ಚಿಕ್ಕನಾಯಕನಹಳ್ಳಿ: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅಲೆಮಾರಿ ಮತ್ತು ಸುಡುಗಾಡು ಸಿದ್ದ ಜನಾಂಗಕ್ಕೆ ಸೇರಿದ 30ಕ್ಕೂ ಹೆಚ್ಚು ಕುಟುಂಬಗಳು ಸುಮಾರು 50 ವರ್ಷಗಳಿಂದ ವಾಸವಿದ್ದಾರೆ ಇದೀಗ ಇವರ ಬಹುಕಾಲದ ಬೇಡಿಕೆಯನ್ನ ಈಡೇರಿಸುವುದಾಗಿ ಶಾಸಕ ಸುರೇಶ್ ಬಾಬು ಭರವಸೆ ನೀಡಿದ್ದಾರೆ
ಚಿಕ್ಕನಾಯಕನಹಳ್ಳಿಯ ದಬ್ಬೇಘಟ್ಟದ ಗುಂಡದೋಪಿನಲ್ಲಿ ವಾಸವಿದ್ದ ಈ ಅಲೆಮಾರಿ ಬುಡಕಟ್ಟು ಜನಾಂಗದ ಜನರಿಗೆ ಶಾಸಕ ಸುರೇಶ್ ಬಾಬು ನಿವೇಶನ ದೊರಕಿಸಿಕೊಡುವ ಭರವಸೆಯನ್ನ ಈಡೇರಿಸಿದ್ದಾರೆ.
ಅಲೆಮಾರಿಗಳಿಗೆ ಒಂದೇ ಜಾಗದಲ್ಲಿ ಸ್ಥಿರವಾಗಿ ಉಳಿಯುವ ಕಾಯಕಲ್ಪ ನಮ್ಮಿಂದ ಆಗಿದೆ ಎಂದು ಇದೇ ವೇಳೆ ಶಾಸಕ ಸುರೇಶ್ ಬಾಬು ಹೇಳಿದ್ದಾರೆ.
ನಿಮ್ಮ ಋಣದಲ್ಲಿ ಇರುತ್ತೇವೆ:
ತಮ್ಮ ಬೇಡಿಕೆಯನ್ನು ಈಡೇರಿಸಿದ ಶಾಸಕ ಶಾಸಕ ಸುರೇಶ್ ಬಾಬು ಅವರ ಕಾರ್ಯಕ್ಕೆ ಅಲೆಮಾರಿ ಬುಡಕಟ್ಟು ಜನಾಂಗ ಪ್ರತಿಕ್ರಿಯಿಸಿ, ಇದು ಅಲೆಮಾರಿಗಳ 30 ವರ್ಷಗಳ ಹೋರಾಟಕ್ಕೆ ಸಿಕ್ಕ ಫಲ, ನಾವು ಸತ್ತರೂ, ನಮ್ಮ ಮಕ್ಕಳಿಗೆ ಹೇಳಿ ಸಾಯ್ತೀವಿ…! ನೀವು ನೀಡಿದ ಭರವಸೆಯನ್ನ ಈಡೇರಿಸಿದ್ದೀರಿ ಎಂದು. ನಾವು ಸಾಯುವವರೆಗೂ ನಿಮ್ಮ ಋಣದಲ್ಲಿ ಇರುತ್ತೇವೆ ಎಂದು ಹೇಳಿದರು.
30 ವರ್ಷಗಳಿಂದ ನಿವೇಶನಕ್ಕಾಗಿ ಅಲೆಮಾರಿಗಳ ಪರದಾಟ ಕೊನೆಗೂ 30× 40. ಚದುರ ಅಡಿ ನಿವೇಶನ ಸಿಕ್ಕಿದೆ. ರಸ್ತೆ, ಶಾಲೆ ಹಾಗೂ ಶೌಚಾಲಯಗಳನ್ನು ನೀಡುತ್ತೇವೆಂದು ಭರವಸೆ ಶಾಸಕ ಸುರೇಶ್ ಬಾಬು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪುರಂದರ ಕೆ. ಪುರಸಭೆ ಅಧ್ಯಕ್ಷ ದಯಾನಂದ್, ರಾಜಶೇಖರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಧರ್ ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx