ಕೊಪ್ಪಳ: ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದರ ಬಗ್ಗೆ ಕೆಲವು ಸ್ವಾಮೀಜಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಇದೀಗ ಮೊಟ್ಟೆ ಕೊಡಬೇಕೋ? ಬೇಡವೋ ಎನ್ನುವ ಗೊಂದಲ ಸೃಷ್ಟಿಯಾಗಿದೆ. ಈ ನಡುವೆ ವಿದ್ಯಾರ್ಥಿನಿಯೋರ್ವಳು ಸ್ವಾಮೀಜಿಗಳನ್ನು ತರಾಟೆಗೆತ್ತಿಕೊಂಡಿದ್ದಾಳೆ.
ನಮಗೆ ಸರ್ಕಾರ ಮೊಟ್ಟೆ ಮತ್ತು ಬಾಳೆ ಹಣ್ಣು ಕೊಡಬೇಕು. ಮೊಟ್ಟೆಗೆ ನೀವು ವಿರೋಧ ಮಾಡುವುದಾದರೆ, ನಾವು ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಎಂದು ಎಚ್ಚರಿಕೆ ನೀಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಲ ವೈರಲ್ ಆಗಿದೆ.
ವಿದ್ಯಾರ್ಥಿ ಸಂಘಟನೆ ಎಸ್ ಎಫ್ ಐ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿ ಮಾತನಾಡಿದ್ದು, ಮೊಟ್ಟೆ ನೀಡುವುದಕ್ಕೆ ನೀವ್ಯಾಕೆ ವಿರೋಧ ಮಾಡ್ತೀರಿ? ನಾವು ಒಂದಲ್ಲ ಎರಡು ಮೊಟ್ಟೆ ತಿನ್ನುತ್ತೇವೆ. ನೀವ್ಯಾರು ಕೇಳೋದಕ್ಕೆ ಎಂದು ತರಾಟೆಗೆತ್ತಿಕೊಂಡಿದ್ದಾಳೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700