ತುಮಕೂರು: ಬಿಪಿಎಲ್ ಕಾರ್ಡ್ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪ್ರತಿಕ್ರಿಯಿಸಿದ್ದು, ಬಿಪಿಎಲ್ ಕಾರ್ಡ್ ಅರ್ಹರು ಯಾರೂ ಆತಂಕ ಪಡಬೇಕಿಲ್ಲ ಎಂದು ಧೈರ್ಯ ತುಂಬಿದ್ದಾರೆ.
ಕಾರ್ಡ್ ಅನರ್ಹಕ್ಕೆ ಮೊದಲು ಕಂಡಿಷನ್ ಏನೇನು ಅಂತ ತಿಳಿದುಕೊಳ್ಳಬೇಕು, ಗೌರ್ನಮೆಂಟ್ ಎಂಪ್ಲಾಯ್ ಇದ್ದಾರೆ, ಅವರ ಫ್ಯಾಮಿಲಿ ಇನ್ ಕಂ 1.2 ಲಕ್ಷಕ್ಕಿಂತ ಹೆಚ್ಚಿದೆ. ಆದಾಯ ತೆರಿಗೆ ಪಾವತಿದಾರರು ಯಾರಿದ್ದಾರೆ. ಅಂತವರು ನಮ್ಮ ಜಿಲ್ಲೆಯಲ್ಲಿ 24 ಸಾವಿರ ಜನ ಅಂತ ಆಯ್ಕೆ ಮಾಡಿದ್ದೇವೆ. ಈ ಕಂಡಿಶನ್ ಒಳಗೆ ಇರುವವರನ್ನ, ಪುಡ್ ಇನ್ಸ್ ಪೆಕ್ಟರ್ ಮೂಲಕ ಚೆಕ್ ಮಾಡಿಸಿ. ಸ್ಥಳದಲ್ಲಿ ಹೋಗಿ ಚೆಕ್ ಮಾಡಿ, ಮಹಜರು ಮಾಡಿ, ನಂತರವೇ ವಜಾಗೊಳಿಸಲು ರಾಜ್ಯಕ್ಕೆ ಕಳಿಸುತ್ತೇವೆ ಎಂದು ತಿಳಿಸಿದರು.
ಈ ಬಗ್ಗೆ ಜನರಲ್ಲಿ ಆತಂಕ ಬೇಡ. ಯಾರು ಅರ್ಹರಿದ್ದಾರೆ ಅವರೆ ಖಂಡಿತ ತೊಂದರೆ ಆಗಲ್ಲ. ಅಂತಹವರ ಹೆಸರು ತೆಗಿಸಲ್ಲ. ಹಾಗೇನಾದ್ರೂ ಹಾಗಿದ್ರೆ ರಿಕ್ವೆಷ್ಟ ಕೊಡಿ. ತಕ್ಷಣ ಚೆಕ್ ಮಾಡಿ ಪುನಃ ಸರಿಪಡಿಸುತ್ತೇವೆ ಎಂದು ಅವರು ತಿಳಿಸಿದರು.
19 ಸಾವಿರ ಜನರ ಆದಾಯ 1.2 ಲಕ್ಷಕ್ಕಿಂತ ಹೆಚ್ಚಿದೆ. 4 ಸಾವಿರ ಜನ ಆದಾಯ ತೆರಿಗೆದಾರರಿದ್ದಾರೆ. 300 ಜನ ಗೌರ್ನಮೆಂಟ್ ಎಂಪ್ಲಾಯ್ ಬಳಿ ಬಿಎಲ್ ಕಾರ್ಡ್ ಇದೆ, ಎಂಬ ಮಾಹಿತಿಯಿದೆ. ಡೆಸ್ಕ್ ವರ್ಕ್ ತರ ನಾವು ಕೆಲಸ ಮಾಡಲ್ಲ, ಸ್ಥಳಕ್ಕೆ ಹೋಗಿ ಚೆಕ್ ಮಾಡಿಸಿ. ಪುಡ್ ಇನ್ಸೆಪೆಕ್ಟರ್, ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಚೆಕ್ ಮಾಡಿಸಿ. ಅದರಲ್ಲಿ ನೈಜ್ಯತೆಯಿದ್ದರೆ ಮಾತ್ರ ಕಾರ್ಡ್ ತೆಗೆಯಲಾಗುತ್ತದೆ ಎಂದು ಶುಭ ಕಲ್ಯಾಣ್ ತಿಳಿಸಿದರು.
ಮೂರ್ನಾಲ್ಕು ತಿಂಗಳಿಂದ ರೇಷನ್ ತೆಗೆದುಕೊಂಡಿರಲ್ಲ. ಆ ರೀತಿಯ ರೇಷನ್ ಕಾರ್ಡ್ ಅನ್ನು ಕೂಡ ಸಸ್ಪೆಂಡ್ ಮಾಡ್ತೀವಿ. ಈ ಕೆವೈಸಿ ಮಾಡದೆ ಇದ್ದರೆ ಕಾರ್ಡ್ ಸಸ್ಪೆಂಡ್ ಮಾಡ್ತೀವಿ. ಈ ತರಹದ ವಿಚಾರಗಳನ್ನ ಅರ್ಹ, ಅನರ್ಹ ಕಾರ್ಡ್ ಒಳಗೆ ತೆಗೆದುಕೊಂಡು ಬಂದು ಆತಂಕ ಮೂಡಿಸುವುದು ಬೇಡ. ವಜಾಗೊಂಡರೆ ಮನವಿ ಕೊಡಿ ಎಂದು ಅವರು ಮನವಿ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296