ಗದಗ: ಲಕ್ಕುಂಡಿಯಲ್ಲಿ ಜರುಗುತ್ತಿರುವ ಪ್ರಾಚ್ಯಾವಶೇಷಗಳ ಅನ್ವೇಷಣೆಯಲ್ಲಿ 5 ಬಾವಿ ಹಾಗೂ ಐದು ಶಾಸನಗಳು ಸೇರಿದಂತೆ 600ಕ್ಕೂ ಅಧಿಕ ಪ್ರಾಚ್ಯಾವಶೇಷಗಳು ಲಭ್ಯವಾಗಿವೆ ಎಂದು ಸಚಿವ ಎಚ್.ಕೆ.ಪಾಟೀಲ್ ಅವರು ಹೇಳಿದರು.
ಲಕ್ಕುಂಡಿ ಗ್ರಾಮದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಕುಂಡಿಯನ್ನು ರಾಷ್ಟ್ರಕೂಟರ ಕಾಲದಲ್ಲಿ ಕಟ್ಟಿದ್ದಾರೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ವಿಶೇಷ ಅಭಿವೃದ್ಧಿ ಹೊಂದಿ ಕಲಚುರ್ಯರು, ಹೊಯ್ಸಳ ರು, ಕೆಲವು ಕಾಲ ವಿಜಯನಗರದ ಅರಸರು ಆಳಿದ್ದಾರೆ. ಇಂದು ಪ್ರಾಚ್ಯಾವಶೇಷಗಳ ಅನ್ವೇಷಣೆ ಸಂಗ್ರಹಣೆ ಕೆಲಸವೂ ವಿಶೇಷ ಪ್ರಯತ್ನವಾಗಿದ್ದು ಸಾಂಸ್ಕೃತಿಕ, ಐತಿಹಾಸಿಕ, ಕಾಂತ್ರಿಕಾರಿಕ ಹೆಜ್ಜೆ ಎಂದರು.
ನವೆಂಬರ್ 22, 23 ಮತ್ತು24 ರಂದು ಪ್ರಾಚ್ಯಾವಶೇಷಗಳ ಅನ್ವೇಷಣೆ ಕೈಗೊಂಡು ಲಕ್ಕುಂಡಿಯಲ್ಲಿ ಈ ಹಿಂದೆ ಇದ್ದ 101 ದೇವಾಲಯಗಳಲ್ಲಿ ಇಂದು 50–60 ಲಭ್ಯವಾಗಿದೆ ಹಾಗೂ 8–10 ದೇವಾಲಯದ ಪಾಯಗಳು ದೊರಕಿವೆ. ಇನ್ನೂ ಉಳಿದ ದೇವಾಲಯಗಳು ಎಲ್ಲೆಲ್ಲಿ ಇದ್ದವು ಎಂದು ಗುರುತಿಸುವ ಬಹು ದೊಡ್ಡ ಕೆಲಸವಾಗಿದೆ ಹಾಗೂ ಹುದುಗಿಹೋದ ದೇವಾಲಯಗಳಲ್ಲಿ ಮರುಸೃಷ್ಟಿಸಬಹುದಾದ ದೇವಾಲಯ ಬಗ್ಗೆ ತಜ್ಞರು ಗಂಭೀರ ಆಲೋಚನೆ ಮಾಡುತ್ತಿದ್ದಾರೆ ಎಂದರು.
ಅನ್ವೇಷಣೆ ಸಂದರ್ಭದಲ್ಲಿ 5 ಹಳೆ ಬಾವಿಗಳು ಹೊಸದಾಗಿ ಸಿಕ್ಕಿದೆ ಹಾಗೂ 5 ಶಾಸನ ಲಭ್ಯವಾಗಿದೆ. ಅದರಲ್ಲಿ 3 ಶಾಸನಗಳು ಸಂಪೂರ್ಣ ಅಪ್ರಕಟಿತವಾಗಿದೆ. 2 ಅಪ್ರಕಟಿತವಾಗಿದೆ ಎಂದು ತಿಳಿಸಿದರು.
ಈ ಕಾರ್ಯ ಎಲ್ಲರನ್ನೂ ಹುಮ್ಮಸ್ಸುಗೊಳಿಸಿದೆ, ಸರ್ಕಾರ ಕೆಲಸದಿಂದ ಇತಿಹಾಸವಿರುವ ಗ್ರಾಮಗಳಲ್ಲಿ ಯಾವ ರೀತಿ ಕಾರ್ಯ ಕೈಗೊಳ್ಳಬಹುದು ಎನ್ನುವುದರ ಬಗ್ಗೆ ದಿಕ್ಸೂಚಿ ಆಗಿದೆ ಎಂದು ಹೇಳಿದರು.
ಇಂದು 13 ಗುಡಿಗಳನ್ನು ರಕ್ಷಿತ ಸ್ಮಾರಕ ಎಂದು ಪೋಷಿಸಲು ಸರ್ಕಾರ ನಿರ್ಣಾಯ ಮಾಡಿದೆ ಹಾಗೂ 1 ಮಠದಲ್ಲಿ ವಾಸಮಾಡುತ್ತಿರುವ ಮಾಲಿಕರು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಬಿಟ್ಟುಕೊಟ್ಟಿದ್ದಾರೆ. ಸ್ವ ಇಚ್ಛೆಯಿಂದ ಬಿಟ್ಟು ಕೊಟ್ಟ ಅವರಿಗೆ ಸರ್ಕಾರದಿಂದ ವಿಶೇಷ ಗೌರವ ನೀಡಲಾಗಿದೆ ಹಾಗೂ ಇನ್ನೂ 4 ಹತ್ತಿರ ವಾಸಮಾಡುತ್ತಿರುವ ಗುಡಿಗಳನ್ನು ಸರ್ಕಾರ ಪಡೆದುಕೊಳ್ಳುವುದಕ್ಕೆ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದರು.
13 ಸ್ಮಾರಕಗಳ ಸಂರಕ್ಷಣಾ ಕೆಲಸ ಪ್ರಾರಂಭವಾಗಿದೆ. ಮೊದಲು ಭೂಮಿಯ ಮೇಲ್ಭಾಗದಲ್ಲಿ ಲಭ್ಯವಿರುವ ಸ್ಮಾರಕಗಳನ್ನು ಸಂಗ್ರಹಿಸುಲಾಗುತ್ತದೆ. ಆನಂತರ ಡಿಸೆಂಬರ್ ಅಂತ್ಯದ ಒಳಗೆ ಉತ್ಖನನ ಕೆಲಸ ಪ್ರಾರಂಭಿಸಲಾಗುತ್ತದೆ ಹಾಗೂ ಕೋಟೆಯನ್ನು ಅಭಿವೃದ್ಧಿಪಡಿಸಿ ಲಕ್ಕುಂಡಿಯನ್ನು ಪ್ರವಾಸೋದ್ಯಮ ತಾಣವನ್ನಾಗಿಸಿ, ಇತಿಹಾಸವನ್ನು ತಿಳಿಯಲು ಬರುವವರಿಗೆ ಶ್ರೇಷ್ಠ ಕೇಂದ್ರವನ್ನಾಗಿಸಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯದಿಂದ ಲಕ್ಕುಂಡಿಯನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಹತ್ತಿರ ತೆಗೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು.
ಶಾಸಕರಾದ ಸಿ.ಸಿ.ಪಾಟೀಲ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿಯ ಸದಸ್ಯ,ಸಿದ್ಧಲಿಂಗೇಶ್ವರ ಎಚ್. ಪಾಟೀಲ,ಸೇರಿದಂತೆ ಉಳಿದ ಅಧಿಕಾರಿಗಳು ಹಾಜರಿದ್ದರು.
1050 ಪ್ರಾಚ್ಯಾವಶೇಷಗಳು ಪತ್ತೆ:
ಲಕ್ಕುಂಡಿಯಲ್ಲಿ ನಡೆದ ಪ್ರಾಚ್ಯಾವಶೇಷ ಅನ್ವೇಷಣೆಯಲ್ಲಿ ಸಾಯಂಕಾಲದ ವೇಳೆಗೆ 13 ಶಾಸನ ಸೇರಿದಂತೆ ಒಟ್ಟಾರೆ 1050 ಪ್ರಾಚ್ಯಾವಶೇಷಗಳು ಪತ್ಯೆಯಾಗಿವೆ. ಇವುಗಳಲ್ಲಿ ಪ್ರಮುಖವಾಗಿ ಗತಕಾಲದ ನಾಣ್ಯಗಳು, ದೇವರ ಮೂರ್ತಿಗಳು, ಶಿಲ್ಪ ಕಲೆ, ಶಿಲಾಮಂಟಪ ಅವಶೇಷಗಳು ಹಾಗೂ ಶಿಲಾಯುಗದ ಹಲವಾರು ಪಳವಳಿಕೆಗಳು ದೊರೆತಿವೆ. 3500 ವರ್ಷಗಳ ಹಿಂದಿನ ಶಿಲಾಯುಗದ ಕಲ್ಲಿನ ಆಯುಧ ಪತ್ತೆಯಾಗಿರುವುದು ವಿಶೇಷ.
ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ಕೆ ಜನಪದ ಕಲಾತಂಡ, ಪೊಲೀಸ್ ಬ್ಯಾಂಡ್ ಮೆರಗು ನೀಡಿತು. ಜೊತೆಗೆ ಗ್ರಾಮದ ಮಹಿಳೆಯರು ಸ್ವಯಂ ಪ್ರೇರಿತರಾಗಿ ಪೂರ್ಣ ಕುಂಭದೊಂದಿಗೆ ಪ್ರಮುಖ ದೀಪಗಳಲ್ಲಿ ಚಲಿಸಿದರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅನ್ವೇಷಣೆಯ ಪ್ರತಿ ತಂಡಕ್ಕೆ ಒಂದೊಂದು ಕಲಾ ತಂಡ ಇದ್ದು ಪ್ರಾಚ್ಯಾವಶೇಷಗಳಿಗೆ ವಿಶೇಷ ಆತಿಥ್ಯದೊಂದಿಗೆ ಸಂಗ್ರಹಿಸುವ ಕಾರ್ಯ ಭರದಿಂದ ಸಾಗಿತು ಒಟ್ಟಾರೆ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯ ಯಶಸ್ವಿಯಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q