಲ್ಲೇ ಇರುತ್ತದೆಯೇ? 
    • ತಿಪಟೂರು: ನೂತನ ಕನಕ ಭವನದ ಮೇಲ್ಚಾವಣಿ ನಿರ್ಮಾಣಕ್ಕೆ ಕೆಪಿಸಿಸಿ ಸದಸ್ಯ ವಿ. ಯೋಗೇಶ್ ಭರವಸೆ
    • ಸೋನಾಳ ಗ್ರಾ.ಪಂ. ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ: ವಿಬಿ–ಜಿ ರಾಮ್ ಜಿ ಯೋಜನೆಯ ಸೌಲಭ್ಯ ಪ್ರತಿಯೊಬ್ಬರಿಗೂ ಮುಟ್ಟಲಿ: ಸೂರ್ಯಕಾಂತ ಎಕಲಾರ
    • ಮಧುಗಿರಿ: ಪಟ್ಟಣದಲ್ಲಿ ಹೊಸ ಬಾರ್‌ ಗಳಿಗೆ ಅನುಮತಿ ಬೇಡ: ಡಾ. ಕೆ.ಎಸ್. ಪಾಂಡುರಂಗಾರೆಡ್ಡಿ
    • ಹಲ್ಕುರಿಕೆ ಕೆರೆಗೆ ನೀರು: ನ.23ರ ಗಡುವು | ನೀರು ಹರಿಸದಿದ್ದರೆ ಬೃಹತ್ ಪಾದಯಾತ್ರೆ: ಜೆಡಿಎಸ್ ಮುಖಂಡ ಶಾಂತ್ ಕುಮಾರ್ ಎಚ್ಚರಿಕೆ
    • ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆಯಾಗಲ್ಲ; ಬಸ್ ದರ ಏರಿಕೆ ಅನಿವಾರ್ಯ: ಡಾ. ಜಿ. ಪರಮೇಶ್ವರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರಾತ್ರೋ ರಾತ್ರಿ ಲಕ್ಷಾಂತರ ಮೌಲ್ಯದ ಕೊಬ್ಬರಿ ಕಳವು: ಕಳ್ಳರ ಕೈಚಳಕ ಕಂಡು ಬೆಚ್ಚಿಬಿದ್ದ ಜನ
    ತುರುವೇಕೆರೆ October 17, 2022

    ರಾತ್ರೋ ರಾತ್ರಿ ಲಕ್ಷಾಂತರ ಮೌಲ್ಯದ ಕೊಬ್ಬರಿ ಕಳವು: ಕಳ್ಳರ ಕೈಚಳಕ ಕಂಡು ಬೆಚ್ಚಿಬಿದ್ದ ಜನ

    By adminOctober 17, 2022No Comments1 Min Read
    turuvekere

    ತುರುವೇಕೆರೆ: ತಾಲೂಕಿನ ಸುತ್ತಮುತ್ತ ಗ್ರಾಮದಲ್ಲಿ ಕೊಬ್ಬರಿ ಕಳ್ಳತನ ಹೆಚ್ಚಾಗಿದ್ದು, ರಾತ್ರಿ ಆಗೋದನ್ನೇ ಕಾಯುವ ಕಳ್ಳರು, ವ್ಯವಸ್ಥಿತವಾಗಿ ಕಳ್ಳತನ ನಡೆಸುತ್ತಿದ್ದು, ಕಳ್ಳತನಕ್ಕೂ ಮೊದಲು ಸಿಸಿ ಕ್ಯಾಮರಾಗಳ ಕೇಬಲ್ ಕಟ್ ಮಾಡಿ, ಸಾಕ್ಷಿ ನಾಶ ನಡೆಸುತ್ತಿದ್ದಾರೆ. ಕಳ್ಳರ ಹಾವಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.

    ಇನ್ನು ಇದೇ ತಿಂಗಳ 13ನೇ ತಾರೀಕಿನಂದು ತಾಲೂಕಿನ ಗೋಣಿ ತುಮಕೂರು ಗ್ರಾಮದ ವಾಸಿಯಾದ ರವೀಂದ್ರ ಕುಮಾರ್ ಅವರ ಮನೆಯಲ್ಲಿ ರಾತ್ರಿ 2 ಗಂಟೆಯ ಸುಮಾರಿಗೆ 1.68 ಲಕ್ಷ ರೂಪಾಯಿ ಬೆಲೆ ಬಾಳುವ  48 ಚೀಲ ಕೊಬ್ಬರಿಯನ್ನು ಕಳವು ಮಾಡಲಾಗಿದೆ. ಕಳ್ಳತನಕ್ಕೂ ಮೊದಲು ಸಿಸಿ ಟಿವಿಯ ಕೇಬಲ್ ಕಟ್ ಮಾಡಿರೋದೇ ಅಲ್ಲದೇ ಸಿಸಿ ಕ್ಯಾಮರಾದ ಕಣ್ಣಿಗೆ ಸೆಗಣಿ ಮೆತ್ತಿ, ಮನೆಗೆ ಹೊರಗಿನಿಂದ ಚಿಲಕ ಹಾಕಿ ಮನೆಯಿಂದ ಯಾರೂ ಹೊರಗೆ ಬಾರದಂತೆ ಕಳ್ಳರು ಕೈಚಳಕ ತೋರಿಸಿದ್ದಾರೆ.

    ಕಳ್ಳತನಕ್ಕೂ ಮೊದಲು  ಅಶೋಕ್ ಲೈಲ್ಯಾಂಡ್ ಎಂಬ ಗೂಡ್ಸ್ ವಾಹನ ಮನೆಯ ಪಕ್ಕದ ರಸ್ತೆ ಬದಿಯಲ್ಲಿ ಸುಮಾರು ಹೊತ್ತಿನವರೆಗೆ ನಿಂತಿತ್ತು.  ಇದೇ ವಾಹನ ರಸ್ತೆಯಲ್ಲಿ ಚಲಿಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಇದೇ ರೀತಿಯ ಕಳವು ಪ್ರಕರಣಗಳು ತಾಲೂಕಿನ  ಮೇಘಲಹೊರಗೆರೆಹಳ್ಳಿ, ಶಿವಪುರ, ಬಿಗಿನೇನಹಳ್ಳಿ, ಸಾದರಹಳ್ಳಿಗಳಲ್ಲೂ ಕಳೆದ 10 ರಿಂದ 15 ದಿನಗಳಲ್ಲಿ ನಡೆದಿದೆ ಎನ್ನಲಾಗಿದೆ.

    ಘಟನೆ ಸಂಬಂಧ ತುರುವೇಕೆರೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಲ್ ಇನ್ಸ್ ಪೆಕ್ಟರ್ ಗೋಪಾಲ್ ನಾಯಕ್ ಮತ್ತು ಸಬ್ ಇನ್ಸ್ ಪೆಕ್ಟರ್ ಕೇಶವಮೂರ್ತಿ ಅವರ ನೇತೃತ್ವದ ತಂಡ ಕೊಬ್ಬರಿ ಕಳ್ಳರ ಎಡೆಮುರಿ ಕಟ್ಟಲು ತನಿಖೆಯನ್ನು ಚುರುಕಾಗಿಸಿದ್ದಾರೆ.

    ವರದಿ: ಸುರೇಶ್ ಬಾಬು, ತುರುವೇಕೆರೆ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಮಾಹಿತಿ ಹಕ್ಕು ಕಾಯ್ದೆಯಡಿ ತಪ್ಪು ದಾಖಲೆ ನೀಡಿದ ಆರೋಪ: ರೈತ ಸಂಘಟನೆಗಳಿಂದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

    October 19, 2026

    ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಕಾರು: ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿದ ಕುಟುಂಬ

    October 15, 2026

    ತುರುವೇಕೆರೆ: ಸಮುದಾಯ ಸಂಘಟಕ ಹುದ್ದೆಗೆ ಅರ್ಜಿ ಆಹ್ವಾನ

    September 21, 2026

    Comments are closed.

    Our Picks

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026

     ವಿಶ್ವವಿಖ್ಯಾತ ತಾಜ್ ಮಹಲ್‌ ಗೆ ರಾತ್ರಿ ಲೈಟಿಂಗ್ ವ್ಯವಸ್ಥೆ ಏಕಿಲ್ಲ? ಇದರ ಹಿಂದಿದೆ ಅಚ್ಚರಿಯ ಕಾರಣ!

    November 6, 2026

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಸ್ಪೆಷಲ್ ನ್ಯೂಸ್

    ಒಂದೇ ದೃಶ್ಯಕ್ಕೆ ಇಷ್ಟೊಂದು ಖರ್ಚಾ? ‘ರಾಮಾಯಣ’ ಚಿತ್ರದ ರಥದ ಬೆಲೆ ಕೇಳಿದರೆ ಅಚ್ಚರಿಯಾಗುತ್ತೆ!

    November 7, 2026

    ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಈಗಾಗಲೇ ಭಾರಿ ಕುತೂಹಲ ಮೂಡಿಸಿದೆ. ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ…

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026

    ಸಾವಿನ ಬಳಿಕ 13 ದಿನ ಆತ್ಮ ಮನೆಯಲ್ಲೇ ಇರುತ್ತದೆಯೇ? 

    November 7, 2026

    ತಿಪಟೂರು: ನೂತನ ಕನಕ ಭವನದ ಮೇಲ್ಚಾವಣಿ ನಿರ್ಮಾಣಕ್ಕೆ ಕೆಪಿಸಿಸಿ ಸದಸ್ಯ ವಿ. ಯೋಗೇಶ್ ಭರವಸೆ

    November 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.