ಚಾಮರಾಜನಗರ: ಧಾರ್ಮಿಕ ಕ್ಷೇತ್ರ ಮಲೆ ಮಹದೇಶ್ವರಬೆಟ್ಟದ ಮುಖ್ಯ ರಸ್ತೆಯ ಅಭಿವೃದ್ಧಿಗೆ ಕೊನೆಗೂ ಸರ್ಕಾರ ಮನಸ್ಸು ಮಾಡಿದೆ.
ವರ್ಷದಲ್ಲಿ 30 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ಕ್ಷೇತ್ರವಾದ ಮಲೆ ಮಹದೇಶ್ವರಬೆಟ್ಟದ ರಸ್ತೆ ಅವ್ಯವಸ್ಥೆಯಿಂದ ಕೂಡಿತ್ತು. ಈ ರಸ್ತೆ ಅವ್ಯವಸ್ಥೆ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು.
ಫೆಬ್ರವರಿ 15ರಂದು ಮಹದೇಶ್ವರಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಈ ನೆಪದಲ್ಲಾದರೂ ಈಗ ರಸ್ತೆಗೆ ದುರಸ್ತಿ ಭಾಗ್ಯ ದೊರಕಿದೆ.
ಹನೂರಿನಿಂದ ಮಲೆ ಮಹದೇಶ್ವರಬೆಟ್ಟದವರೆಗಿನ 39.5 ಕಿ.ಮೀ. ಉದ್ದಕ್ಕೂ 51.5 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ಡಾಂಬರೀಕರಣ ಆಗಲಿದೆ. ಈಗಾಗಲೇ 23 ಕಿ.ಮೀ. ರಸ್ತೆಗೆ ಡಾಂಬಾರು ಹಾಕುವ ಕಾಮಗಾರಿ ಭರದಿಂದ ಸಾಗಿದೆ.ಬೆಟ್ಟದ ರಸ್ತೆ ಸರಿಪಡಿಸಬೇಕಾದರೆ ಸಚಿವ ಸಂಪುಟ ಸಭೆಯೇ ನಡೆಯಬೇಕಾಯ್ತು ಎನ್ನುವ ಮಾತುಗಳು ಸದ್ಯ ಕೇಳಿ ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx