ತುಮಕೂರು: ತುರುವೇಕೆರೆ ವಿಧಾನಸಭಾ ಶಾಸಕ ಮಸಾಲ ಜಯರಾಮ್ ಅವರು ತಮ್ಮ 54 ನೇ ಹುಟ್ಟು ಹಬ್ಬವನ್ನು ಬೆಂಬಲಿಗರು ಪಕ್ಷದ ಕಾರ್ಯಕರ್ತರು ಸಮ್ಮುಖದಲ್ಲಿ ಆಚರಿಸಿದರು.
ತಮ್ಮ ಹುಟ್ಟೂರಿನಿಂದ ಕುಟುಂಬ ಸಮೇತ ಪ್ರಮುಖ, ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ತುರುವೇಕೆರೆಗೆ ಸಾಗುವ ಮಾರ್ಗ ಮಧ್ಯೆ ತಮ್ಮ ಬೆಂಬಲಿಗರು ಶುಭಾಶಯ ಕೋರಿದರು.
ತುರುವೇಕೆರೆ ಪಟ್ಟಣದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಬಾಣಸಂದ್ರ ವೃತದಲ್ಲಿ ಸೇರಿ ಶಾಸಕರಿಗೆ ಜೈಕಾರ ಕೂಗುತ್ತ ,ಪಟಾಕಿ ,ಸಿಡಿಸಿ ಹೂಮಾಲೆ ಹಾಕಿ ಸಂಭ್ರಮಿಸಿದರು .
ಬಳಿಕ ಶಾಸಕ ಮಸಾಲ ಜಯರಾಮ್ ತಮ್ಮ ,ತೋಟದ ಮನೆಯಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿಕೊಂಡರು. ಹುಟ್ಟು ಹಬ್ಬದ ಪ್ರಯುಕ್ತ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ವರದಿ: ಸುರೇಶ್ ಬಾಬು .ಎಂ.ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5