ಹೆಚ್.ಡಿ.ಕೋಟೆ: ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರ ಹುಟ್ಟುಹಬ್ಬವನ್ನು ಸಮಾಜ ಸೇವಾ ಕಾರ್ಯಗಳ ಮೂಲಕ ಮುಖಂಡರು, ಕಾರ್ಯಕರ್ತರು ಅಭಿಮಾನಿಗಳು ಆಚರಿಸಿದ್ದರು.
ಪಟ್ಟಣದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ, ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ ಮಾಡಿ, ಚಿತ್ತಧಾಮದಲ್ಲಿ ವಿಶೇಷ ಚೇತನರಿಗೆ ಊಟದ ವ್ಯವಸ್ಥೆ ಸೇರಿದಂತೆ ಅನೇಕಕಾರ್ಯಕ್ರಮಗಳನ್ನು ಕಾರ್ಯಕರ್ತರು, ಮುಖಂಡರು ಒಟ್ಟಾಗಿ ಆಚರಿಸಿದ್ದರು.
ಹುಟ್ಟುಹಬ್ಬ ಆಚರಿಸಿ ಮಾತನಾಡಿದ ಜಯಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಸತೀಶ್ ಗೌಡ, ಪ್ರತಿ ವರ್ಷ ಅನಿಲ್ ಚಿಕ್ಕಮಾದು ಸಾಹೇಬರ ಹುಟ್ಟುಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದು, ಈ ವರ್ಷ ಯಾವುದೇ ವಿಜೃಂಭಣೆ ಆಚರಣೆ ಬೇಡ ಎಂದು ಶಾಸಕರ ಸೂಚನೆಯಂತೆ ಜನರಿಗೆ ಅನುಕೂಲ ಆಗುವಂತೆ ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಚಿಕ್ಕಮಾದು ಅಭಿಮಾನಿ ಬಳಗದ ಅಧ್ಯಕ್ಷ ಜಿನಹಳ್ಳಿ ರಾಜನಾಯಕ, ಮಾತನಾಡಿ, ಎರಡು ತಾಲೂಕಿನ ಅಭಿಮಾನಿಗಳು ಕಾರ್ಯಕರ್ತರು, ಮುಖಂಡರು ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದು, ಮೊದಲಿನಿಂದಲೂ ಸಹ ಅವರ ಹುಟ್ಟು ಹಬ್ಬ ಅಂದರೆ ಒಂದು ವಿಶೇಷ ರೀತಿಯಲ್ಲಿ ಶಾಲೆಗಳಲ್ಲಿ ಹಾಡಿಗಳಲ್ಲಿ ಆಚರಣೆ ಮಾಡುತ್ತಿದ್ದರು. ಈಗ ವಿಜೃಂಭಣೆ ಆಚರಣೆ ಬೇಡ ಎಂದು ಕಷ್ಟದಲ್ಲಿರುವ ಜನರಿಗೆ ನೆರವಾಗುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಇಂದು ಆಚರಣೆ ಮಾಡಲಾಯಿತು ಎಂದರು.
ಸಿಂಡಿಕೇಟ್ ಸದಸ್ಯ ಕ್ಯಾತನಹಳ್ಳಿ ನಾಗರಾಜು ಮಾತನಾಡಿ, ಶಾಸಕರು ವಾಟ್ಸಾಪ್ ಮೂಲಕ ಕಾರ್ಯಕರ್ತರಿಗೆ ಮುಖಂಡರಿಗೆ ನನ್ನ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಬೇಡಿ ಎಂದು ತಿಳಿಸಿದರು. ಆದರೂ ಸಹ ಅವರ ಮೇಲೆ ಪ್ರೀತಿ ಅಭಿಮಾನ ಇಟ್ಟುಕೊಂಡಿದ್ದೇವೆ. ಹಾಗಾಗಿ ಈ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಹುಟ್ಟುಹಬ್ಬ ಆಚರಣೆ ಮಾಡಿದ್ದೇವೆ ಎಂದರು.
ಚಿಕ್ಕಮಾದು ಅಭಿಮಾನಿ ಬಳಗದ ಅಧ್ಯಕ್ಷ ಜಿನಹಳ್ಳಿ ರಾಜನಾಯಕ, ಮೈವಿವಿ ಸಿಂಡಿಕೇಟ್ ಸದಸ್ಯ ಕ್ಯಾತನಹಳ್ಳಿ ನಾಗರಾಜು, ಜಯಕರ್ನಾಟಕ ಸಂಘ ಟನೆಯ ರಾಜ್ಯ ಉಪಾಧ್ಯಕ್ಷ ಸತೀಶ್ ಗೌಡ, ನಂಜನಗೂಡು ಕಾಂಗ್ರೆಸ್ ಪಕ್ಷದ ಉಸ್ತುವಾರಿ ಹಿರೇಹಳ್ಳಿ ಸೋಮೇಶ್, ಮೈಮುಲ್ ನಿರ್ದೇಶಕ ಈರೇಗೌಡ, ನರಸೀಪುರ ರವಿ, ನಾಗನಹಳ್ಳಿ ಪ್ರದೀಪ, ಗಣೇಶಾಚಾರ್, ಕೆಂಡಗಣ್ಣೆಗೌಡ, ಸೌಮ್ಯ ಮಂಜುನಾಥ್, ಗಿರಿಗೌಡ, ಶಿವರಾಜ್, ಅಜರುದ್ದೀನ್, ಎಚ್ ಸಿ, ಮಂಜುನಾಥ್, ಶಿವಪ್ಪ ಕೋಟೆ, ಮಧು, ಮುಳಿಯೂರು ಆನಂದ್, ಶಿವ ಮಲ್ಲು, ಪರಶಿವಮೂರ್ತಿ, ವನಸಿರಿ ಉಮೇಶ್, ಬಿದರಹಳ್ಳಿ ರಾಜು, ಶ್ರೀನಿವಾಸ್, ಬಸವರಾಜ, ವೀರೇಗೌಡ, ಗಿರೀಶ, ಮಂಜು, ಶಿವಯ್ಯ, ಜಯ ಪ್ರಕಾಶ್, ಡಿ.ಸಿ.ಸ್ವಾಮಿ, ವಡ್ಡರಗುಡಿ ರವಿ, ಇದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4