ತುಮಕೂರು: ಪಾಲಿಕೆ ವತಿಯಿಂದ ನಗರದ ಕುಣಿಗಲ್ ರೈಲ್ವೆ ಅಂಡರ್ ಪಾಸ್ ನಲ್ಲಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಕುಣಿಗಲ್ ಅಂಡರ್ ಪಾಸ್ ಮಾರ್ಗವಾಗಿ ಹೋಗುವ ವಾಹನಗಳ ಸಂಚಾರವನ್ನು ಜೂನ್ 24ರವರೆಗೆ ಸ್ಥಗಿತಗೊಳಿಸಿ ವಾಹನಗಳ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆದೇಶ ಹೊರಡಿಸಿದ್ದಾರೆ.
ಈ ಆದೇಶದನ್ವಯ ಲಕ್ಕಪ್ಪ ಸರ್ಕಲ್‌ನಿಂದ ಕುಣಿಗಲ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಲಕ್ಕಪ್ಪ ಸರ್ಕಲ್–ಗುಬ್ಬಿ ರಿಂಗ್ ರಸ್ತೆ ಜಂಕ್ಷನ್–ಕುಣಿಗಲ್ ಜಂಕ್ಷನ್‌ಗೆ ಹಾಗೂ ಕುಣಿಗಲ್ ಕಡೆಯಿಂದ ಲಕ್ಕಪ್ಪ ಸರ್ಕಲ್ ಕಡೆಗೆ ಬರುವ ವಾಹನಗಳು ಕುಣಿಗಲ್ ಜಂಕ್ಷನ್-ಗುಬ್ಬಿ ರಿಂಗ್ ರಸ್ತೆ ಜಂಕ್ಷನ್-ಲಕ್ಕಪ್ಪ ಸರ್ಕಲ್‌ಗೆ ಬರಬೇಕು.
ಸದಾಶಿವನಗರ, ಬನಶಂಕರಿ, ಎಸ್.ಎಸ್.ಐ.ಟಿ. ಕಾಲೇಜಿನ ಕಡೆಗಳಿಂದ ಬರುವ ದ್ವಿಚಕ್ರ ಮತ್ತು ಕಾರಿನ ಚಾಲಕರು ಲಕ್ಕಪ್ಪ ಸರ್ಕಲ್ ಕಡೆಗೆ ಹೋಗಲು ಹೇಮಾವತಿ ಕಛೇರಿ ಮುಂಭಾಗದ ರಸ್ತೆಯ ಮೂಲಕ ದಾನಾ ಪ್ಯಾಲೇಸ್-ಗುಬ್ಬಿ ರಿಂಗ್ ರಸ್ತೆ ಜಂಕ್ಷನ್‌ನಿAದ ಲಕ್ಕಪ್ಪ ಸರ್ಕಲ್‌ಗೆ ಬರಬೇಕು.
ಲಕ್ಕಪ್ಪ ಸರ್ಕಲ್ ಕಡೆಯಿಂದ ಸದಾಶಿವನಗರ, ಬನಶಂಕರಿ, ಎಸ್.ಎಸ್.ಐ.ಟಿ.ಕಾಲೇಜಿನ ಕಡೆಗೆ ಹೋಗುವ ದ್ವಿಚಕ್ರ ಮತ್ತು ಕಾರು ಚಾಲಕರು ಲಕ್ಕಪ್ಪ ಸರ್ಕಲ್–ಗುಬ್ಬಿ ರಿಂಗ್ ರಸ್ತೆ ಜಂಕ್ಷನ್–ದಾನಾ ಪ್ಯಾಲೇಸ್ ಸಿಗ್ನಲ್ ಹೇಮಾವತಿ ಕಚೇರಿ ಮಾರ್ಗದಲ್ಲಿ ಸದಾಶಿವನಗರ, ಬನಶಂಕರಿ, ಎಸ್.ಎಸ್.ಐ.ಟಿ. ಕಡೆಗೆ ಹೋಗಬೇಕು.
ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದೆ. ತಪ್ಪಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಅಗತ್ಯ ಕ್ರಮವಹಿಸಲು ಪೊಲೀಸ್ ಇಲಾಖೆಗೆ ಸೂಚಿಸಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————