ತುಮಕೂರು: ಶಿರಾ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾದಲಡುಕು ಗ್ರಾಮದಲ್ಲಿ ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ. ಗೌಡ ಅವರು ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಗ್ರಾಮದ ಕಾರ್ಯಕರ್ತರು ಹಾಗೂ ಮುಖಂಡರುಗಳಿಗೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಬಿಜೆಪಿ ಸದಸ್ಯತ್ವ ನೋಂದಣಿಯಲ್ಲಿ ಪಾಲ್ಗೊಂಡು ಅತಿ ಹೆಚ್ಚು ನೊಂದಣಿ ಮಾಡಿಸುವಂತೆ, ಗ್ರಾಮದ ಯುವಕರಿಗೆ ಶಕ್ತಿ ತುಂಬಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಚಿಕ್ಕಣ್ಣನವರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ನಾಗರಾಜ್, ಮಹಿಳಾ ಕಾರ್ಯಕರ್ತೆ ಅಂಬುಜಮ್ಮ, ಪೂಜಾರ್ ಚಿದಾನಂದ್, ನಾಗರಾಜಪ್ಪ, ರಂಗಾಪುರ ನಾಗರಾಜ್, ಹಾಲು ಒಕ್ಕೂಟದ ಅಧ್ಯಕ್ಷರಾದ ನಗರ ಪ್ರಧಾನ ಕಾರ್ಯದರ್ಶಿ ನಟರಾಜ್ ಸಂತೆಪೇಟೆ, ಬಿಜೆಪಿ ಚಂದ್ರಪ್ಪ, ಹೊಸಹಳ್ಳಿ ಸಿದ್ದಲಿಂಗಪ್ಪ, ನಾದೂರ್ ಕುಮಾರ್, ಕಾಟನಹಳ್ಳಿ ಭಾಸ್ಕರ್, ನಿವೃತ್ತ ದೈಹಿಕ ಶಿಕ್ಷಕರಾದ ಗೋಪಿ ಕುಂಟೆ ಕುಮಾರ್ ಮಾಷ್ಟ್ರು, ಕ್ಯಾದಿಗುಂಟೆ ರಾಮಕೃಷ್ಣ, ಮಂಜು ಮಾಸ್ಟರ್, ಗೋಪಿಕುಂಟೆ ಜಿ.ಜೆ ಮೂರ್ತಿ, ಹೊಸಹಳ್ಳಿ ಶಿವಣ್ಣ, ನಾಗರಾಜಪ್ಪ, ಯುವ ಮುಖಂಡರಾದ ಹರೀಶ್, ರಂಗನಾಥ್, ಸುತ್ತಮುತ್ತಲ ಗ್ರಾಮದ ಮುಖಂಡರು ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296