ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕು ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿಗೆ ಅನುಷ್ಠಾನಗೊಳಿಸಲಾಗುತ್ತಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಯೋಜನೆಯಡಿ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದೆ.
ನರೇಗಾ ಯೋಜನೆಯಡಿ ತೆಂಗು, ಮಾವು, ಸಪೋಟ, ಬಾಳೆ(ಅಂಗಾಂಶ), ಪಪ್ಪಾಯ, ಸೀಬೆ, ನೇರಳೆ, ನಿಂಬೆ, ಹಲಸು, ಕಾಳು ಮೆಣಸು, ಜಾಯಿಕಾಯಿ, ಏಲಕ್ಕಿ, ಹುಣಸೆ, ಗೇರು ಬೆಳೆ, ಕೋಕೋ, ತಾಳೆ ಬೆಳೆ, ಗುಲಾಬಿ ಹಾಗೂ ಇತರೆ ಎಲ್ಲಾ ತೋಟಗಾರಿಕೆ ಬೆಳೆಗಳನ್ನು (ಅಡಿಕೆ ಹೊರತುಪಡಿಸಿ) ರೈತರ ಜಮೀನಿನಲ್ಲಿ ಪ್ರದೇಶ ವಿಸ್ತರಣೆ ಕೈಗೊಳ್ಳಬಹುದಾಗಿದೆ.
ಈ ಯೋಜನೆಯಡಿ ಸ್ವ–ಸಹಾಯ ಸಂಘಗಳ ಪಾಲ್ಗೊಳ್ಳುವಿಕೆಯೊಂದಿಗೆ ಮಿಶ್ರ ಬೆಳೆ ಪದ್ಧತಿಯಲ್ಲಿ ಕಾಳುಮೆಣಸು, ಜಾಯಿಕಾಯಿ, ಲವಂಗ, ದಾಲ್ಮೀನಿ ಸರ್ವಸಾಂಬಾರ, ಎಲಕ್ಕಿ, ಇತರೆ ಸಾಂಬಾರು ಬೆಳೆ ಹಾಗೂ ಬೆಟ್ಟದ ನೆಲ್ಲಿ, ಬಾರೆ, ಅಂಜೂರ, ಕವಳಿ ಹಣ್ಣು, ಪ್ಯಾಶಾನ್ ಹಣ್ಣು, ನಕ್ಷತ್ರ ಹಣ್ಣು, ಹಲಸು, ನೇರಳೆ, ಬೆಣ್ಣೆ ಹಣ್ಣು, ಡ್ರಾಗನ್ ಹಣ್ಣು, ರಾಮ್ ಬೂಟನ್, ಪಾಲ್ಸ, ಸೀತಾಫಲ, ಅಮಟೆಕಾಯಿ, ಪನ್ನೇರಳೆ, ಮ್ಯಾಂಗೋಸ್ಟೀನ್, ದುರಿಯನ್, ಹುಣಸೆ, ಕಿರು ನೆಲ್ಲಿ, ಬೇಲದ ಹಣ್ಣು ಸೇರಿದಂತೆ ಇತರೆ ಅಪ್ರಧಾನ ಹಣ್ಣಿನ ಬೆಳೆಗಳನ್ನು ಗುಚ್ಛ ಗ್ರಾಮಗಳಲ್ಲಿ ಅಭಿವೃದ್ಧಿಯನ್ನು ಕೈಗೊಳ್ಳಬಹುದಾಗಿದೆ.
ಸೌಲಭ್ಯ ಪಡೆಯಲಿಚ್ಛಿಸುವ ರೈತರು ಅರ್ಜಿ ಸಲ್ಲಿಸಬಹುದಾಗಿದೆ. ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಚಾಲ್ತಿ ಪಹಣಿ, ಆಧಾರ್ ಕಾರ್ಡ್, ಕೂಲಿ ಕಾರ್ಡ್(Job Card), ಸಣ್ಣ ಹಿಡುವಳಿ ಪತ್ರ, ಬಿ.ಪಿ.ಎಲ್.ಕಾರ್ಡ್, ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಮಾತ್ರ), ಭಾವ ಚಿತ್ರ ಲಗತ್ತಿಸಬೇಕು.
ಅರ್ಜಿಯನ್ನು ಗುಬ್ಬಿ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ(ಜಿಪಂ) ಅಥವಾ ಸಂಬAಧಿಸಿದ ಹೋಬಳಿ ಸಹಾಯಕ ತೋಟಗಾರಿಕೆ ಅಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರ ಅಥವಾ ಗುಬ್ಬಿ ಹಾಗೂ ಹಾಗಲವಾಡಿ-ಮೊ.ಸಂ. 9901003372; ಕಡಬ ಮತ್ತು ನಿಟ್ಟೂರು–9535376687, ಚೇಳೂರು–6362409080 ಹಾಗೂ ಸಿ.ಎಸ್.ಪುರ–7259243329ನ್ನು ಸಂಪರ್ಕಿಸಬೇಕೆಂದು ಗುಬ್ಬಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————