ತುಮಕೂರು: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಮಕೂರಿನ ಹಿಂದೂಪುರ ಮಾರ್ಗದ ಸೇತುವೆ ಜಲಾವೃತವಾಗಿದ್ದು, ಹಿಂದೂಪುರದಿಂದ ವೆಂಕಟಾಪುರ ಮಾರ್ಗವಾಗಿ ಪಾವಗಡಕ್ಕೆ ಬರುತ್ತಿದ್ದ ಬಸ್ಸೊಂದು ನೀರಿನ ಮಧ್ಯೆ ಸಿಲುಕಿದ ಘಟನೆ ನಡೆಯಿತು.
ಸೇತುವೆ ಮೇಲೆ ಬಂದಿದ್ದ ಬಸ್ ನೀರಿನ ವೇಗದಿಂದಾಗಿ ಮುಂದಕ್ಕೆ ಚಲಿಸಲು ಸಾಧ್ಯವಾಗದೇ ಸ್ಥಳದಲ್ಲೇ ನಿಂತಿದೆ. ಈ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ತೀವ್ರವಾಗಿ ಆತಂಕಗೊಂಡರು.
ತಕ್ಷಣವೇ ವೆಂಕಟಾಪುರ ಗ್ರಾಮಸ್ಥರು ಹಗ್ಗದ ಸಹಾಯದಿಂದ ಸೇತುವೆ ಮೇಲೆ ನಿಂತ ಬಸ್ನಿಂದ ಪ್ರಯಾಣಿಕರ ರಕ್ಷಣೆ ಮಾಡಿದ್ದಾರೆ.
ನೀರಿನ ನಡುವೆ ಸಿಲುಕಿದ್ದ ಬಸ್ಸನ್ನು ಮತ್ತೊಂದು ಖಾಸಗಿ ಬಸ್ ಸಹಾಯದಿಂದ ಸೇತುವೆ ಮೇಲಿದ್ದ ಬಸ್ ಅನ್ನು ಹೊರಕ್ಕೆ ತೆಗೆಯಲಾಗಿದೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz