ಬೆಂಗಳೂರು: ಹ್ಯೂಮನ್ ಮೆಟಾನ್ಯುಮೋ ವೈರಸ್ (HMPV) ಬಗ್ಗೆ ಆತಂಕ ಬೇಡ, ಸಹಜ ಮುಂಜಾಗ್ರತೆ ವಹಿಸಿದರೆ ಸಾಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ರಾಜಧಾನಿ ಬೆಂಗಳೂರಿನಲ್ಲಿ 2 ಎಚ್ ಎಂಪಿವಿ ಕೇಸ್ ಪತ್ತೆಯಾಗಿದೆ. ಈ ಹಿನ್ನೆಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದು, ಬಳಿ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 8 ತಿಂಗಳು, 3 ತಿಂಗಳ ಇಬ್ಬರು ಮಕ್ಕಳಲ್ಲಿ ಕಾಯಿಲೆ ದೃಢಪಟ್ಟಿದೆ. ಸದ್ಯ ಇಬ್ಬರ ಆರೋಗ್ಯ ಸುಧಾರಿಸಿದೆ. ಆತಂಕ ಪಡುವ ಸ್ಥಿತಿ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಎಚ್‌ಎಂಪಿವಿ ಈಗಾಗಲೇ ಹಳೇಯ ವೈರಸ್ ಆಗಿದೆ. 2001 ರಲ್ಲೆ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಕೊರೊನಾದಷ್ಟು, ಮಾಧ್ಯಮಗಳಲ್ಲಿ ತೋರಿಸುತ್ತಿರುವಷ್ಟು ಸೀರಿಯಸ್ ಅಲ್ಲ. ಸೋಂಕಿತ ಮಕ್ಕಳಿಗೆ ಏನು ಆಗಿಲ್ಲ. ಚೀನಾದಲ್ಲಿ ಹರಡಿರುವ ವೈರಸ್ ತಳಿಗೂ, ಬೆಂಗಳೂರಿನಲ್ಲಿ ಹರಡಿರುವ ತಳಿಯೂ ಸಂಬಂಧ ಇಲ್ಲ ಎನಿಸುತ್ತಿದೆ. ಈ ಬಗ್ಗೆ ಪತ್ತೆಗೆ ಅಗತ್ಯ ಕ್ರಮ ಎಲ್ಲಾ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx