ತುಮಕೂರು: ಬೆಂಗಳೂರಿನ ಅಲಂಕಾರಿಕ ಮೀನು ಕೇಂದ್ರವೊಂದರಲ್ಲಿ ಕೋಯಿ ಕಾರ್ಪ್ ಅಲಂಕಾರಿಕ ಮೀನಿನ ತಳಿಯಲ್ಲಿ ಕೋಯಿ ಹರ್ಪ್ಸ್ ವೈರಸ್(ಕೆಹೆಚ್ ವಿ) ಸೋಂಕಿನ ಲಕ್ಷಣ ಕಂಡು ಬಂದಿದೆ ಎಂದು ನ್ಯಾಷನಲ್ ಬ್ಯೂರೋ ಆಫ್ ಫಿಶ್ ಜೆನೆಟಿಕ್ ರಿಸೋರ್ಸಸ್ ನವರು ದೃಢಪಡಿಸಿದ್ದಾರೆ.
ಮೀನು ಕೃಷಿಕರು ಯಾವುದೇ ಮೀನನ್ನು ಬೇರೆ ದೇಶದಿಂದ ಆಮದು ಮಾಡಿಕೊಳ್ಳುವಾಗ ಕಡ್ಡಾಯವಾಗಿ ಕೆಹೆಚ್ ವಿ ತಪಾಸಣೆಗೊಳಪಡಿಸಬೇಕು ಎಂದು ವರ್ಲ್ಡ್ ಆರ್ಗನೈಸೇಷನ್ ಫಾರ್ ಅನಿಮಲ್ ಹೆಲ್ತ್ನವರು ಸೂಚಿಸಿದ್ದಾರೆ.
ದೇಶದಲ್ಲಿ ಮೊದಲ ಬಾರಿಗೆ ಈ ವೈರಸ್ ದಾಖಲಾಗಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಯಾರಾದರೂ ಬೇರೆ ದೇಶದಿಂದ ಅಲಂಕಾರಿಕ ಮೀನು ತರಲಿಚ್ಛಿಸುವವರು ವೈರಸ್ ತಪಾಸಣೆಯಲ್ಲಿ ನೆಗೆಟಿವ್ ವರದಿ ಇದ್ದರೆ ಮಾತ್ರ ತರಬೇಕೆಂದು ಮಂಗಳೂರಿನ ಮೀನುಗಾರಿಕೆ ಕಾಲೇಜು ಸೂಚಿಸಿದೆ ಎಂದು ಮೀನುಗಾರಿಕೆ ಉಪನಿರ್ದೇಶಕ ಶಿವಶಂಕರ್ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW