ಮನೆಯಲ್ಲಿ ಮಟನ್ ಅಡುಗೆ ಮಾಡುವ ವಿಷಯದಲ್ಲಿ ಆರಂಭವಾದ ಗಂಡ-ಹೆಂಡತಿ ಜಗಳ ಪಕ್ಕದ ಮನೆಯವನ ಕೊಲೆಯಲ್ಲಿ ಅಂತ್ಯವಾದ ವಿಚಿತ್ರ ಘಟನೆ ಮಧ್ಯಪ್ರದೇಶದ ರಾಜಧಾನಿ ಭೂಪಾಲ್ ನಲ್ಲಿ ನಡೆದಿದೆ.
ಮಂಗಳವಾರ ಮಾಂಸಹಾರ ಅಡುಗೆ ಮಾಡಬಾರದು ಎಂದು ಪತ್ನಿ ವಾದ ಮಾಡುತ್ತಿದ್ದರೆ, ಗಂಡ ಮಟನ್ ಸಾರು ಮಾಡು ಎಂದು ಪಟ್ಟು ಹಿಡಿದಿದ್ದ. ಈ ವಿಷಯದಲ್ಲಿ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿದ್ದರಿಂದ ನೆರೆಮನೆಯಾದ ಜಗಳ ಬಿಡಿಸಲು ಬಂದಿದ್ದಾನೆ. ಆದರೆ ಕೊನೆಗೆ ಆತನೇ ಬಲಿಯಾಗಿದ್ದಾನೆ.
ಹಿಂದೂ ಸಂಪ್ರದಾಯದ ಪ್ರಕಾರ ಹಲವರು ಮಂಗಳವಾರ ಮಂಗಳಕರ ದಿನವೆಂದು ಪರಿಗಣಿಸುತ್ತಾರೆ. ಹೀಗಾಗಿ ಕೆಲವರು ಅಂದು ಮಾಂಸಾಹಾರವನ್ನು ಸೇವಿಸುವುದಿಲ್ಲ. ಈ ಹಿನ್ನೆಲೆ ಮಹಿಳೆ ತನ್ನ ಪತಿಗೆ ಮಾಂಸಾಹಾರ ಮಾಡುವುದು ಬೇಡ ಎಂದು ವಾದಿಸಿದ್ದಾಳೆ. ಇದರಿಂದ ಕೋಪಗೊಂಡ ಪಪ್ಪು ಜಗಳ ಪ್ರಾರಂಭಿಸಿದ್ದಾನೆ.
ಗಲಾಟೆ ಕೇಳಿದ ಪಕ್ಕದ ಮನೆಯ ಬಿಲ್ಲು ಎಂಬಾತ ಜಗಳವನ್ನು ಬಿಡಿಸಲು ಹೋಗಿ, ಸಮಸ್ಯೆಯನ್ನು ಇತ್ಯರ್ಥವೇನೋ ಮಾಡಿ ವಾಪಾಸ್ ತನ್ನ ಮನೆಗೆ ಬಂದಿದ್ದಾನೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಪಪ್ಪು ಬಿಲ್ಲುವಿನ ಮನೆಗೆ ಹೋಗಿ ಬಿಲ್ಲುವನ್ನುಹೊಡೆದು ಕೊಂದಿದ್ದಾನೆ.
ಬಳಿಕ ಪೊಲೀಸರು ಆರೋಪಿಯ ಪತ್ನಿಯ ಹೇಳಿಕೆಯ ಆಧಾರದ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿ ಪಪ್ಪುವನ್ನು ಪೊಲೀಸರು ಬಂಧಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy