ಬೀದರ್: ಚುನಾವಣಾ ಹೊಸ್ತಿನಲ್ಲಿರುವ ಬಿಹಾರಕ್ಕೆ ಕೇಂದ್ರ ಬಿಜೆಪಿ ಸರ್ಕಾರದಿಂದ ಬಂಪರ್ ಕೊಡುಗೆ ನೀಡಿದೆ. ಆದರೆ ಕರ್ನಾಟಕಕ್ಕೆ ಮತ್ತೆ ಚೊಂಬು ನೀಡಿದೆ ಎಂದು ಕೆಪಿಸಿಸಿ ಸಾಮಾಜಿಕ ಮಾಧ್ಯಮ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ ಕೊಳ್ಳುರ ಟೀಕಿಸಿದ್ದಾರೆ.
ಕೇಂದ್ರ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಹೊಸ ಯೋಜನೆಗಳ ಮಳೆ ಅಲ್ಲಿ, ಇಲ್ಲಿ ಬರಡು ನೆಲ ಎಂದು ಬೇಸರ ವ್ಯಕ್ತಪಡಿಸಿದ್ದು, ಜಿಡಿಪಿ ಹಂಚಿಕೆ ಸಮಾನವಿಲ್ಲ, ಅಭಿವೃದ್ಧಿಯೂ ಏಕಪಕ್ಷೀಯ! ಎಂದು ಟೀಕಿಸಿದರು.
2025ರ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕವನ್ನು ಮತ್ತೆ ನಿರ್ಲಕ್ಷಿಸಲಾಗಿದ್ದು, ಯಾವುದೇ ದೊಡ್ಡ ಅಭಿವೃದ್ಧಿ ಯೋಜನೆ ಘೋಷಣೆ ಆಗಿಲ್ಲ. ಪೂರಕ ಅನುದಾನವಿಲ್ಲ, ಮಹತ್ತರ ಯೋಜನೆಗಳೆಂದರೆ ಖಾಲಿ ಭರವಸೆ! ನಮ್ಮ ತೆರಿಗೆ ಹಣದಿಂದ ಇತರ ರಾಜ್ಯಗಳಿಗೆ ಕೋಟಿ ಕೋಟಿ ಅನುದಾನ, ಆದರೆ ಕರ್ನಾಟಕಕ್ಕೆ ಮಾತ್ರ ಕೈಲಾದಷ್ಟು ಕಡಿತ ಮಾಡಲಾಗಿದೆ. ಇದು ನಿರಾಶದಾಯಕ ಬಜೆಟ್ ಎಂದು ಅವರು ಹೇಳಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4