ಗುಬ್ಬಿ : ಭಾರತ ದೇಶದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಪ್ರತಿಕವಾಗಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಣೆ ಮಾಡಲಾಗುತ್ತದೆ. ಕೈಮಗ್ಗವು ದೇಶದ ಮಹಿಳೆಯರಿಗೆ ಪ್ರಮುಖ ಜೀವನೋಪಾಯದ ಮೂಲವಾಗಿದೆ. ಇದು ದೇಶದ ಕೈಮಗ್ಗ ನೇಕಾರರನ್ನು ಗೌರವಿಸುವ ದಿನವೂ ಹೌದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ತುಮಕೂರು ಹಾಗೂ ರೇಷ್ಮೆ ಕೈಮಗ್ಗ ನೇಕಾರರ ಸಹಕಾರ ಸಂಘ ನಿಯಮಿತ ಕಲ್ಲೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ಕೈಮಗ್ಗ ಸಪ್ತಾಹ ಆಚರಣೆ ಉದ್ಘಾಟನೆ ಮಾಡಿ ನಂತರ ಮಾತನಾಡಿದ ಅವರು, 2015 ರಿಂದ ನಾವು ನೇಕಾರರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ನಮ್ಮ ನೇಕಾರರನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಆಚರಣೆ ಮಾಡುತ್ತಾ ಬಂದಿದೆ. ಸರ್ಕಾರ ಕೈಮಗ್ಗದ ನಾಯಕರರಿಗೆ ಪ್ರತಿ ವರ್ಷ ಎರಡು ಸಾವಿರ ಸಹಾಯಧನ ವನ್ನು ನಿಗದಿ ಮಾಡಿದ್ದು ಈಗ ಸರ್ಕಾರ ನೇಕಾರರ ಕುಟುಂಬಕ್ಕೆ ಪ್ರತಿ ವರ್ಷ 5000ಗಳನ್ನು ಸಹಾಯಧನವನ್ನಾಗಿ ನೀಡುತ್ತಿದೆ. ವಸತಿ ಹೀನರಿಗೆ ವಸತಿ ಸೌಲಭ್ಯ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ನೀಡುತ್ತದೆ ಇದರ ಸೌಲಭ್ಯಗಳನ್ನು ನೇಕಾರರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕೈ ಮಗ್ಗ ಮತ್ತು ಜವಳಿ ಇಲಾಖೆ ಯ ಉಪ ನಿರ್ದೇಶಕರಾದ ಸುಮಲತಾ ಮಾತನಾಡಿ,ಕಲ್ಲೂರು ಗ್ರಾಮದಲ್ಲಿ ಹೆಚ್ಚಿನ ನೇಕಾರರು ಇದ್ದು ಇಲ್ಲಿ ನೇಕಾರರು ತಯಾರು ಮಾಡುವ ಬೆಟ್ಟೆಗಳನ್ನು ರಾಜ್ಯದ ಮೂಲೆಮೂಲೆಗಳಿಂದ ಬಂದು ಬೆಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇನ್ನು ಮುಂದೆ ಕಲ್ಲೂರು ಹೆಚ್ಚಿನ ರೀತಿಯಲ್ಲಿ ನೇಕಾರಿಕೆಯಲ್ಲಿ ಅಭಿವೃದ್ಧಿ ಹೊಂದುವ ದೃಷ್ಟಿಯಿಂದ ಕಲ್ಲೂರು ಗ್ರಾಮದಲ್ಲಿ ಸುಮಾರು 200ಲಕ್ಷ ವೆಚ್ಚದಲ್ಲಿ ಕೈಮಗ್ಗ ಕ್ಲಾಸ್ಟರ್ ಪ್ರಾರಂಭಕ್ಕೆ ಅನುಮೋದನೆ ತೋರಿತ್ತಿದ್ದು ಇದರಿಂದ ಸಾಕಷ್ಟು ನೇಕಾರರಿಗೆ ಅನುಕೂಲ ವಾಗಲಿದೆ ಎಂದರು.
ನೇಕಾರರ ಅಭಿವೃದ್ಧಿ ಗೆ ಸರ್ಕಾರ ಹಲವು ಯೋಜನೆ ರೂಪಿಸಿದ್ದು.ವಿದ್ಯುತ್ ಮಗ್ಗ ಖರೀದಿ ಗೆ ಸಹಾಯಧನ.ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಗೆ ಸಹಾಯಧನ.ವರ್ಕ್ ಶೆಡ್ ನಿರ್ಮಾಣ ಹೀಗೆ ಹಲವು ಬಗೆಯ ಯೋಜನೆಗಳು ಮತ್ತು ನೇಕಾರರ ಮಕ್ಕಳ ವಿದ್ಯಾಭ್ಯಾಸ ಕ್ಕೆ ವಿದ್ಯಾಸಿರಿಯಂತಹ ಉಪಯೋಗಗಳನ್ನು ನೀಡಿದ್ದು ನೇಕಾರರು ಯೋಜನೆಯ ಸದುಪಯೋಗ ಪಡೆದುಕೊಂಡು ಸಾಕಷ್ಟು ಅಭಿವೃದ್ಧಿ ಯತ್ತ ಸಾಗಬೇಕು ಎಂದು ಸಲಹೆ ನೀಡಿದರು ಎಂದರು.
ನಬಾರ್ಡ್ ಬ್ಯಾಂಕಿನ ಎ.ಜಿ ಎಂ. ಕೀರ್ತಿಪ್ರಭ ಮಾತನಾಡಿ, ನಮ್ಮ ಇಲಾಖೆಯಿಂದ ಸಿಗುವಂತಹ ಎಲ್ಲಾ ತರಹದ ಸಾಲ ಸೌಲಭ್ಯ ಹಾಗೂ ತರಬೇತಿಗಳನ್ನು ನೀಡುತ್ತೇವೆ. ಇದರಿಂದ ನೇಕಾರರು ಸಹಾಯಧನವನ್ನು ಪಡೆದು ಇನ್ನೂ ಹೆಚ್ಚಿನ ಒತ್ತು ನೀಡಲು ಸಹಕಾರ ಆಗುತ್ತದೆ. ಬ್ಯಾಂಕಿನಲ್ಲಿ ಸಾಲಗಳು ನೇಕಾರರಿಗೆ ಸಿಗುತ್ತಿಲ್ಲ ಎಂಬ ದೂರುಗಳು ಸಾಕಷ್ಟು ಕೇಳಿಬರುತ್ತಿದ್ದು ಇದಕ್ಕೆ ಮೂಲ ಕಾರಣ ನೇಕಾರರು ಪಡೆದ ಸಾಲ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಮರುಪಾವತಿ ಮಾಡದೆ ಇದ್ದ ಸಮಯದಲ್ಲಿ ಬೇರೆ ನೇಕಾರರಿಗೂ ಸಹ ಬ್ಯಾಂಕ್ ಅಧಿಕಾರಿಗಳು ಸಾಲ ನೀಡಲು ಹಿಂದೇಟು ಹಾಕುತ್ತಾರೆ .ಇದರ ಬಗ್ಗೆ ಸಂಬಂಧಪಟ್ಟ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾಲ ಸೌಲಭ್ಯಗಳು ತ್ವರಿತವಾಗಿ ಸಿಗುವಂತೆ ಮಾಡಲು ನಾವು ಕ್ರಮವಹಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಹಲವು ವರ್ಷಗಳಿಂದ ನೇಕಾರರಿಗೆ ವೃತ್ತಿ ಮಾಡುತ್ತೀರುವ ನೇಕಾರರನ್ನು ಸನ್ಮಾನಿಸಲಾಯಿತು. ಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎಂ. ಸುಮಿತ್ರ ಶಿವಯ್ಯ, ಉಪಾಧ್ಯಕ್ಷರಾದ ನಂಜಮ್ಮ, ಕೈಮಗ್ಗ ಸಂಘದ ಅಧ್ಯಕ್ಷ ಕೆ. ಎಂ. ಮೋಹನ್ ಕುಮಾರ್, ದೇವಾಂಗ ಸೊಸೈಟಿಯ ಅಧ್ಯಕ್ಷರಾದ ಕೆ.ಎಸ್.ಲಿಂಗಣ್ಣ, ಪರಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಹನುಮಯ್ಯ, ಹಾಗೂ ಕೈಮಗ್ಗ ನೇಕಾರರು ಹಾಗೂ ಇನ್ನಿ ಹಾಜರಿದ್ದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz