ಹಾವೇರಿ: ಕಮಲ್ ಹಾಸನ್ ಸಣ್ಣತನದ ಹೇಳಿಕೆ ನೀಡಿದಲ್ಲದೇ, ಕನ್ನಡಿಗರಿಗೆ ಕ್ಷಮೆ ಕೇಳದೇ ಮೊಂಡುತನ ಪ್ರದರ್ಶಿಸುತ್ತಿದ್ದಾರೆ ಎಂದು ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂಬ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ತಮಿಳು, ಕನ್ನಡ ಎರಡೂ ಒಂದೇ ಮೂಲದ ಭಾಷೆಗಳು. ಇವು ದ್ರಾವಿಡ ವರ್ಗದಿಂದ ಬಂದ ಭಾಷೆಗಳಾಗಿವೆ. ಎರಡೂ ಕೂಡಾ ಸಹೋದರ ಭಾಷೆಗಳು. ಕಮಲ್ ಹಾಸನ್ ಅವೈಜ್ಞಾನಿಕ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ Vs ಡಿಸಿಎಂ ಮಧ್ಯೆ ವರ್ಗಾವಣೆ ಸಂರ್ಘರ್ಷ – ನಿಜಕ್ಕೂ ಆಗಿದ್ದೇನು? ಡಿಕೆಶಿ ಆಕ್ಷೇಪ ಏಕೆ?
ಕಮಲ್ ಹಾಸನ್ ಇಷ್ಟಾದ್ರೂ ಕನ್ನಡಿಗರ ಬಳಿ ಕ್ಷಮೆ ಕೇಳದೇ ಮೊಂಡುತನ ತೋರಿಸಿದ್ದಾರೆ. ಸಣ್ಣತನದ ಹೇಳಿಕೆ ನೀಡಿದ್ದಾರೆ. ಕ್ಷಮೆ ಕೇಳುವ ವಿನಯವೂ ಅವರಿಗೆ ಇಲ್ಲ. ಸುಳ್ಳಲ್ಲೇ ಮೆರೆಯೋಕೆ ನೋಡ್ತಿದಾರೆ. ಅವರು ವೈಚಾರಿಕೆ ನೆಲೆಗಟ್ಟಿನಲ್ಲಿ ಮಾತಾಡಬೇಕು. ಕಮಲ್ ಹಾಸನ್ ಹೇಳಿಕೆಯಲ್ಲಿ ದ್ರಾವಿಡ ಪರಿಕಲ್ಪನೆಯೂ ಅಲ್ಲ ಎಂದು ಆಕ್ರೋಶ ಹೊರಹಾಕಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————