ಹುಬ್ಬಳ್ಳಿ : ಮಹದಾಯಿ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್ಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾ ಯಿ ತಿಳಿಸಿದರು.ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಮಹದಾಯಿ ಕುರಿತು ಕಾಂಗ್ರೆಸ್ ಸಮಾವೇಶ ಮಾಡುವ ಬಗ್ಗೆ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ರಕ್ತದಲ್ಲಿ ನಾನು ಪತ್ರ ಬರೆದಿದ್ದಕ್ಕೇ ಕಾಮಗಾರಿ ಪ್ರಾರಂಭವಾಗಿದ್ದು.
ನಾನು ನೀರಾವರಿ ಸಚಿವನಿದ್ದ ಸಂದರ್ಭದಲ್ಲಿ ಕಾಲುವೆಯನ್ನು 5.5 ಮೀಟರ್ ಗಳಷ್ಟು ನಿರ್ಮಾಣವಾಯಿತು. ಕಾಂಗ್ರೆಸ್ ಏನು ಮಾಡಿದರು ಎಂದು ವಾಗ್ದಾಳಿ ನಡೆಸಿದರು.ಸೋನಿಯಾ ಗಾಂಧಿ ಗೋವಾದಲ್ಲಿ ಒಂದು ಹನಿ ನೀರನ್ನು ತಿರುಗಿಸಲು ಬಿಡುವುದಿಲ್ಲ ಎಂದಿದ್ದರು. ಅವರ ಕಾಲದಲ್ಲಿ ನಾವು ನಿರ್ಮಿಸಿದ್ದ ಕಾಲುವೆಗೆ ಗೋಡೆ ಕಟ್ಟಿದ್ದಾರೆ. ಮಹದಾಯಿ ನೀರನ್ನು ಕರ್ನಾಟಕಕ್ಕೆ ತರುವ ಕಾಲುವೆಗೆ ಗೋಡೆ ಕಟ್ಟಿರುವುದೇ ದೊಡ್ಡ ಸಾಧನೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy