nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸ್ವೀಟ್ ಅಂಗಡಿ, ರೆಸ್ಟೋರೆಂಟ್, ಹೋಟೆಲ್ ಗಳ ಮೇಲೆ ದಾಳಿ: ಸ್ವಚ್ಛತೆ ಇಲ್ಲ, ಹಳೆ ತರಕಾರಿ ಬಳಕೆ ಪತ್ತೆ: ನೋಟಿಸ್

    October 15, 2026

    ಡೆಂಗೀ ಹಾಗೂ ಚಿಕೂನ್ ಗುನ್ಯ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿ: ಈ ಮಾಹಿತಿ ತಪ್ಪದೇ ಓದಿ!

    October 15, 2026

    ರುಡ್ ಸೆಟ್ ಸಂಸ್ಥೆ : ಫಾಸ್ಟ್ ಫುಡ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ

    October 15, 2026
    Facebook Twitter Instagram
    ಟ್ರೆಂಡಿಂಗ್
    • ಸ್ವೀಟ್ ಅಂಗಡಿ, ರೆಸ್ಟೋರೆಂಟ್, ಹೋಟೆಲ್ ಗಳ ಮೇಲೆ ದಾಳಿ: ಸ್ವಚ್ಛತೆ ಇಲ್ಲ, ಹಳೆ ತರಕಾರಿ ಬಳಕೆ ಪತ್ತೆ: ನೋಟಿಸ್
    • ಡೆಂಗೀ ಹಾಗೂ ಚಿಕೂನ್ ಗುನ್ಯ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿ: ಈ ಮಾಹಿತಿ ತಪ್ಪದೇ ಓದಿ!
    • ರುಡ್ ಸೆಟ್ ಸಂಸ್ಥೆ : ಫಾಸ್ಟ್ ಫುಡ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
    • ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಕಾರು: ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿದ ಕುಟುಂಬ
    • ಅತಿಥಿ ಶಿಕ್ಷಕರ ನೇಮಕ: ಅರ್ಜಿ ಆಹ್ವಾನ
    • ಧಾರ್ಮಿಕ ಪರಂಪರೆಗೆ ಆಧುನಿಕ ಸ್ಪರ್ಶ: ತುಮಕೂರು ದಸರಾ ಉತ್ಸವದಲ್ಲಿ ಹೊಸ ಆಕರ್ಷಣೆಗಳು ಇವು 
    • ಸೊಳ್ಳೆಗಳ ಕಾಟಕ್ಕೆ ಮನೆಮದ್ದು ಪರಿಹಾರ!
    • WhatsApp ಬಳಕೆದಾರರೇ ಎಚ್ಚರ! ಈ 2 ಸೆಟ್ಟಿಂಗ್‌ ಆನ್ ಮಾಡಿ, ಸೈಬರ್ ವಂಚನೆಯ ಅಪಾಯ ತಗ್ಗಿಸಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಕ್ಕರೆನಾಡಲ್ಲಿ ವಿಚಿತ್ರ ಕಳ್ಳತನ ಪ್ರಕರಣ: ಕಳ್ಳತನಕ್ಕೆ ಬಂದು ಅಡುಗೆ ಮಾಡಿ ತಿಂದ ಆಸಾಮಿ
    ರಾಜ್ಯ ಸುದ್ದಿ February 25, 2022

    ಸಕ್ಕರೆನಾಡಲ್ಲಿ ವಿಚಿತ್ರ ಕಳ್ಳತನ ಪ್ರಕರಣ: ಕಳ್ಳತನಕ್ಕೆ ಬಂದು ಅಡುಗೆ ಮಾಡಿ ತಿಂದ ಆಸಾಮಿ

    By adminFebruary 25, 2022No Comments2 Mins Read
    anganawadi

    ಸಾಮಾನ್ಯವಾಗಿ ದೊಡ್ಡ ದೊಡ್ಡ ಅಂಗಡಿಗಳು, ಸ್ಥಿತಿವಂತರ ಮನೆಯಲ್ಲಿ ಕಳ್ಳತನ ಆಗುವ ಘಟನೆಗಳ ಬಗ್ಗೆ ನಿತ್ಯ ಕೇಳುತ್ತೇವೆ. ಆದರೆ, ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ವಿಚಿತ್ರ ಕಳ್ಳತನದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಳ್ಳತನಕ್ಕಾಗಿ ಬಂದ ಕಳ್ಳನಿಗೆ ಯಾವುದೇ ಬೆಲೆ ಬಾಳುವ ವಸ್ತು ಸಿಗದಿದ್ದಾಗ ಆತ ಮಾಡಿದ್ದೇನು ಎಂದು ತಿಳಿದರೆ ನೀವು ಆಚ್ಚರಿ ಪಡಬಹುದು. ಜೊತೆಗೆ ಇವನೆಂತ ಆಸಾಮಿ ಎಂದೂ ಅನಿಸಬಹುದು.

    ವಾಸ್ತವವಾಗಿ, ಇಲ್ಲೊಬ್ಬ ಕಳ್ಳ ಅಂಗನವಾಡಿಯಲ್ಲಿ ಕನ್ನ ಹಾಕಲು ಯೋಜನೆ (Robbery In Anganwadi) ರೂಪಿಸಿದ್ದ. ಕಳ್ಳತನಕ್ಕೆಂದು ಬಂದಿದ್ದ ಕಳ್ಳನಿಗೆ ಅಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಗದ ಕಾರಣ ಅಲ್ಲಿದ್ದ ಪದಾರ್ಥದಲ್ಲೆ ಅಡುಗೆ ಮಾಡಿ ತಿಂದು ಹೋಗಿದ್ದಾನೆ. ಹೋಗುವ ಮುನ್ನ ಅಲ್ಲಿದ್ದ ಪುಸ್ತಕದಲ್ಲಿ ಮೂರು ಪುಟಗಳ ಪತ್ರ ಬರೆದು, ತನ್ನ ಜೀವನದ ಪ್ರಮುಖ ಘಟನೆಗಳು ಸೇರಿದಂತೆ ತನ್ನ ಅನಿಸಿಕೆ ಬರೆದು ಹೋಗಿದ್ದಾನೆ ಎನ್ನಲಾಗಿದೆ.ಹೌದು, ಈ ಘಟನೆ ವಿಚಿತ್ರ ಎಂದೆನಿಸಿದರೂ ಸತ್ಯ. ಮಂಡ್ಯ (Mandya) ಜಿಲ್ಲೆ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದ ಶಿಂಷಾ ರಸ್ತೆಯಲ್ಲಿದ್ದ ಅಂಗನವಾಡಿ ಕೇಂದ್ರಕ್ಕೆ ತಡರಾತ್ರಿ ಕಳ್ಳನೋರ್ವ ಅಂಗನಾಡಿ ಕೇಂದ್ರದ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾನೆ. ಅಂಗನವಾಡಿ ಕೇಂದ್ರದಲ್ಲಿದ್ದ ಬೀರುವಿನ‌ ಬಾಗಿಲು ಮರಿದು ಹಣಕ್ಕಾಗಿ ತಡಕಾಟ ನಡೆಸಿದ್ದಾನೆ. ಆದರೆ ಕಪಾಟಿನಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಗದ್ದಾಗ ಕಡೆಗೆ ಅಲ್ಲೇ ಇದ್ದ ಅಡುಗೆ ಸಾಮಾಗ್ರಿಗಳನ್ನೂ ಬಳಸಿಕೊಂಡು ಅಡುಗೆ ಮಾಡಿ ಊಟ ಮಾಡಿ ಹೋಗಿದ್ದಾನೆ ಎಂದು ಹೇಳಲಾಗಿದೆ.

    ಅಂಗನವಾಡಿಯಲ್ಲಿ ಅಡುಗೆ ಮಾಡಿ, ಊಟ ಮಾಡಿದ ಬಳಿಕ ಈ ಆಸಾಮಿ ಕಳ್ಳ ಅಲ್ಲೇ ಇದ್ದ
    ನೋಟ್ ಪುಸ್ತಕ ತೆಗೆದುಕೊಂಡು ಆ ನೋಟ್ ಪುಸ್ತಕದಲ್ಲಿ ಮುದ್ದಾದ ಬರಹದಲ್ಲಿ ಮೂರು ಪುಟಗಳಷ್ಟು ತನ್ನ ಜೀವನದ ಪ್ರಮುಖ ಘಟನೆಗಳನ್ನು ಬರೆದಿದ್ದಾನೆ ಎನ್ನಲಾಗಿದೆ. ಬೆಳಿಗ್ಗೆ ಎಂದಿನಂತೆ ಅಂಗನವಾಡಿ ಕಾರ್ಯಕರ್ತೆ ಅಂಗನವಾಡಿ ಬಾಗಿಲು ತೆರೆಯಲು ಬಂದಾಗ ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ಥಳೀಯ ಪಂಡಿತಹಳ್ಳಿ ಗ್ರಾ. ಪಂ. ಪಿಡಿಒ ಮಹದೇವರವರಿಗೆ ಅಂಗನವಾಡಿ ಕಾರ್ಯಕರ್ತೆ ಈ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪಿಡಿಒ ಶಿಕ್ಷಕಿಯ ಜೊತೆ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

    ಈ ವಿಚಿತ್ರ ಕಳ್ಳತ‌ನದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮಳವಳ್ಳಿ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಕುರಿತಂತೆ ತನಿಖೆ ಮುಂದುವರೆದಿದ್ದು ಈ ವಿಚಿತ್ರ ಕಳ್ಳನಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ.

    ವರದಿ: ಆಂಟೋನಿ ಬೇಗೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ರೈತರ ಬೇಡಿಕೆ ಈಡೇರುವವರೆಗೆ ಸಕ್ಕರೆ ಮುಟ್ಟಲ್ಲ! ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರತಿಜ್ಞೆ

    October 14, 2026

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಹಿಂದೆ ಯಾರು? ಕೆ.ಎನ್.ರಾಜಣ್ಣ ಹೇಳಿದ್ದೇನು?

    October 14, 2026

    “ದಮ್ಮು, ತಾಕತ್ತು ಇದ್ದರೆ ಹೋರಾಟಕ್ಕೆ ಬನ್ನಿ”; ನಟ ಸುದೀಪ್‌ ಗೆ ಉಗ್ರಪ್ಪ ಸವಾಲು?

    October 14, 2026

    Leave A Reply Cancel Reply

    Our Picks

    ಜಗನ್ನಾಥನ ರಥದ ಚಕ್ರ ಮನೆಗೆ ತರಬೇಕಾ? ಖರೀದಿಸಲು ಎಷ್ಟು ಹಣ ಕೊಡಬೇಕು?

    October 14, 2026

    ನಿಮ್ಮ ಮೊಬೈಲ್ ರೀಚಾರ್ಜ್‌ನಿಂದ ಟೆಲಿಕಾಂ ಕಂಪನಿಗಳಿಗೆ ಎಷ್ಟು ಲಾಭ?

    October 14, 2026

    ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್

    October 13, 2026

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕುಣಿಗಲ್

    ಸ್ವೀಟ್ ಅಂಗಡಿ, ರೆಸ್ಟೋರೆಂಟ್, ಹೋಟೆಲ್ ಗಳ ಮೇಲೆ ದಾಳಿ: ಸ್ವಚ್ಛತೆ ಇಲ್ಲ, ಹಳೆ ತರಕಾರಿ ಬಳಕೆ ಪತ್ತೆ: ನೋಟಿಸ್

    October 15, 2026

    ಕುಣಿಗಲ್: ತಾಲೂಕಿನ ವಿವಿಧೆಡೆ ಆಹಾರ ಸುರಕ್ಷತಾಧಿಕಾರಿ, ಆರೋಗ್ಯಾಧಿಕಾರಿ ಮತ್ತು ಅವರ ತಂಡ ಹೋಟೆಲ್, ರೆಸ್ಟೋರೆಂಟ್, ಹಾಟ್ ಚಿಪ್ಸ್, ಸ್ವೀಟ್ ಅಂಗಡಿ…

    ಡೆಂಗೀ ಹಾಗೂ ಚಿಕೂನ್ ಗುನ್ಯ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿ: ಈ ಮಾಹಿತಿ ತಪ್ಪದೇ ಓದಿ!

    October 15, 2026

    ರುಡ್ ಸೆಟ್ ಸಂಸ್ಥೆ : ಫಾಸ್ಟ್ ಫುಡ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ

    October 15, 2026

    ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಕಾರು: ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿದ ಕುಟುಂಬ

    October 15, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.